ಬೆಳಗಾವಿ (ಡಿ.06): ಈಗಾಗಲೇ ಉಪ ಚುನಾವಣೆ ಮುಕ್ತಾಯವಾಗಿದ್ದು, ಹಲವೆಡೆ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. 

ಬೆಳಗಾವಿಯ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಲಖನ್ ಜಾರಕಿಹೊಳಿ ತಮ್ಮ ಫಲಿತಾಂಶದ ಬಗ್ಗೆ ಮಾತನಾಡಿ ನಾವು ಈಗಾಗಲೇ ಪರೀಕ್ಷೆ ಎದುರಿಸಿದ್ದು ಡಿಸೆಂಬರ್ 9 ರಂದು ಫಲಿತಾಂಶ ಹೊರಕ್ಕೆ ಬರಲಿದೆ ಎಂದರು. 

ಈ ಬಾರಿ ಗೋಕಾಕ್ ನಲ್ಲಿ ಹೆಚ್ಚಿನ ಮತದಾನ ಆಗಿದ್ದು, ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಎಂದು ಲಖನ್ ಜಾರಕಿಹೊಳಿ ಹೇಳಿದರು. 

ಗೋಕಾಕ್ ಜನ ಯಾರಿಗೆ ಮತ ಹಾಕಿದ್ದಾರೆ ಎಂದು ಓಪನ್ ಆಗಿ ಹೇಳುವುದಿಲ್ಲ. ಇಲ್ಲಿ ಮಾಡಿದ ಸಮೀಕ್ಷೆಗಳು ಕೂಡ ಸುಳ್ಳಾಗುತ್ತವೆ. ನಾನು ಗೆಲ್ಲುತ್ತೇನೆ ಎನ್ನುವ ಸಂಪೂರ್ಣ ವಿಶ್ವಾಸ ಇದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಭ್ರಷ್ಟಾಚಾರ ವಿರುದ್ಧವಾಗಿ ನಮ್ಮ ಹೋರಾಟ ನಡೆಯುತ್ತಿದೆ. ನಮ್ಮೂರಿನ ಜನರಿಗಾಗಿ ರಮೇಶ್ ಜಾರಕಿಹೊಳಿ ಬಿಟ್ಟು ಹೊರಬಂದಿದ್ದೇವೆ. ಸತಿಶ್ ಜಾರಕಿಹೊಳಿ ನಮ್ಮ ಬೆನ್ನಿಗೆ ನಿಂತು ಕೆಲಸ ಮಾಡಿದ್ದಾರೆ. ನಾವಿಬ್ಬರೂ ಡೋಟರ್ ಟು ಡೋರ್ ಜನರ ಸಂಪರ್ಕದಲ್ಲಿದ್ದೇವೆ. 

ಇನ್ನು ಇಲ್ಲಿನ ಮಹಿಳಾ ಮತದಾರರ ಒಡ್ಡಾಯದಿಂದ ತಮ್ಮ ಪತ್ನಿಯೂ ಕೂಡ ಪ್ರಚಾರ ಕಣಕ್ಕೆ ಇಳಿದಿದ್ದರು. ನಮ್ಮ ಗೆಲುವು ಖಚಿತವಾಗಿದ್ದು, ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇವೆ ಎನ್ನುವುದು ಡಿಸೆಂಬರ್ 9 ರಂದು ಗೊತ್ತಾಗಲಿದೆ ಎಂದು ಲಖನ್ ಜಾರಕಿಹೊಳಿ ಹೇಳಿದರು.