Asianet Suvarna News Asianet Suvarna News

ಕಸ ಎಸೆದವರ ಮೇಲೆ ಬಿತ್ತು 14 ಲಕ್ಷ ದಂಡ!

ಟ್ರಾಫಿಕ್ ನಿಯಮ ಉಲ್ಲಂಘನೆಯಂತೆ ಕಸ ಎಸೆದವರ ಮೇಲೂ ಬೀಳುತ್ತಿದೆ ಭರ್ಜರಿ ದಂಡ. ಪ್ರಕರಣ ಕೂಡ ಸಾವಿರಾರು ಮಂದಿ ವಿರುದ್ಧ ದಾಖಲಿಸಲಾಗಿದೆ.

Waste Management Register Case Against 2000 People in Bengaluru
Author
Bengaluru, First Published Oct 6, 2019, 7:37 AM IST

ಬೆಂಗಳೂರು [ಅ.06]:  ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಾಗೂ ಎಲ್ಲೆಂದರಲ್ಲಿ ಕಸ ಎಸೆದ ಪ್ರಕರಣ ಸಂಬಂಧ ಸೆಪ್ಟೆಂಬರ್‌ ತಿಂಗಳಲ್ಲಿ 1,950 ಮಂದಿ ವಿರುದ್ಧ ಕೇಸ್‌ ದಾಖಲಿಸಿ 14.33 ಲಕ್ಷ ರು. ದಂಡ ವಿಧಿಸಲಾಗಿದೆ.

ಸೆ.1ರಿಂದ ಬಿಬಿಎಂಪಿ 198 ವಾರ್ಡ್‌ಗಳಿಗೆ 232 ಜನ (ನಿವೃತ್ತ ಸೈನಿಕರು) ಮಾರ್ಷಲ್‌ಗಳನ್ನು ಪಾಲಿಕೆ ನೇಮಕ ಮಾಡಿಕೊಂಡಿತ್ತು. ಮಾರ್ಷಲ್‌ಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ನಗರದ ವಿವಿಧ ರಸ್ತೆ, ಖಾಲಿ ನಿವೇಶನ, ಹಾಳು ಬಿದ್ದ ಕಾಂಪೌಂಡ್‌, ಪಾರ್ಕ್, ಆಟದ ಮೈದಾನ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿ ಸ್ವಚ್ಛತೆ ಹಾಳು ಮಾಡುವವರಿಗೆ, ನಿಷೇಧಿತ ಪ್ಲಾಸ್ಟಿಕ್‌ ಬಳಸುವವರಿಗೆ ಹಾಗೂ ಎಲ್ಲೆಂದರಲ್ಲಿ ಕಸ ಎಸೆದು ಬ್ಲಾಕ್‌ಸ್ಪಾಟ್‌ ಸೃಷ್ಟಿಮಾಡುವವರನ್ನು ಬಿಬಿಎಂಪಿ ನೇಮಿಸಿರುವ ಮಾರ್ಷಲ್‌ಗಳು ಹಿಡಿದು ಕೇಸು ದಾಖಲಿಸಿ, ದಂಡ ವಿಧಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೆ.1ರಿಂದ 30ರ 30 ದಿನದ ಅವಧಿಯಲ್ಲಿ ರಸ್ತೆ ಬದಿ, ಕೆರೆ, ಮೈದಾನ ಸೇರಿದಂತೆ ಇನ್ನಿತರ ಕಡೆ ಅನಧಿಕೃತವಾಗಿ ಕಸ ಸುರಿಯುವವರ ವಿರುದ್ಧ 1,129 ಪ್ರಕರಣ ದಾಖಲಿಸಿ 6,24,040 ರು. ದಂಡ ವಸೂಲಿದ್ದಾರೆ. 774 ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆದಾರರಿಗೆ 7,75,345 ರು. ದಂಡ ಹಾಕಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ 56 ಮಂದಿಯನ್ನು ಹಿಡಿದು 34,110 ರು. ದಂಡ ವಿಧಿಸಲಾಗಿದೆ. ಒಟ್ಟಾರೆ 30 ದಿನಗಳಲ್ಲಿ ಮಾರ್ಷಲ್‌ಗಳು 198 ವಾರ್ಡ್‌ಗಳಲ್ಲಿ 1950 ಪ್ರಕರಣ ದಾಖಲಿಸಿ 14,33, 495 ರು. ದಂಡ ವಿಧಿಸಿದ್ದಾರೆ ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios