ಬೆಂಗಳೂರು [ಅ.07]:  ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಟಿಕೆಟ್‌ ರಹಿತ ಪ್ರಯಾಣ ಮಾಡಿದ 5,400 ಮಂದಿ ಪ್ರಯಾಣಿಕರಿಂದ 10.24 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.

ನಿಗಮದ ತನಿಖಾ ತಂಡಗಳು ಆಗಸ್ಟ್‌ ತಿಂಗಳಲ್ಲಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ನಿಗಮದ ಬಸ್‌ಗಳ 18,894 ಟ್ರಿಪ್‌ಗಳನ್ನು ತಪಾಸಣೆಗೆ ಒಳಡಿಸಿದ್ದಾರೆ. ಈ ವೇಳೆ ಟಿಕೆಟ್‌ ರಹಿತ ಪ್ರಯಾಣ ಮಾಡಿದ ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಪ್ಪಿತಸ್ಥ ನಿರ್ವಾಹಕರ ವಿರುದ್ಧ 2,977 ಪ್ರಕರಣ ದಾಖಲಿಸಲಾಗಿದೆ. ಅಂತೆಯೆ ಮಹಿಳೆಯರಿಗೆ ಮೀಸಲಾದ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 242 ಪುರುಷ ಪ್ರಯಾಣಿಕರಿಂದ 24 ಸಾವಿರ ರು. ದಂಡ ವಸೂಲಿ ಮಾಡಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.