ಭದ್ರಾನದಿಯಲ್ಲಿ ನೀರು ನಾಯಿ ಪ್ರತ್ಯಕ್ಷ
ಬಾಳೆಹೊನ್ನೂರು ಪಟ್ಟಣದ ಭದ್ರಾನದಿಯಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಐದು ನೀರು ನಾಯಿಗಳು ಒಂದೇ ಸಮಯದಲ್ಲಿ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಚಿಕ್ಕಮಗಳೂರು(ಏ.24): ಬಾಳೆಹೊನ್ನೂರು ಪಟ್ಟಣದ ಭದ್ರಾನದಿಯಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಐದು ನೀರು ನಾಯಿಗಳು ಒಂದೇ ಸಮಯದಲ್ಲಿ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಗುರುವಾರ ಮಧ್ಯಾಹ್ನ 2.30ರ ವೇಳೆಗೆ ಐದು ನೀರು ನಾಯಿಗಳು ಭದ್ರಾನದಿಯಲ್ಲಿ ಈಜುತ್ತ ಬರುತ್ತಿರುವುದನ್ನು ಸ್ಥಳೀಯರಾದ ಮಂಜು ಸ್ಟಿಕ್ಕರ್ ಅವರು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ವೀಳ್ಯ ನೀಡಿ ಕರೆದೊಯ್ಯಲು 50 ಕಾರುಗಳಲ್ಲಿ ಬಂದ್ರು..!
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಈ ನೀರು ನಾಯಿಗಳು ನದಿಯಲ್ಲಿ ಈಜಾಡುತ್ತಿದ್ದು, ಬಿಸಿಲಿನ ಬೇಗೆಗೆ ಅಥವಾ ಮೀನು ಹಿಡಿಯಲು ಒಟ್ಟಿಗೆ ಬಂದಿರಬಹುದು ಎಂದು ಅವರು ಅಂದಾಜಿಸಿದ್ದಾರೆ.
ಹೊರ ಜಿಲ್ಲೆಗೆ ಹೋದ್ರೆ, ಬಂದ್ರೆ ಹೋಂ ಕ್ವಾರಂಟೈನ್ ಕಡ್ಡಾಯ
ನೀರು ನಾಯಿಗಳು ಜನರ ಕಣ್ಣಿಗೆ ಬೀಳುವುದು ಕಡಿಮೆಯಾಗಿದ್ದು, ಜನರನ್ನು ಕಂಡರೆ ನೀರಿನೊಳಕ್ಕೆ ಮರೆಯಾಗುವುದೇ ಹೆಚ್ಚು. ಆದರೆ, ಪಟ್ಟಣದಲ್ಲಿ ಗುರುವಾರ ನೀರು ನಾಯಿಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಕಂಡುಬಂದಿದ್ದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.