ದಾವಣಗೆರೆ(ಜೂ.20): ಹೊಸ 12 ಪಾಸಿಟಿವ್‌ ಪ್ರಕರಣ ವರದಿಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ ಮತ್ತೆ 24ಕ್ಕೆ ಏರಿಕೆಯಾಗಿದೆ. ನಗರದಲ್ಲಷ್ಟೇ ಹರಡಿದ್ದ ಸೋಂಕು ಇದೀಗ ಗ್ರಾಮೀಣ ಭಾಗದಲ್ಲೂ ಪತ್ತೆಯಾಗಿರುವುದು ಆಡಳಿತ ಯಂತ್ರದ ಚಿಂತೆ ಹೆಚ್ಚಿಸಿದೆ.

ಜಿಲ್ಲೆಯ 28 ವರ್ಷದ ಮಹಿಳೆ (ಪಿ-8064), 18 ವರ್ಷದ ಯುವತಿ (8065), 20 ವರ್ಷದ ಯುವತಿ (8066), 22 ವರ್ಷದ ಮಹಿಳೆ (8067), 21 ವರ್ಷದ ಯುವತಿ (8068), 23 ವರ್ಷದ ಮಹಿಳೆ(8069)ಯರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಜಿಲ್ಲಾ ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಐದೂ ಜನರ ಸೋಂಕಿನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

ಇನ್ನು 12 ವರ್ಷದ ಬಾಲಕ(ಪಿ-8071), 60 ವರ್ಷದ ವೃದ್ಧೆ(8072), 24 ವರ್ಷದ ಮಹಿಳೆ(8073) ಈ ಮೂವರಿಗೂ ಪಿ-6159ರ ಸಂಪರ್ಕದಿಂದ ಸೋಂಕು ಬಂದಿದೆ. 48 ವರ್ಷದ ಮಹಿಳೆ(8074)ಗೆ ಪಿ-7576ರ ಸಂಪರ್ಕದಿಂದ, 65 ವರ್ಷದ ವೃದ್ಧ(8075)ನಿಗೆ ಪಿ-7778ರ ಸಂಪರ್ಕದಿಂದ ಸೋಂಕು ಬಂದಿದೆ. ನಗರದ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಶುಕ್ರವಾರ ಯಾರೂ ಬಿಡುಗಡೆಯಾಗಿಲ್ಲ.

ಸಂಡೂರು: 4 ತಿಂಗಳ ಮಗುವನ್ನೂ ಬಿಡದ ಕ್ರೂರಿ ಕೊರೋನಾ ವೈರಸ್‌..!

ಒಟ್ಟು 245 ಪಾಸಿಟಿವ್‌ ಪ್ರಕರಣ ಜಿಲ್ಲೆಯಲ್ಲಿ ಈವರೆಗೆ ವರದಿಯಾಗಿದ್ದು, 6 ಜನರು ಸೋಂಕಿಗೆ ಬಲಿಯಾಗಿದ್ದಾರೆ. 215 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದಿನ ಹೊಸ 12 ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸದ್ಯ 24 ಸಕ್ರಿಯ ಕೇಸ್‌ಗಳಾಗಿವೆ. ಸೋಂಕಿತರಿಗೆ ಜಿಲ್ಲಾ ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಕೇಂದ್ರದಲ್ಲಷ್ಟೇ ವರದಿಯಾಗುತ್ತಿದ್ದ ಕೊರೋನಾ ಪಾಸಿಟಿವ್‌ ಪ್ರಕರಣಗಳು ಇದೀಗ ತಾಲೂಕು, ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲೂ ವರದಿಯಾಗುತ್ತಿವೆ. ಗ್ರಾಮೀಣ ಜನತೆಯೂ ಮಾಸ್ಕ್‌, ಸ್ಯಾನಿಟೈಸರ್‌ ಕಡ್ಡಾಯವಾಗಿ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಡಳಿತ, ಜಿಪಂ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಮನವಿ ಮಾಡಿವೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"