ರೈತರು ಬೆಳೆಯದಿದ್ದರೆ ಆಹಾರ ಧಾನ್ಯಗಳ ಕೊರತೆ ಎದುರಿಸಬೇಕಾಗುತ್ತದೆ: ಶ್ರೀ

ರೈತರು ಆಹಾರ ಧಾನ್ಯಗಳನ್ನು ಬೆಳೆಯದಿದ್ದರೆ ದೇಶ ಮತ್ತು ರಾಜ್ಯ ಆಹಾರ ಧಾನ್ಯಗಳ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಅನ್ನದಾತ ಬೆಳೆದಂತಹ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ನಿಗದಿ ಮಾಡಿದಾಗ ಮಾತ್ರ ರೈತ ದೇಶದ ಬೆನ್ನೆಲುಬು ಎಂಬ ಪದಕ್ಕೆ ಅರ್ಥ ಬರಲಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

 will face shortage of food grains if  Farmers do not grow : Shri snr

  ಶಿರಾ :  ರೈತರು ಆಹಾರ ಧಾನ್ಯಗಳನ್ನು ಬೆಳೆಯದಿದ್ದರೆ ದೇಶ ಮತ್ತು ರಾಜ್ಯ ಆಹಾರ ಧಾನ್ಯಗಳ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಅನ್ನದಾತ ಬೆಳೆದಂತಹ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ನಿಗದಿ ಮಾಡಿದಾಗ ಮಾತ್ರ ರೈತ ದೇಶದ ಬೆನ್ನೆಲುಬು ಎಂಬ ಪದಕ್ಕೆ ಅರ್ಥ ಬರಲಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನ ಮಠದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಶ್ರೀ ಗಣೇಶ ಪ್ರತಿಷ್ಠಾಪನೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ. ಬೆಳೆ ನಷ್ಟ ಪರಿಹಾರ ನೀಡುವುದರ ಜೊತೆಗೆ ಯಾವುದೇ ತಾರತಮ್ಯ ಮಾಡದೆ ಬೆಳೆವಿಮೆ ಹಣ ಕಟ್ಟಿದ ಎಲ್ಲ ರೈತರಿಗೆ ವಿಮೆ ಪರಿಹಾರ ಹಣ ನೀಡಬೇಕು. ಪರಿಸರ, ಪ್ರಕೃತಿಗಳಿಂದ ಒಳ್ಳೆಯದನ್ನೇ ಸ್ವೀಕಾರ ಮಾಡಿ, ಒಳ್ಳೆಯದನ್ನೇ ಬಯಸಿದರೆ ಅಂತಹ ಬದುಕಿನಲ್ಲಿ ದೇವರನ್ನು ಕಾಣಲು ಸಾಧ್ಯ. ಶ್ರೀ ವಿಘ್ನ ವಿನಾಶಕ ನಾಡಿನ ಎಲ್ಲಾ ರೈತ ಮತ್ತು ಜನಸಾಮಾನ್ಯರ ಸಂಕಷ್ಟಗಳನ್ನು ದೂರ ಮಾಡಿ ಸಮೃದ್ಧಿ ಕರುಣಿಸಲಿ ಎಂದು ಶ್ರೀ ಗಣೇಶ ನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷ ಹೊಸಮನೆ ರಂಗನಾಥ್, ಮಾಜಿ ತಾಪಂ ಸದಸ್ಯ ಕೆ.ಎಂ. ಶ್ರೀನಿವಾಸ್, ಗ್ರಾಪಂ ಸದಸ್ಯ ಮಂಜುನಾಥ ಸ್ವಾಮಿ, ಮುಖಂಡ ತಮ್ಮಣ್ಣ, ಈ.ಶಿವಾನಂದ್, ನಿರಂಜನ್, ವೀರಕ್ಯಾತಪ್ಪ, ಮೆಡಿಕಲ್ ಉಮೇಶ್, ನಾಗರಾಜು, ಚಂದ್ರಶೇಖರ್ ಸೇರಿದಂತೆ ಹಲವರು ಹಾಜರಿದ್ದರು.

2050ರ ವೇಳೆಗೆ ನಮ್ಮ ದೇಶದಲ್ಲಿ ಎಲ್ಲ ದೇಶಗಳಿಗಿಂತ ಜನಸಂಖ್ಯೆ ಹೆಚ್ಚಾಗಿ ಆಹಾರ ಧಾನ್ಯಗಳ ಕೊರತೆ

ದೇವನಹಳ್ಳಿ (ಆ.11): 2050ರ ವೇಳೆಗೆ ನಮ್ಮ ದೇಶದಲ್ಲಿ ಎಲ್ಲ ದೇಶಗಳಿಗಿಂತ ಜನಸಂಖ್ಯೆ ಹೆಚ್ಚಾಗಿ ಆಹಾರ ಧಾನ್ಯಗಳ ಕೊರತೆ ಕಾಣುವ ಸಂಭವವಿದೆ. ಉಳುವ ರೈತನ ಹೊಲದ ಪ್ರಮಾಣ ಕಡಿಮೆಯಾಗಿ ಕೈಗಾರಿಕೆಗಳು ಹೆಚ್ಚಾಗಲಿವೆ ಎಂದು ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಮತ್ತು ನಾಡಪ್ರಭುಗಳ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡಬೇಕಾದರೆ ಬಂಜರು ಭೂಮಿಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಸಂಚಾರ ಸೌಲಭ್ಯ ನೀಡಬೇಕು. ಅದು ಬಿಟ್ಟು ಕೃಷಿ ಭೂಮಿಗಳಲ್ಲಿ ಅಲ್ಲ ಎಂದರು.

ನಾಡಪ್ರಭು ಕೆಂಪೇಗೌಡರ ದೂರ ದೃಷ್ಟಿಯಿಂದಾಗಿ ಎಲ್ಲ ಜನಾಂಗಗಳ ವೃತ್ತಿಯನ್ನು ಗೌರವಿಸಿ ಅವರಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ ಹಾಗೆ ರೈತರ ಹಿತದೃಷ್ಟಿಯಿಂದ ಕೆರೆಗಳ ನಿರ್ಮಾಣ ಮಾಡಿಸಿದರು. ಅದೇ ರೀತಿ ಸರ್ಕಾರಗಳು ರೈತರ ಹಿತ ಕಾಯಬೇಕು. ಹಣದಾಸೆಗಾಗಿ ರೈತರು ಇರುವ ಜಮೀನು ಮಾರಾಟ ಮಾಡಿದರೆ ಅವರಲ್ಲಿ ಎಷ್ಟುದಿನ ಹಣ ಇರುತ್ತೆ. ಮತ್ತೆ ಅದೇ ಜಮೀನಿನಲ್ಲಿ ನೌಕರನಾಗಿ ದುಡಿಯಬೇಕಾಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಫಲವತ್ತಾದ ಭೂಮಿಯನ್ನು ರೈತರಿಂದ ಕಸಿದುಕೊಳ್ಳದೆ ಅವರಿಗೆ ಬೇಕಾದ ಸವಲತ್ತುಗಳನ್ನು ಮಾಡಿಕೊಡಬೇಕು. 

ತರಗತಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಸಮವಸ್ತ್ರ ಕಡ್ಡಾಯಗೊಳಿಸಿದ ಕಾಲೇಜು ಆಡಳಿತ ಮಂಡಳಿ!

ಭಾಗದ ರೈತರು ಕಳೆದ ಎರಡು ವರ್ಷಗಳಿಂದ ತಮ್ಮ ಜಮೀನು ಉಳಿವಿಗಾಗಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಅವರ ಸಮಸ್ಯೆಯನ್ನು ಪ್ರಜಾಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಒಂದು ಸಮಾಜದ ನಾಯಕರಲ್ಲ. ಅವರು ನಾಡಿನ ಮಹಾಚೇತನ. ಸಮಸ್ತ ಜನರ ಸುಧಾರಣೆಗಾಗಿ ಶ್ರಮಿಸಿದವರು. ಎಲ್ಲರ ಹಿತವನ್ನು ಕಾಪಾಡಬೇಕೆಂದು ಆಯಾಯ ಸಮುದಾಯಗಳ ವೃತ್ತಿಗೆ ಅಗತ್ಯ ಅನುಕೂಲಗಳನ್ನು ಮಾಡಿಕೊಟ್ಟಮಹನೀಯರು. ಪ್ರತಿಯೊಬ್ಬರು ಬದುಕಬೇಕಾದರೆ ಕೆರೆ ಕುಂಟೆಗಳು ಅವಶ್ಯವೆಂದು ಅರಿತಿದ್ದರು. 

ಆದಿ ಚುಂಚನ ಗಿರಿ ಮಠಕ್ಕೆ ಸೇವಕನಾಗಿ ಕೆಲಸ ಮಾಡಿದ್ದೇನೆ, ಸ್ವಾಮೀಜಿಗಳು ಬಸವಣ್ಣನವರ ಚಿಂತನೆಯನ್ನು ಮೈಗೂಡಿಸಿಕೊಂಡು ಎಲ್ಲ ವರ್ಗದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಜೊತೆಗೆ ಅನ್ನದಾನ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು. ಈ ಭಾಗಕ್ಕೆ ಹರಿಯುತ್ತಿರುವ ಕೆಸಿ ವ್ಯಾಲಿ ನೀರನ್ನು ಮೂರನೇ ಬಾರಿ ಶುದ್ಧೀಕರಿಸಿ ಸರಬರಾಜು ಮಾಡಲು ಮಾಜಿ ಸಂಸದ ವೀರಪಪ ಮೊಯ್ಲಿಯವರೊಂದಿಗೆ ಒತ್ತಾಯ ಮಾಡಿದ್ದೇವೆ. ಕೆರೆಗಳಲ್ಲಿ ಹೂಳು ತೆಗೆಸಿ ನೀರು ಸಂಗ್ರಹಕ್ಕೆ ಸಹಕಾರ ಮಾಡಿದರೆ ನಮ್ಮ ಬದುಕು ಹಸನಾಗುತ್ತದೆ. 

Latest Videos
Follow Us:
Download App:
  • android
  • ios