Asianet Suvarna News Asianet Suvarna News

ಉಡುಪಿ : ವೀಕೆಂಡ್ ಕರ್ಫ್ಯೂ ರದ್ದು ಮಾಡಿ ಜಿಲ್ಲಾಧಿಕಾರಿ ಆದೇಶ

  • ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಮಾಡಿ ಜಿಲ್ಲಾಧಿಕಾರಿ ಕೂರ್ಮರಾವ್ ಇಂದು ಆದೇಶ 
  • ವಾರಂತ್ಯ ಕರ್ಫ್ಯೂ ಬಗ್ಗೆ ಸರಕಾರದಿಂದ ನಿರ್ದೇಶನ ಬಂದಿದ್ದು, ಜಿಲ್ಲಾಮಟ್ಟದಲ್ಲಿ ತೀರ್ಮಾನ 
weekend curfew withdraws in udupi snr
Author
Bengaluru, First Published Sep 10, 2021, 2:54 PM IST
  • Facebook
  • Twitter
  • Whatsapp

ಉಡುಪಿ (ಸೆ.10):  ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಮಾಡಿ ಜಿಲ್ಲಾಧಿಕಾರಿ ಕೂರ್ಮರಾವ್ ಇಂದು ಆದೇಶ ನೀಡಿದ್ದಾರೆ. ವಾರಂತ್ಯ ಕರ್ಫ್ಯೂ ಬಗ್ಗೆ ಸರಕಾರದಿಂದ ನಿರ್ದೇಶನ ಬಂದಿದ್ದು, ಜಿಲ್ಲಾಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲು ಸೂಚಿಸಿದ್ದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. 

ಉಡುಪಿಯಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮರಾವ್ ಜಿಲ್ಲೆಯಲ್ಲಿ ತಜ್ಞರ ಸಮಿತಿ ಸಭೆ ಮಾಡಿದ್ದೇವೆ. ತಕ್ಷಣದಿಂದ ಜಾರಿಗೆ ಬರುವಂತೆ ವಾರಾಂತ್ಯ ಕರ್ಪ್ಯೂ ಹಿಂಪಡೆಯಲಾಗಿದೆ.  ಉಳಿದಂತೆ ಎಲ್ಲಾ ನಿರ್ಬಂಧಗಳು ಹಿಂದಿನಂತೆಯೇ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. 

ಕೇರಳದಿಂದ ಬರುವವರಲ್ಲಿ ಹೆಚ್ಚು ಪಾಸಿಟಿವ್ ಕೇಸ್‌ : ಉಡುಪಿಯಲ್ಲಿ ಕಠಿಣ ಕ್ರಮ

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೊರೋನಾ ಲಸಿಕೆ ಪಡೆಯಿರಿ. ಈ ಮೂಲಕ ಕೊರೋನಾ ಹರಡುವುದನ್ನು ತಡೆಯಿರಿ ಎಂದು ಮನವಿ ಮಾಡಿದ್ದಾರೆ. 

ಇನ್ನು ಕೇರಳದಲ್ಲಿ ನಿಪಾ ಹಾಗು  ಕೋವಿಡ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿಯೆ ಇದ್ದು ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕೇರಳ ಪ್ರಯಾಣವನ್ನು ಅಕ್ಟೋಬರ್‌ವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ನೀಡಿದ್ದಾರೆ. 

Follow Us:
Download App:
  • android
  • ios