ಯಾರು ನೋಟಿಸ್ ನೀಡಿದರೂ ನಾವು ಸಿಎಂ ಸಿದ್ದರಾಮಯ್ಯ ಅವರ ಜತೆಯಲ್ಲಿಯೇ ಇರುತ್ತೇವೆ. ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ ಎಂದು ಹೇಳಿದ ಸಚಿವ ಶಿವರಾಜ ತಂಗಡಗಿ

ಕೊಪ್ಪಳ(ಫೆ.01): ಬಡವರ ಪರವಾಗಿ ಕೆಲಸ ಮಾಡುವವರಿಗೆ ನೋಟಿಸ್‌ ಜಾರಿ ಮಾಡುವ ಇಡಿ, ಬಿಜೆಪಿಯವರಿಗೆ ಯಾಕೆ ನೋಟಿಸ್‌ ನೀಡುವುದಿಲ್ಲ. ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

ತಾಲೂಕಿನ ಮುಂಡರಗಿ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಡಿ ಬರಿ ಕಾಂಗ್ರೆಸ್ಸಿನವರಿಗೆ ಮಾತ್ರ ನೋಟಿಸ್ ಜಾರಿ ಮಾಡುತ್ತದೆ ಬಿಜೆಪಿಯ ನಾಯಕರಿಗೆ ನೋಟಿಸ್ ಜಾರಿ ಮಾಡುವುದಿಲ್ಲ. ಇದ್ಯಾವುದಕ್ಕೂ ನಾವು ಹೆದರುವುದಿಲ್ಲ ಜನಪರವಾಗಿ ಕೆಲಸ ಮಾಡುವವರು, ಬಡವರ ಪರವಾಗಿ ಕೆಲಸ ಮಾಡುವರು, ರೈತ ಪರ ಇರುವವರೇ ಇಡಿ ಅಧಿಕಾರಿಗಳಿಗೆ ಹಾಗೂ ಬಿಜೆಪಿಯವರಿಗೆ ಕಾಣುತ್ತಾರೆ. ಬಿಜೆಪಿ ನಾಯಕರು ಯಾರೂ ಕಾಣಿಸುತ್ತಿಲ್ಲವೇ ಎಂದು ಪದೇ ಪದೇ ಪ್ರಶ್ನೆ ಮಾಡಿದರು. ಯಾರು ನೋಟಿಸ್ ನೀಡಿದರೂ ನಾವು ಸಿಎಂ ಸಿದ್ದರಾಮಯ್ಯ ಅವರ ಜತೆಯಲ್ಲಿಯೇ ಇರುತ್ತೇವೆ. ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ ಎಂದು ಹೇಳಿದರು. 

ಕೊಪ್ಪಳ: ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರದಿಂದ 100 ಕೋಟಿ!

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5300 ಕೋಟಿ ನೀಡುವುದಾಗಿ ಹೇಳಿದ್ದರೂ ಒಂದು ನಯಾಪೈಸೆ ನೀಡಲಿಲ್ಲ. ರಾಜ್ಯದ ಬಗ್ಗೆ ಬಿಜೆಪಿ ನಾಯಕರಿಗೆ ಕಾಳಜಿಯೇ ಇಲ್ಲ. ಇದ್ಯಾವುದನ್ನು ಕೇಳುವುದಿಲ್ಲ. ಜಿಎಸ್‌ಟಿಯಲ್ಲಿ ನಮಗೆ ಅನ್ಯಾಯವಾದರೂ ಈ ರಾಜ್ಯ ಬಿಜೆಪಿ ನಾಯಕರು ಪ್ರಶ್ನೆ ಮಾಡುವುದಿಲ್ಲ. ಬಿಜೆಪಿ ನಾಯಕರು ಬರಿ ಜಗಳದಲ್ಲಿ ತಲ್ಲೀನರಾಗಿದ್ದಾರೆ. ಇದುವರೆಗೂ ಬಿಜೆಪಿಯಲ್ಲಿ ಐದಾರು ಬಣ ಇದ್ದವು, ಈಗ ಜಿಲ್ಲಾಧ್ಯಕ್ಷರ ಆಯ್ಕೆ ಗೊಂದಲದಿಂದ ಹದಿನಾರು ಬಣಗಳಾಗಿವೆ ಎಂದರು. 

ಎಸ್‌ಸಿ, ಎಸ್‌ಟಿ ಸಚಿವರ ಸಭೆ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ, ಆ ಸಭೆಗೂ ನಾನು ಹೋಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಮುಖ್ಯೋಪಾದ್ಯಾಯರ ಹೊಣೆ: ಶಿವರಾಜ ತಂಗಡಗಿ 

ಕೊಪ್ಪಳ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ವರ್ಷ ನಾವು 32 ಸ್ಥಾನದಲ್ಲಿದ್ದೇವೆ. ಇದು ಅತ್ಯಂತ ನೋವಿನ ಸಂಗತಿ. ಈ ಬಾರಿ ಇದರಲ್ಲಿ ಸುಧಾರಣೆ ಮಾಡುವುದು ಶಾಲೆಯ ಮುಖ್ಯೋಪಾಧ್ಯಾಯರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲೆಯ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಫಲಿತಾಂಶ ಕುಸಿಯಲು ನಾನಾ ಕಾರಣಗಳನ್ನು ಈಗಾಗಲೇ ನೀಡಿದ್ದೀರಿ, ಆದರೆ ಕಾರಣ ಹೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಗುರುವಿನ ಸ್ಥಾನ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿಯೂ ಗುರುವಿನ ಸ್ಥಾನಕ್ಕೆ ಅದರದೆ ಆದ ಮಹತ್ವ ಇದೆ. ನಾನಾ ಸಹ ನಿಮ್ಮಂಥ ಗುರುಗಳ ಕೈಯಲ್ಲಿಯೇ ಕಲಿತು ಸಚಿವನಾಗಿದ್ದೇನೆ. ಮುಖ್ಯಾಧ್ಯಾಪಕರ ಹುದ್ದೆ ಗೌರವ ಹೆಚ್ಚಬೇಕು ಎಂದರೆ ನೀವು ನಿಮ್ಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಮಾಡಬೇಕು ಎಂದು ತಾಕಿತು ಮಾಡಿದರು.

ಪರೀಕ್ಷೆಗೆ ಉಳಿದಿರುವುದು 48 ದಿನಗಳ ಮಾತ್ರ. ನಮ್ಮ ಜಿಲ್ಲೆಯನ್ನು ಈ ವರ್ಷ ಮೊದಲ ಸ್ಥಾನದಲ್ಲಿ ತರುವ ಪ್ರಯತ್ನ ಮಾಡಬೇಕು ಎನ್ನುವುದು ನನ್ನ ಗುರಿ. ನೀವೆಲ್ಲ ಸಹಕಾರ ನೀಡಬೇಕು. ಇಂದಿನಿಂದಲೇ ಕಾರ್ಯಗತರಾಗಬೇಕು ಎಂದರು.

ಪ್ರಾಥಮಿಕ ಶಾಲೆ ಶಿಕ್ಷಕರ ಮೇಲೂ ಕ್ರಮ: ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ದೊರೆಯುವಂತೆ ಆಗಬೇಕು. ಓದಲು ಬರೆಯಲು, ಬಾರದಿರುವ ಮಕ್ಕಳನ್ನು ನಾವು ಎಸ್‌ಎಸ್‌ಎಲ್‌ಸಿ ಹೇಗೆ ಪಾಸ್ ಮಾಡಿಸಬೇಕು ಎಂದು ಕೇಳಿದ್ದೀರಿ, ಹಾಗಂತ ಜವಾಬ್ದಾರಿಯಿಂದ ನುಣಚಿಕೊಳ್ಳುವಂತೆ ಮಾಡಬೇಡಿ. ಆದರೆ, ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ಸಮಸ್ಯೆ ಇರುವುದು ಗೊತ್ತಾಗಿದೆ. ಹೀಗಾಗಿ, ನಾವು ಇನ್ನುಂದೆ ಪ್ರಾಥಮಿಕ ಹಂತದಿಂದಲೇ ಶಿಕ್ಷಣ ಸುಧಾರಣೆಗೆ ಪ್ರಯತ್ನಿಸುತ್ತೇವೆ. ಈ ಕುರಿತು ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದರು.

ಕೊಪ್ಪಳ: ಮಹಾದಾಸೋಹದಲ್ಲಿ ಬರೋಬ್ಬರಿ 2300 ಕ್ವಿಂಟಲ್ ಖಾದ್ಯ ಬಳಕೆ

ಜಿಲ್ಲಾಧಿಕಾರಿ ನಳಿನ್ ಅತುಲ್ ಮಾತನಾಡಿ, ಕಾರಣ ಹೇಳದೆ ಫಲಿತಾಂಶ ಸುಧಾರಣೆ ಮಾಡಿ, ಓದಲು ಬಾರದಿರುವ ಮಕ್ಕಳಿದ್ದಾರೆ ಎಂದು ಹೇಳಿದ್ದೀರಿ, ಆದರೆ, ಆ ಮಕ್ಕಳು ಎರಡು ವರ್ಷ ನಿಮ್ಮ ಕೈಯಲ್ಲಿಯೇ ಕಲಿತಿದ್ದಾರಲ್ಲ ಎಂದು ಪ್ರಶ್ನೆ ಮಾಡಿದರು. ಹೀಗಾಗಿ, ಹೇಗಾದರೂ ಮಾಡಿ ಕಲಿಸಿ ಎಂದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ರಾಮ ಎಲ್. ಅರಸಿದ್ದಿ, ಜಿಪಂ ಡಿಎಸ್ ಮಲ್ಲಿಕಾರ್ಜುನ ತೊದಲಬಾವಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಇದ್ದರು. ಡಿಡಿಪಿಐ ಶ್ರೀಶೈಳ ಬಿರಾದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.