Muruga Mutt: ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯಿರಿ: ಮಠಾಧೀಶರಿಂದ ಧರಣಿ
ಮುರುಘಾರಾಜೇಂದ್ರ ಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಮುಂಭಾಗದಲ್ಲಿ ವಿವಿಧ ಮಠಾಧೀಶರು ಧರಣಿಯನ್ನು ಆರಂಭಿಸಿದ್ದಾರೆ.
ಚಿತ್ರದುರ್ಗ (ಡಿ.26): ಮುರುಘಾರಾಜೇಂದ್ರ ಮಠಕ್ಕೆ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಮುಂಭಾಗದಲ್ಲಿ ವಿವಿಧ ಮಠಾಧೀಶರು ಧರಣಿಯನ್ನು ಆರಂಭಿಸಿದ್ದಾರೆ.
ಮುರುಘಾ ಮಠದ ಉಸ್ತುವಾರಿ ಸ್ವಾಮೀಜಿಗಳಾದ ಬಸವಪ್ರಭು ಶ್ರೀಗಳ ನೇತೃತ್ವದಲ್ಲಿ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿವಿಧ ಮಠಾಧೀಶರಿಂದ ಧರಣಿ ಆರಂಭಿಸಲಾಗಿದೆ. ಅಥಣಿ ಮಠದ ಶಿವಬಸವ ಶ್ರೀ, ಹಾವೇರಿ ಮಠದ ಬಸವ ಶಾಂತಲಿಂಗ ಶ್ರೀ ಸೇರಿ ಹಲವರು ಭಾಗಿಯಾಗಿದ್ದಾರೆ. ಇದಕ್ಕೆ ಸಾರ್ವಜನಿಕರು ಕೂಡ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗವಹಿಸಿದ್ದಾರೆ. ಮಠಕ್ಕೆ ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯಲು ಒತ್ತಾಯ ಮಾಡಲಾಗುತ್ತಿದೆ.
ನಗರದ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ: ಬಸವ ಕೇಂದ್ರಗಳ ಮುಖ್ಯಸ್ಥರು, ಭಕ್ತರಿಂದ ಪ್ರತಿಭಟನೆ ಆರಂಭವಾಗಿದ್ದು. ಧೃಣಿಗೂ ಮುಂಚಿತವಾಗಿ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಧರಣಿ ಕುಳಿತ ಮಠಾಧೀಶರು ಸರ್ಕಾರದಿಂದ ಮಠಕ್ಕೆ ನಿಯೋಜನೆ ಮಾಡಲಾದ ಆಡಳಿತಾಧಿಕಾರಿ ನೇಮಕದ ಆದೇಶ ವಾಪಸ್ ಪಡೆಯುವಂತೆ ಘೋಷಣೆ ಕೂಗಿದರು. ಮಠಗಳ ಅಸ್ತಿತ್ವ, ಸ್ವಾಭಿಮಾನ, ಸ್ವಾತಂತ್ರ್ಯದ ಉಳಿವಿಗಾಗಿ ಹೋರಾಟ ಎಂದು ಘೋಷಣೆ ಕೂಗಿದರು.
Muruga Mutt: ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯದಿದ್ದರೆ ಡಿ.26ರಿಂದ ಧರಣಿ: ಬಸವಪ್ರಭು ಶ್ರೀ
ಮಠಾಧೀಶರ ರಕ್ಷಣೆಗೆ ಕಾನೂನು ರಚಿಸಿ:
ರಾಜ್ಯದಲ್ಲಿ ಮಠಾಧೀಶರ ರಕ್ಷಣೆ ಇಲ್ಲದಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಮಠಾಧೀಶರಾಗಲು ಯಾರೂ ಒಪ್ಪದ ಸ್ಥಿತಿ ಬರಲಿದೆ. ಪಿತೂರಿ ಮಾಡುವ ಜನರಿಂದ ಕಾನೂನು ದುರ್ಬಳಕೆ ಆಗುತ್ತಿದೆ. ಸಂವಿಧಾನಾತ್ಮಕವಾಗಿ ಜಾರಿಗೊಳಿಸಲಾದ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ) ಕಾನೂನನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಮಠಾಧೀಶರ ರಕ್ಷಣೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನು ಜಾರಿಗೊಳಿಸಬೇಕು ಎಂದು ಬಸವಪ್ರಭು ಶ್ರೀಗಳು ಆಗ್ರಹಿಸಿದರು.
ಡಿಸೆಂಬರ್ 20ರಂದು ನಡೆದಿದ್ದ ಸಭೆ: ಚಿತ್ರದುರ್ಗದ ಹಲವು ಶತಮಾನಗಳ ವರ್ಷ ಇತಿಹಾಸ ಹೊಂದಿರುವ ಮುರುಘಾ ಮಠಕ್ಕೆ ನೇಮಕ ಮಾಡಲಾಗಿರುವ ಆಡಳಿತಾಧಿಕಾರಿ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಡಿಸೆಂಬರ್ 20ರಂದು ಮುರುಘಾಮಠದಲ್ಲಿ ವಿವಿಧ ಮಠಗಳ 'ಮಠಾಧೀಶರ ಸಮಾಗಮ' ಸಭೆ ನಡೆಸಲಾಗಿತ್ತು. ಆದೇಶ ವಾಪಸ್ ಪಡೆದುಕೊಳ್ಳದಿದ್ದರೆ ಡಿ.26ರಂದು ಮಠಾಧೀಶರಿಂದ ಧರಣಿ ಮಾಡುವುದಾಗಿಯೂ ನಿರ್ಧಾರ ಮಾಡಿದ್ದರು. ಹೈಕೋರ್ಟ್ ನಿರ್ದೇಶನದಂತೆ ಮುರುಘಾಶ್ರೀ ಜಿಪಿಎ ನೀಡಿದ್ದಾರೆ. ಆದ್ದರಿಂದ ಸುಸೂತ್ರವಾಗಿ ಮುರುಘಾಮಠದ ಆಡಳಿತ ನಡೆಯುತ್ತಿದೆ. ಆದರೆ, ಆಡಳಿತಾಧಿಕಾರಿ ನೇಮಕದಿಂದ ಬರಸಿಡಿಲು ಬಡಿದಂತಾಗಿದ್ದು, ಆದೇಶ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದರು.
Murugha Mutt Administrator : ಮುರುಘಾಮಠ ಆಡಳಿತಾಧಿಕಾರಿ ನೇಮಕಕ್ಕೆ ಮಠಾಧೀಶರ ವಿರೋಧ
ಪ್ರತಿಭಟನೆಗೆ ಕೂಲಿ ಕೊಟ್ಟು ಜನರ ಕರೆತಂದರು: ಮುರುಘಾ ಮಠಕ್ಕೆ ನಿಯೋಜನೆ ಮಾಡಲಾದ ಆಡಳಿತಾಧಿಕಾರಿ ವಸ್ತ್ರದ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಮಠಾಧೀಶರು ಕೈಗೊಂಡ ಪ್ರತಿಭಟನೆಗೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಆಗಮಿಸಿದ್ದಾರೆ. ಇದರಿಂದ ಹೋರಾಟಕ್ಕೆ ಹಿನ್ನಡೆ ಉಂಟಾಗಬಹುದು ಎಂದು ನಿರೀಕ್ಷಿಸಿದ ಕೆಲವು ಸಂಘಟಕರು ಪ್ರತಿನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರನ್ನು ಬೆಳಗ್ಗೆಯಿಂದ ಸಂಜೆವರೆಗೆ ಧರಣಿ ಕೂರಲು ಕರೆತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಧರಣಿ ಕುಳಿತಿರುವ ಬಹುತೇಕ ಮಹಿಳೆಯರಿಗೆ ಸಂಜೆ ವೇಳೆಗೆ ಕೂಲಿಯನ್ನು ಕೊಡಲಾಗುತ್ತದೆ ಎಂದು ಕೆಲವು ಆರೋಪಿಸಿದ್ದಾರೆ.