ರಾಮನಾಥಪುರ (ಸೆ.25): ಇಲ್ಲಿನ ರಾಮೇಶ್ವರಸ್ವಾಮಿ ದೇವಾಲಯದಿಂದ ನದಿ ಸೇತುವೆಯವರೆಗೆ ಕಾವೇರಿ ದಂಡೆಗೆ ಶಾಶ್ವತ ತಡೆಗೋಡೆಗೆ ಸರ್ಕಾರ 1 ಕೋಟಿ ರು. ಮಂಜೂರು ಮಾಡಿದೆ. ಶೀಘ್ರವೇ ಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಎ.ಟಿ. ರಾಮಸ್ವಾಮಿ ತಿಳಿಸಿದರು.

ರಾಮನಾಥಪುರದಲ್ಲಿ ಕಾವೇರಿ ನದಿ ದಂಡೆಗೆ ಗುರುವಾರ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಕಾವೇರಿ ನದಿ ದಂಡೆಗೆ ತಾತ್ಕಾಲಿಕವಾಗಿ ಮಣ್ಣು ತಡೆ ಕಟ್ಟಲಾಗಿದೆ. ಇದರಿಂದ ಪ್ರವಾಹ ತೊಂದರೆಯಿಂದ ಪಾರಾಗಲು ಅನುಕೂಲವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂದರು.

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೇರಳಾಪುರ ಸೋಮವಾರಪೇಟೆ ವರೆಗೀನ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಈ ಬಾಗದ ಕೇರಳಾಪುರ ಹೊನ್ನೆನಹಳ್ಳಿ- ಕಾಳೇನಹಳ್ಳಿ ಬಸವಾಪಟ್ಟಣ- ಮೂಲೆಹುಸಹಳ್ಳಿ ರಾಮನಾಥಪುರ ಕೊಣನೂರು ಅಯಾಗ್ರಾಮಸ್ಥರಿಗೆ ರಸ್ತೆ ಅಗಲೀಕರಣ ವಾಗುತ್ತಿರುವ ಬಗ್ಗೆ ಎಲ್ಲರೂ ಸಹಕರಿಸುವಂತೆ ಕೋರಲಾಗಿದೆ. ಈ ರಸ್ತೆಯು 166 ಕಿಮಿ ರಸ್ತೆ ಕಾಮಗಾರಿ ಆರಂಭಗೊಳ್ಳಲಿದ್ದು ಪ್ರತಿ ಕಿ.ಮಿ ಗೆ 4.50 ಕೊಟಿ ಐವತ್ತುಲಕ್ಷ ರಸ್ತೆ ನಿರ್ಮಾಣಕ್ಕಾಗಿ ಸುಮಾರು 745 ಕೋಟಿ ನೀಡಲಾಗಿದ್ದು ಮಾಗಡಿಯಿಂದ ಸೋಮವಾರ ಪೇಟೆ ತಾಲ್ಲೂಕಿನ ಅಂಚಿನವರೆಗೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಮೇಕೆದಾಟು ಅಧಿಸೂಚನೆ: ಕೇಂದ್ರಕ್ಕೆ ಜಾರಕಿಹೊಳಿ ಮನವಿ .

ಗ್ರಾಮೀಣ ಭಾಗದ ರೈತರಿಗೆ ಮತ್ತು ಸಂಘಗಳಿಗೆ ಆಗುವ ನಷ್ಟವನ್ನು ತಪ್ಪಿಸುವ ಸಲುವಾಗಿ ಬಿಸಲಹಳ್ಳಿ ಮತ್ತು ಸಿದ್ದಾಪುರದಲ್ಲಿ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು. ಬಿಸಿಲಹಳ್ಳಿಯಲ್ಲಿ ನಿರ್ಮಿಸುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಹಾಸನಹಾಲು ಒಕ್ಕೂಟದಿಂದ 2 ಲಕ್ಷ. ಮಹಾಮಂಡಳದಿಂದ 3 ಲಕ್ಷ ಮತ್ತು ಧರ್ಮಸ್ಥಳಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ 75 ಸಾವಿರ ರೂ ನೀಡಲಾಗುತ್ತಿದೆ. ಎಂದರು.

ಬಿಸಿಲಹಳ್ಳಿಯಲ್ಲಿ ನೂತನ ಕಟ್ಟಡದ ಜೊತೆಗೆ ಕರ್ನಾಟಕ ರಾಜ್ಯ ಹಾಲು ಒಕ್ಕೂಟದ ದಿಂದ ಹಾಲು ಶೀಥಲೀಕರಣ ಕೇಂದ್ರವನ್ನು 20 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸಿದ್ದಾಪುರದಲ್ಲಿಯೂ ಸಹ 20 ಲಕ್ಷ ರು.ಗಳ ವೆಚ್ಚದಲ್ಲಿ ಹಾಲುಶೀಥಲೀಕರಣ ಕೇಂದ್ರವನ್ನು ಆರಂಭಿಸಲಾಗಿದ್ದು, ಬಿಸಲಹಳ್ಳಿ ಮತ್ತು ಸಿದ್ದಾಪುರದಲ್ಲಿ ನಿರ್ಮಾಣವಾಗುವ ಶೀಥಲೀಕರಣ ಕೇಂದ್ರಗಳು ತಲಾ 3 ಸಾವಿರ ಲೀಟರ್‌ ಹಾಲನ್ನು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು