Asianet Suvarna News Asianet Suvarna News

ಕಾರವಾರದಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ

ಸುಮಾರು 1 ಕೆಜಿ ತೂಕ ಹೊಂದಿದ ತಿಮಿಂಗಲದ ವಾಂತಿ| ತಜ್ಞರ ಪ್ರಕಾರ ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ವಾಂತಿ ಮಾಡಿಕೊಳ್ಳುವ ತಿಮಿಂಗಿಲಗಳು| ಕಡಲಜೀವಿಗಳ ಕುರಿತು ಸಂಶೋಧನೆ ನಡೆಸುವವರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಇದರ ಸಂರಕ್ಷಣೆ| 

Whale Vomit Found at  Murudeshwar Beach in Uttara Kannada grg
Author
Bengaluru, First Published Apr 25, 2021, 10:36 AM IST

ಭಟ್ಕಳ(ಏ.25):  ಮುರ್ಡೇಶ್ವರ ಕಡಲ ತೀರದಲ್ಲಿ ಬೆಲೆಬಾಳುವ ಮತ್ತು ಅತ್ಯಂತ ಅಪರೂಪವಾಗಿ ಸಿಗುವ ತಿಮಿಂಗಲದ ವಾಂತಿ (ಅಂಬೆಗ್ರಿಸ್‌) ಮೀನುಗಾರನೋರ್ವನಿಗೆ ಸಿಕ್ಕಿದ್ದು, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಸಿಕ್ಕಿರುವ ತಿಮಿಂಗಲದ ವಾಂತಿ ಸುಮಾರು 1 ಕೆಜಿ ತೂಕ ಹೊಂದಿದೆ. ಇದು ಕಲ್ಲಿನಾಕಾರದಲ್ಲಿದೆ. ಇದನ್ನು ಮೀನುಗಾರ ಮನೆಗೆ ತಂದು ತಜ್ಞರ ಮೂಲಕ ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿದೆ. ಇದಕ್ಕೆ ಹೆಚ್ಚಿನ ಬೆಲೆ ಇದೆ ಎಂದು ಹೇಳಲಾಗಿದ್ದರೂ ಖಚಿತಪಟ್ಟಿಲ್ಲ. ಇದನ್ನು ಹೊನ್ನಾವರ ವಿಭಾಗದ ಅರಣ್ಯ ಕಚೇರಿಗೆ ಹಸ್ತಾಂತರಿಸಲಾಗಿದೆ. ಇದಕ್ಕೆ ಅಂಬೆಗ್ರಿಸ್‌ ಎಂದು ಇಂಗ್ಲೀಷ್‌ನಲ್ಲಿ ಹಾಗೂ ಕನ್ನಡದಲ್ಲಿ ತಿಮಿಂಗಿಲ ವಾಂತಿ ಎಂದರೆ ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬೆಗ್ರಿಸ್‌ ಅಥವಾ ತಿಮಿಂಗಿಲ ವಾಂತಿ ಎಂದು ಕರೆಯುತ್ತಾರೆ.

ಕಾರವಾರದಲ್ಲಿ ಬಲೆಗೆ ಬಿದ್ದ ರಾಶಿ ರಾಶಿ ನಿರುಪಯೋಗಿ ಸ್ಟಾರ್ ಫಿಶ್

Whale Vomit Found at  Murudeshwar Beach in Uttara Kannada grg

ತಜ್ಞರ ಪ್ರಕಾರ ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತದೆ. ಒಂದು ತಿಮಿಂಗಿಲ ಒಂದು ಕೆಜಿ ಇಂದ ಹತ್ತು ಕೆಜಿಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಇದ್ದಾಗಲೇ ಜೀರ್ಣಾಂಗದಲ್ಲಿ ಇವು ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಇದರ ವಾಂತಿ ಸುಗಂಧ ಭರಿತವಾಗಿರುತ್ತದೆ. ಮೊದಲು ಇದನ್ನು ಸುಟ್ಟಾಗ ವ್ಯಾಕ್ಸ್‌ನಂತೆ ಕರಗಿ ಕೆಟ್ಟವಾಸನೆ ಬರುತ್ತದೆ. ಆದರೆ, ನಂತರ ಸುಂಗಂಧ ಭರಿತವಾಗಿರುತ್ತದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ರಂಗನಾಥ ಅವರು, ಮುರ್ಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ್ದು ತಿಮಿಂಗಲದ ವಾಂತಿಯಾಗಿರುವುದು ನಿಜ. ಆದರೆ, ಸ್ಪೆರ್ಮವೇಲ್‌ ಜಾತಿಯ ತಿಮಿಂಗಲದ ವಾಂತಿ ಅಂಬೆಗ್ರಿಸ್‌ಗೆ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ. ಅದು ಸುಗಂಧ ದ್ರವ್ಯಕ್ಕೆ ಬಳಕೆಯಾಗುತ್ತದೆ. ಆದರೆ, ಇದು ಸ್ಪೆರ್ಮವೇಲ್‌ನ ಜಾತಿಯ ತಿಮಿಂಗಲದ ವಾಂತಿ ಎನ್ನುವುದು ಇನ್ನೂ ಖಚಿತಪಟ್ಟಿಲ್ಲ. ಕಡಲಜೀವಿಗಳ ಕುರಿತು ಸಂಶೋಧನೆ ನಡೆಸುವವರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಇದನ್ನು ಸಂರಕ್ಷಿಸಿ ಇಡಲಾಗಿದೆ. ತಿಮಿಂಗಲ ಜೀರ್ಣವಾಗದ ವಸ್ತುಗಳನ್ನು ಸುದೀರ್ಘ ಕಾಲದ ನಂತರ ವಾಂತಿ ಮಾಡಿದಾಗ ಅದು ಮೇಣದಂತಾಗಿ ನೀರಿನಲ್ಲಿ ತೇಲುತ್ತದೆ ಎಂದು ಅವರು ತಿಳಿಸಿದ್ದಾರೆ. ಒಟ್ಟಾರೆ ಮುರ್ಡೇಶ್ವರದಲ್ಲಿ ಅಪರೂಪದ ತಿಮಿಂಗಲ ವಾಂತಿ ಭಾರೀ ಸುದ್ದಿ ಮಾಡಿದ್ದು, ಕೆಲವರು ಇದಕ್ಕೆ ಭಾರೀ ಬೆಲೆ ಇದೆ ಎಂದು ನಂಬಿದ್ದಾರೆ.
 

Follow Us:
Download App:
  • android
  • ios