ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್?
ಮಂಗಳೂರು-ಮುಂಬೈ ನಡುವೆ ‘ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಸಂಚಾರಕ್ಕಾಗಿ ಸಂಸದರ ಮೂಲಕ ಕೇಂದ್ರ ಸಚಿವರಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಕಾರ್ಕಳ (ಅ.1): ಮಂಗಳೂರು-ಮುಂಬೈ ನಡುವೆ ‘ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಸಂಚಾರಕ್ಕಾಗಿ ಸಂಸದರ ಮೂಲಕ ಕೇಂದ್ರ ಸಚಿವರಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಮಂಗಳೂರು ಮತ್ತು ಮುಂಬೈ ನಡುವೆ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಸಂಪರ್ಕದಿಂದಾಗಿ ನಮ್ಮ ಕರಾವಳಿ ಕರ್ನಾಟಕದ ಜನತೆಯು ವ್ಯಾಪಾರ, ವ್ಯವಹಾರ, ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೆ, ವಿವಿಧ ಆಯಾಮಗಳಲ್ಲಿ ಮುಂಬೈನೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿರುತ್ತಾರೆ. ಪ್ರತಿನಿತ್ಯ ನೂರಾರು ಜನರು ಮುಂಬೈ ಮಹಾನಗರಕ್ಕೆ ಸಂಚರಿಸುತ್ತಿದ್ದು, ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸುವುದರಿಂದ ಪ್ರಯಾಣದ ಅವಧಿ ಹಾಗೂ ಆರ್ಥಿಕ ಹಿತದೃಷ್ಟಿಯಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಮಂಗಳೂರು ಮತ್ತು ಮುಂಬೈ ನಡುವೆ ಹೊಸ ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಶಾಸಕ ವಿ.ಸುನಿಲ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ರೈಲು ಸೇವೆ ವಿಸ್ತರಣೆ:
ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ-ರಾಮೇಶ್ವರಂನ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿ ಆದೇಶಿಸಿದೆ. ಹುಬ್ಬಳ್ಳಿಯಿಂದ ಪ್ರತಿ ಶನಿವಾರ ಚಲಿಸುತ್ತಿರುವ ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ- ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಅ.7ರಿಂದ ಡಿಸೆಂಬರ್ 30ರವರೆಗೆ ಮುಂದುವರಿಸಲಾಗಿದೆ. ಈ ಮೊದಲು ಸೆ.30ರವರೆಗೆ ರವರೆಗೆ ಓಡಿಸಲು ಸೂಚಿಸಲಾಗಿತ್ತು. ರಾಮೇಶ್ವರಂನಿಂದ ಪ್ರತಿ ಭಾನುವಾರ ಚಲಿಸುತ್ತಿರುವ ರೈಲು ಸಂಖ್ಯೆ 07356 ರಾಮೇಶ್ವರಂ- ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಅ.8ರಿಂದ ಡಿಸೆಂಬರ್ 31ರವರೆಗೆ ಮುಂದುವರಿಸಲಾಗುತ್ತಿದೆ. ಈ ಮೊದಲು ಅ.1ರವರೆಗೆ ಓಡಿಸಲು ಸೂಚಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.