ಹಾಸನ [ನ.16]: ಹಾಸನದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಊರೊಳಗೆ ನುಗ್ಗಿ ರಾಜಾರೋಷವಾಗಿ ಕಾಡಾನೆಗಳು ಸಂಚರಿಸುತ್ತಿವೆ. 

ಹಾಸನ‌ ಜಿಲ್ಲೆ ಆಲೂರು ತಾಲ್ಲೂಕಿನ ಕೊಡಗತ್ತವಳ್ಳಿಯಲ್ಲಿ ಗ್ರಾಮದೊಳಗೆ ನುಗ್ಗಿ ಒಂಟಿ ಸಲಗವೊಂದು ಸಂಚರಿಸುತ್ತಿದೆ. 

ಬೆಳ್ಳಂಬೆಳಗ್ಗೆ ಇಂದು ಗ್ರಾಮದೊಳಗೆ ನುಗ್ಗಿದ ಸಲಗವು ಮನೆಗಳ ಮುಂದೆಯೇ ಸಾಗಿದೆ. ಕಾಡಾನೆ ಕಂಡು‌ ಭಯಭೀತರಾಗಿ ಜನರು ಓಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಕೆಲ‌ ದಿನಗಳಿಂದ ಒಂಟಿಯಾಗಿ ಅಡ್ಡಾಡುತ್ತಾ ಆತಂಕ ಸೃಷ್ಟಿಸಿರುವ‌ ಕಾಡಾನೆ  ಹಾವಳಿ‌ ನಿಯಂತ್ರಣಕ್ಕೆ ಜನರು ಆಗ್ರಹಿಸಿದ್ದಾರೆ.

ಈ ಹಿಂದೆಯೂ ಕೂಡ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಅತ್ಯಂತ ಹೆಚ್ಚಿದ್ದು, ಬೆಳೆಹಾನಿಯನ್ನೂ ಮಾಡುತ್ತಿವೆ. ಗ್ರಾಮೀಣ ಪ್ರದೇಶದ ಜನರು ಕಾಡಾನೆಗಳ ಹಾವಳಿಯಿಂದ ಭಯದಲ್ಲಿಯೇ ಬದುಕುವಂತಾಗಿದೆ.