Asianet Suvarna News Asianet Suvarna News

ರೈತರಿಗೆ ಹಾವಳಿ ನೀಡ್ತಿದ್ದ ಕಾಡಾನೆ ಕೊನೆಗೂ ಸೆರೆ, ಕುತೂಹಲದಿಂದ ನೋಡಲು ಮುಗಿಬಿದ್ದ ಜನ

 ಚನ್ನಪಟ್ಟಣ ತಾಲ್ಲೂಕಿನದಾದ್ಯಂತ ಸಾಕಷ್ಟು ರೈತರಿಗೆ ಉಪಟಳ ನೀಡಿ, ಹಾವಳಿ ಕೊಡ್ತಾ ಇದ್ದ ಪುಂಡಾ ಕಾಡಾನೆ ಕೊನೆಗೂ ಸೆರೆ ಸಿಕ್ಕಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

wild elephant finally captured near channapatna in Ramanagara gow
Author
Bengaluru, First Published Aug 14, 2022, 9:35 PM IST

ವರದಿ; ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

 ರಾಮನಗರ (ಆ.14): ರಾಮನಗರ ಬೊಂಬೆನಗರಿ‌ ಚನ್ನಪಟ್ಟಣ ತಾಲ್ಲೂಕಿನದಾದ್ಯಂತ ಸಾಕಷ್ಟು ರೈತರಿಗೆ ಉಪಟಳ ನೀಡಿ, ಹಾವಳಿ ಕೊಡ್ತಾ ಇದ್ದ ಪುಂಡಾ ಕಾಡಾನೆ ಕೊನೆಗೂ ಸೆರೆ ಸಿಕ್ಕಿದ್ದು, ಆ ಭಾಗದಲ್ಲಿನ ಗ್ರಾಮಸ್ಥರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಬಿ.ವಿ ಹಳ್ಳಿ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಆ ಭಾಗದ ಜನರಿಗೆ ಸಾಕಷ್ಟು ಹಾವಳಿ ಕೊಡ್ತಿದ್ದ ಕಾಡಾನೆಗಳ ಪೈಕಿ ಇಂದು ಒಂದು ಆನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಆನೆ ಸೆರೆಹಿಡಿಯಲು ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದ ಅಧಿಕಾರಿಗಳಿಗೆ ಇಂದು ಕೊನೆಗೂ ಆನೆ ಸೆರೆ ಸಿಕ್ಕಿದೆ. ಇಂದು ಬೆಳಿಗ್ಗೆ 8 ಘಂಟೆಗೆ ಸುಮಾರಿಗೆ ಅರಣ್ಯ ಇಲಾಖೆ ಹಾಗೂ ವೈದ್ಯರು ಸೇರಿದಂತಹ 5 ತಂಡಗಳನ್ನು ಮಾಡಿಕೊಂಡು ಪಳಗಿರುವ ಐದು ಆನೆಗಳಾದ ಪ್ರಶಾಂತ, ಭೀಮ, ಲಕ್ಷಣ, ಹರ್ಷ, ಕುಮಾರ ಆನೆಗಳನ್ನು ಕರೆದುಕೊಂಡು ಕಾಡಿಗೆ ಹೊರಟಿದ್ದ ಅಧಿಕಾರಿಗಳು ಸುಮಾರು 6 ಕಿಮೀ ನಷ್ಟು ಕಾಡಲ್ಲಿ ಸಂಚರಿಸಿದ್ರು. ಬೆಳಿಗ್ಗೆ 11 ಘಂಟೆ ಸುಮಾರಿಗೆ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು ಅರಿವಳಿಕೆ ಮೂಲಕ ಒಂದು ಆನೆಗೆ ಶೂಟ್ ಮಾಡಲಾಯಿತು. 

 ಅದರಿಂದ ಕೋಪಗೊಂಡಿದ್ದ ಆನೆ ತನ್ನ ಜೊತೆಯಲ್ಲಿದ್ದ ಎರಡು ಆನೆಗಳ ಜೊತೆ ಸಾಕಷ್ಟು ದೂರ ಸಂಚರಿಸಿತ್ತು. ಕೊನೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಆ ಆನೆಗೆ ಚಿಕಿತ್ಸೆ ನೀಡಿ, ಕೆಲಕಾಲ ವಿಶ್ರಾಂತಿ ನೀಡಿ, ನಂತರ ಪಳಗಿದ ಆನೆಗಳ ಸಹಾಯದಿಂದ ಆನೆಯನ್ನು ಕಾಡಿನಿಂದ ಹೊರಗಡೆ ಕರೆತರಲಾಯಿತು.

ಅಂದಹಾಗೆ ಈ ಭಾಗಗಳಲ್ಲಿ ಸಾಕಷ್ಟು ಕಾಡಾನೆಗಳಿದ್ದು, ಕಾಡಾನೆಯಿಂದ ಹಲವು ಜನರು ಸಾವನ್ನಪ್ಪಿದ್ದರು. ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ಕೂಡ ನಾಶವಾಗಿತ್ತು. ಆ ಹಿನ್ನಲೆಯಲ್ಲಿ‌ ಆನೆ ಸೆರೆಯಿಡಿಯುವಂತೆ ಈ ಭಾಗದ ರೈತರು ಮನವಿ ಮಾಡಿಕೊಂಡಿದ್ರು. ಆ ನಿಟ್ಟಿನಲ್ಲಿ ಸರ್ಕಾರ ತೊಂದರೆ ನೀಡ್ತಿದ್ದ 2 ಆನೆಗಳನ್ನು ಸೆರೆಹಿಡಿಯಲು ಅನುಮತಿ ನೀಡಿತ್ತು.   ಅದರಂತೆ ಸಾಕಷ್ಟು ಹಾವಳಿ ನೀಡ್ತಿದ್ದ ಸುಮಾರು 35 ವರ್ಷದ  ಗಂಡಾನೆಯನ್ನು ಇಂದು ಸೆರೆಹಿಡಿಯಲಾಗಿದೆ.

Mysuru Dasara; ತೂಕದ ವಿಚಾರದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿ!

ಈ ಭಾಗದಲ್ಲಿ ಹಲವು ಆನೆಗಳಿದ್ದು, ಎರಡ್ಮೂರು ದಿನಗಳ ನಂತರ ಮತ್ತೊಂದು ಆನೆಯನ್ನು ಸೆರೆಹಿಡಿಯಲಾಗುವುದು. ತದನಂತರ ಉಳಿದ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಲಾಗಿತ್ತದೆ. ಸದ್ಯ ಸೆರೆ ಸಿಕ್ಕಿರುವ ಆನೆಯನ್ನು ಕೊಳ್ಳೆಗಾಲ ಅಥವಾ ಮಲೆಮಹದೇಶ್ವರ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚನ್ನಪಟ್ಟಣ: ಆನೆ ಸೆರೆ ಕಾರ್ಯಾಚರಣೆಗೆ ಗಜಪಡೆ ಸಿದ್ಧ..!

ಒಟ್ಟಾರೆ ಮುಗ್ಧ ಜನರ ಸಾವಿಗೆ ಕಾರಣವಾಗಿ, ರೈತರು ಬೆಳೆದ ಬೆಳೆಗಳನ್ನ ನಾಶಪಡಿಸುತ್ತಿದ್ದ ಒಂದು ಪುಂಡನೆಯನ್ನ ಕೊನೆಗೂ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಕ್ಸಸ್ ಆಗಿದ್ದಾರೆ. ಮತ್ತೆ ಎರಡು ದಿನದ ನಂತರ ಮತ್ತೊಂದೆ ಅನೆ ಸೆರೆ ಕೂಗಿಂಬ್ ಆರಂಭವಾಗಲಿದೆ.

Follow Us:
Download App:
  • android
  • ios