ಕೆಜಿಎಫ್‌ (ಅ.23):  ಮಾಜಿ ಶಾಸಕ ವೈ.ಸಂಪಂಗಿ ಬಿಜೆಪಿ ಪಕ್ಷಕ್ಕೆ ಅಡಿಪಾಯ ಹಾಕಿದ್ದಾರೆ. ಅವರಿಂದಲ್ಲೇ ಕೆಜಿಎಫ್‌ ನಗರದಲ್ಲಿ ಬಿಜೆಪಿ ಬಾವುಟ ಹಾರಿಸಲು ಸಾಧ್ಯವಾಗಿರುವುದು ಎಂಬುದನ್ನು ಯಾರು ಮರೆಯಲು ಸಾಧ್ಯವಿಲ್ಲ, ಸಂಪಂಗಿ ಇಲ್ಲದ ಬಿಜೆಪಿ ಪಕ್ಷ ಜಯಗಳಿಸುವುದಿಲ್ಲ ಎಂದು ಅಬಕಾರಿ ಸಚಿವ ನಾಗೇಶ್‌ ಹೇಳಿದರು.

ಅಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಸಚಿವರು, ಕೆಜಿಎಫ್‌ ನಗರದಲ್ಲಿ ಬಿಜೆಪಿ ಪಕ್ಷದಲ್ಲಿ 3 ಬಣಗಳಾಗಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕೆಜಿಎಫ್‌ ನಗರದಲ್ಲಿ 3 ಬಣಗಳಾಗಿರುವುದು ಪಕ್ಷಕ್ಕೆ ಹಾನಿಯಾಗಲಿದೆ. ಮುಂದಿನ ದಿನಗಳಲ್ಲಿ ಸಂಸದರು ಹಾಗೂ ನಾನು ಇಬ್ಬರು ಜೊತೆಗೊಡಿ 3 ಬಣಗಳನ್ನು ಒಂದುಗೂಡಿಸಲು ಪ್ರಯತ್ನ ನಡೆಸುತ್ತೇವೆ ಎಂದರು.

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಂಸದರು ಹಾಗೂ ನನ್ನ ನಡುವೆ ಯಾವುದೆ ಭಿನ್ನಾಭಿಪ್ರಾಯ ಇಲ್ಲ. ಕೆಲವು ಸಣ್ಣ ಪುಟ್ಟತಪ್ಪುಗಳು ಕಂಡು ಬಂದಿದ್ದು ಎಲ್ಲವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಯಡಿಯೂರಪ್ಪ, ಸಿದ್ದರಾಮಯ್ಯ ಪಕ್ಷಕ್ಕೆ ಕರೆದಿದ್ದರು: ಜೆಡಿಎಸ್‌ ನಾಯಕ

ಘಟನೆ ಹಿನ್ನೆಲೆ:  ಕೆಜಿಎಫ್‌ ತಾಲೂಕಿನ ಬಿಜೆಪಿ ಕಾರ‍್ಯಕರ್ತರಲ್ಲಿ ಮೂರು ಗುಂಪುಗಳಾಗಿವೆ. ಮಾಜಿ ಶಾಸಕ ವೈ.ಸಂಪಂಗಿ ಬೆಂಬಲಿಗರದೊಂದು,ಕೆಜಿಎಫ್‌ ನಗರ ಘಟಕದ ಅಧ್ಯಕ್ಷರಾದ ಕಮಲ್‌ನಾಥ್‌ರದು ಮತ್ತೊಂದು ಮೂರನೆಯದು ಶ್ರೀನಿವಾಸ್‌ ಅವರದು. ಈ ಮೂರು ಗುಂಪುಗಳು ಜಿಲ್ಲಾ ಉಸ್ತವಾರಿ ಸಚಿವ ಎಚ್‌.ನಾಗೇಶ್‌ ಕೆಜಿಎಫ್‌ಗೆ ಆಗಮಿಸಿದಾಗ ಮೂರು ಕಡೆ ಸ್ವಾಗತ ಕೂರಿದ್ದು ಇದಕ್ಕೆ ಇಂಬು ನೀಡಿದ್ದಂತಿತ್ತು.

ಮಾಜಿ ಶಾಸಕ ವೈ.ಸಂಪಂಗಿ ಬಿಜೆಪಿ ಘಟಕ ಪದವೀದರರ ಕ್ಷೇತ್ರದ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಮುನ್ನ ಸ್ವರ್ಣಕುಪ್ಪ ವೃತ್ತದಲ್ಲಿ ಹಾರ ಹಾಕಿ ಸಚಿವರನ್ನು ಸ್ವಾಗತಿಸಿ ಜೈಕಾರ ಹಾಕಿದರು, ನಂತರ ಬಾಲಜಿ ಕಲ್ಯಾಣ ಮಂಟಪದಲ್ಲಿ ನಡೆದು ಚುನಾವಣೆ ಸಭೆಯನ್ನು ಕೆಜಿಎಫ್‌ ನಗರ ಘಟಕದ ಅಧ್ಯಕ್ಷರಾದ ಕಮಲ್‌ನಾಥ್‌ ಬೆಂಬಲಿಗರು ಅಯೋಜಿಸಿದ್ದರು, ಇನ್ನೋಂದಡೆ ಬಿಜೆಪಿ ಪಕ್ಷದಲ್ಲಿ ಟಿಕೆಟ್‌ ಸಿಗದೆ ರೆಬಲ್‌ ಅಭ್ಯರ್ಥಿಯಾಗಿ ಶ್ರೀನಿವಾಸ್‌ರವರು ಕಿಂಗ್‌ ಜಾಜ್‌ರ್‍ಹಾಲಿನಲ್ಲಿ ಬಿಜೆಪಿ ನಿಷ್ಠಾವಂತ ಗೊಲ್ಲರ ಜನಾಂಗದವರು ಚುನಾವಣಾ ಪ್ರಚಾರ ಸಭೆಯನ್ನು ಅಯೋಜಿಸಿ ಪ್ರಚಾರ ನಡೆಸಿದರು.