ಜಲಮಂಡಳಿಯ ಸಹಾಯವಾಣಿ 1916, ವ್ಯಾಟ್ಸಪ್ ಸಂಖ್ಯೆ 8762228888 ವೀಕ್ಷಿಸಲು ಮನವಿ
ಬೆಂಗಳೂರು(ಸೆ.07): ನಗರಕ್ಕೆ ನೀರು ಪೂರೈಸುವ ಟಿ.ಕೆ.ಹಳ್ಳಿಯ ಘಟಕದಲ್ಲಿ ನೀರು ತುಂಬಿಕೊಂಡಿರುವ ಕಾರಣ ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ತುರ್ತು ಸಂದರ್ಭದಲ್ಲಿ ನೀರು ಅಗತ್ಯವಿದ್ದರೆ ಸಮೀಪದ ಜಲಮಂಡಳಿ ಸೇವಾಠಾಣೆ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದೆ. ಬುಧವಾರದವರೆಗೆ (ಸೆ.6) ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಈ ಮೊದಲು ತಿಳಿಸಿತ್ತು. ಆದರೆ ಘಟಕದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿರುವುದರಿಂದ ದುರಸ್ತಿ ಮಾಡಲು ಹೆಚ್ಚು ಕಾಲ ಬೇಕಾಗಿರುವುದರಿಂದ ಜಲಮಂಡಳಿ ನೀರು ಪೂರೈಕೆ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.
ನೀರು ಪೂರೈಕೆ ವ್ಯತ್ಯವಾಗುವ ಪ್ರದೇಶಗಳು
ಯಶವಂತಪುರ, ಮಲ್ಲೇಶ್ವರ, ಶೇಷಾದ್ರಿಪುರ, ಓಕಳಿಪುರ, ಶ್ರೀರಾಂಪುರ, ಮತ್ತಿಕೆರೆ, ಸದಾಶಿವನಗರ, ಪ್ಯಾಲೆಸ್ ಗುಟ್ಟಳ್ಳಿ, ಆರ್.ಎಂ.ವಿ.ಲೇಔಟ್, ಆರ್.ಟಿ.ನಗರ, ಜಿ.ಕೆ.ವಿ.ಕೆ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಹೆಬ್ಬಾಳ, ದಿಣ್ಣೂರು, ಗಂಗಾನಗರ, ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಧರ್ಮರಾಯ ಸ್ವಾಮಿ ದೇವಸ್ಥಾನ, ಅವೆನ್ಯೂ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಕಸ್ತೂರಬಾ ರಸ್ತೆ, ಶಿವಾಜಿ ನಗರ, ಫ್ರೇಜರ್ ಟೌನ್, ದೇವರ ಜೀವನಹಳ್ಳಿ, ಕೋಲ್ಸ್‌ಪಾರ್ಕ್, ಕಾಡುಗೊಂಡನಹಳ್ಳಿ, ಪಿಳ್ಳಣ್ಣ, ಸಗಾಯಿಪುರ, ಲಿಂಗರಾಜಪುರಂ, ಟ್ಯಾನರಿ ರಸ್ತೆ, ಭಾರತಿನಗರ, ವಸಂತನಗರ, ಜಗಜೀವನ್ ಭೀಮಾನಗರ, ಐಟಿಐ ಕಾಲೋನಿ, ಇಂದಿರಾನಗರ 1ನೇ ಹಂತ, ಲಕ್ಷ್ಮೇಪುರ, ಆಂಧ್ರಕಾಲೋನಿ, ಕಲ್ಲಹಳ್ಳಿ, ಎಚ್.ಎ.ಎಲ್, ಜೀವನ್ ಭೀಮಾನಗರ, ಇಂದಿರಾನಗರ, ಹಲಸೂರು, ಓಗಿ ಗಾರ್ಡನ್, ಚಾಮರಾಜಪೇಟೆ, ಹನುಮಂತನಗರ, ಶ್ರೀನಗರ, ರಾಘವೇಂದ್ರ ಬ್ಲಾಕ್, ಕಾಳಿದಾಸ ಲೇಔಟ್, ಬ್ಯಾಟರಾಯನಪುರ, ಗವಿಪುರ, ಬಸಪ್ಪ ಲೇಔಟ್. ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಬಿಇಎಲ್ ಲೇಔಟ್, ಎಚ್.ಎಂ.ಟಿ ಲೇಔಟ್, ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಗಲಗುಂಟೆ, ಟಿ.ದಾಸರಹಳ್ಳಿ, ಪೀಣ್ಯ, ರಾಜಗೋಪಾಲನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಹೆಚ್.ಎಂ.ಟಿ ವಾರ್ಡ್, ನಂದಿನಿ ಲೇಔಟ್, ಆರ್.ಆರ್.ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಲೇಔಟ್, ಜ್ಞಾನಭಾರತಿ ಲೇಔಟ್, ಐಡಿಯಲ್ ಹೋಮ್ಸ್, ಬಿಇಎಂಎಲ್ ಲೇಔಟ್, ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ದಿಣ್ಣೆ, ಜೆ.ಪಿ.ನಗರ 6, 7 8ನೇ ಹಂತ, ವಿಜಯಬ್ಯಾಂಕ್ ಲೇಔಟ್, ಕೂಡ್ಲು, ಆಂಜನಾಪುರ, ಬೊಮ್ಮನಹಳ್ಳಿ, ಕೆ.ಆರ್.ಪುರಂ, ರಾಮಮೂರ್ತಿನಗರ, ಮಹದೇವಪುರ, ಎ.ನಾರಾಯಣಪುರ, ಮಾರತ್‌ಹಳ್ಳಿ, ಹೂಡಿ, ವೈಟ್‌ಫೀಲ್ಡ್, ನಾಗರಬಾವಿ, ಎಚ್.ಎಸ್.ಆರ್.ಲೇಔಟ್, ಜೆ.ಪಿ.ನಗರ, ಎಚ್.ಬಿ.ಆರ್.ಲೇಔಟ್, ದೊಮ್ಮಲೂರು, ಬನ್ನೇರುಘಟ್ಟರಸ್ತೆ, ಜಂಬೂಸವಾರಿ ದಿಣ್ಣೆ, ಲಗ್ಗೆರೆ, ಶ್ರೀಗಂಧದ ಕಾವಲ್, ಟೆಲಿಕಾಂ ಲೇಔಟ್, ಶ್ರೀನಿವಾಸ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಏರೋ ಎಂಜಿನ್, ಓ.ಎಂ.ಬಿ.ಆರ್, ಬೊಮ್ಮನಹಳ್ಳಿ, ಅರಕೆರೆ, ಬಿ.ಎಚ್.ಇ.ಎಲ್. ಲೇಔಟ್, ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್.ಎಂ.ವಿ.ಲೇಔಟ್, ಕೊಟಿ ್ಟಗೆಪಾಳ್ಯ, ಎಲ್.ಐ.ಸಿ.ಲೇಔಟ್, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್, ನಾಯಂಡನಹಳ್ಳಿ, ಕಾಮಾಕಿ ್ಷಪಾಳ್ಯ, ರಂಗನಾಥಪುರ, ಗೋವಿಂದರಾಜ್‌ನಗರ, ಕೆ.ಎಚ್.ಬಿ.ಕಾಲೋನಿ, ಮೂಡಲಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್, ಮುನೇಶ್ವರನಗರ, ಕೊಡಿಗೆಹಳ್ಳಿ, ಅಮೃತಹಳ್ಳಿ, ಕೋಗಿಲು, ಜೆ.ಪಿ.ಪಾರ್ಕ್, ಸುದುಗುಂಟೆ ಪಾಳ್ಯ, ಕಸವನಹಳ್ಳಿ, ಕೋನೆನಅಗ್ರಹಾರ.
Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!
ಸುಧಾಮನಗರ, ಮುರುಗೇಶ್ ಪಾಳ್ಯ, ಎಚ್.ಆರ್.ಬಿ.ಆರ್.ಲೇಔಟ್, ನಾಗವಾರ, ಬಾಲಾಜಿ ಲೇಔಟ್, ಬಿ.ಜಿ.ಎಸ್.ಲೇಔಟ್, ಎಸ್.ಬಿ.ಎಂ.ಕಾಲೋನಿ, , ಬಿಟಿಎಸ್ ಲೇಔಟ್, ಸಾರ್ವಭೌಮನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿ ಪುರಂ, ರಾಘವೇಂದ್ರ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ರಾಮಯ್ಯ ಲೇಔಟ್, ಪ್ರಗತಿ ಲೇಔಟ್, ಸಿಲ್ಕ್ ಬೋರ್ಡ್ ಕಾಲೋನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮಿನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡನೆಕುಂದಿ, ಗರುಡಾಚಾರ್ ಪಾಳ್ಯ, ಸಪ್ತಗಿರಿ ಲೇಔಟ್, ಮುನೆನಕೊಳಲ, ಇಸ್ರೋ ಲೇಔಟ್, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯನಗರ, ರಮೇಶ್ ನಗರ, ಅಣ್ಣಸಂದ್ರಪಾಳ್ಯ, ಪಟಾಲಮ್ಮ ಲೇಔಟ್, ಗಾಯತ್ರಿಲೇಔಟ್, ಮಂಜುನಾಥ್ ನಗರ, ರಾಮಾಂಜನೇಯ ಲೇಔಟ್, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ತಮ್ಮ ಮನೆ ವ್ಯಾಪ್ತಿಯ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ತುರ್ತು ನೀರು ಲಭ್ಯವಾಗಲಿದೆ. ಸೇವಾಠಾಣೆಗಳ ಅಧಿಕಾರಿಗಳ ಮೊಬೈಲ್ ನಂಬರ್ ಪಡೆಯಲು ಬೆಂಗಳೂರು ಜಲಮಂಡಳಿಯ ಸಹಾಯವಾಣಿ 1916, ವ್ಯಾಟ್ಸಪ್ ಸಂಖ್ಯೆ 8762228888 ಅಥವಾ ಜಲಮಂಡಳಿ ವೆಬ್‌ಸೈಟ್ ಸಂಪರ್ಕಿಸಬಹುದು.
