ಸಿಟಿ ರವಿ ಬೆಂಬಲಿಗರಿಗೆ ಮತದಾರರ ತರಾಟೆ: ನಮ್ಮೂರು ಅಭಿವೃದ್ಧಿಗೆ 15 ವರ್ಷ ಸಾಕಾಗಿಲ್ವಾ.?
ನಮ್ಮ ಊರನ್ನ ಅಭಿವೃದ್ಧಿ ಮಾಡಲು ಸಿ.ಟಿ. ರವಿಗೆ 15 ವರ್ಷ ಸಾಕಾಗಿಲ್ವಾ?
ಸಿ.ಟಿ. ರವಿ ಭಾಮೈದ ಸುದರ್ಶನ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪನಿಗೆ ಗ್ರಾಮಸ್ಥರ ತರಾಟೆ
ನಮ್ಮೂರಿಗೆ ಏನು ಮಾಡಿದ್ದೀರಿ ಅಂತ ಪ್ರಚಾರಕ್ಕೆ ಬಂದಿದ್ದೀರಿ ಎಂದು ಮತದಾರರಿಂದ ಕ್ಲಾಸ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.14): ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಅಖಾಡ ರಂಗೇರುತ್ತಿದೆ. ಬಿಜೆಪಿ ಶಾಸಕ ಸಿ.ಟಿ ರವಿ ವಿರುದ್ದ ಪರ ವಿರುದ್ದ ಹೇಳಿಕೆಗಳು ಕೂಡ ಜೋರಾಗಿದೆ. ಕಳೆದ 20 ವರ್ಷಗಳಿಂದ ಶಾಸಕರಾಗಿರುವ ಸಿ.ಟಿ.ರವಿ ಏನು ಮಾಡಿದ್ದಾರೆ.
ಚಿಕ್ಕಮಗಳೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಅವರಿಗೆ 20 ವರ್ಷ ಸಾಕಾಗಿಲ್ವಾ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹಾಗೂ ಸಿ.ಟಿ.ರವಿ ಸಂಬಂಧಿ ಆಗಿರುವ ಸುದರ್ಶನ್‌ಗೆ ಮತದಾರರು ಭರ್ಜರಿ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್, ಜೆಡಿಎಸ್‌ನಲ್ಲಿ ಡಿಎನ್‌ಎ ಆಧರಿತ ನಾಯಕತ್ವ: ಸಿ.ಟಿ.ರವಿ
ಸಿ.ಟಿ. ರವಿ ಭಾಮೈದ ಸುದರ್ಶನ್: ಚಿಕ್ಕಮಗಳೂರು ವಿಧಾನಸಭಾ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸಕ ಸಿ.ಟಿ ರವಿ ಪರವಾಗಿ ಬಿಜೆಪಿ ಮುಖಂಡರು ಸಭೆ ನಡೆಸುತ್ತಿದ್ದಾರೆ. ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಸಭೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹಾಗೂ ಶಾಸಕ ಸಿ.ಟಿ. ರವಿ ಬಾಮೈದ ಸುದರ್ಶನ್ ಚುನಾವಣಾ ಪ್ರಚಾರಕ್ಕೆಂದು ಭೇಟಿ ನೀಡಿದ್ದರು. ಈ ವೇಳೆ, ಮತದಾರರು 20 ವರ್ಷದಿಂದ ಶಾಸಕರಾಗಿದ್ದಾರೆ. ಲಿಂಗಾಯತರ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರಸ್ತೆ ಮಧ್ಯೆಯೇ ಬಿಜೆಪಿ ಮುಖಂಡರಿಗೆ ಕ್ಲಾಸ್: ಚುನಾವಣೆ ಬಂದಿದೆ ಎಂದು ಈಗ ಬಂದಿದ್ದೀರಾ ಇಷ್ಟು ವರ್ಷ ಎಲ್ಲಿಗೆ ಹೋಗಿದ್ರಿ ಎಂದು ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ಊರನ್ನ ಅಭಿವೃದ್ಧಿ ಮಾಡಲು ಸಿ.ಟಿ. ರವಿಗೆ 20 ವರ್ಷ ಸಾಕಾಗಿಲ್ವಾ ಎಂದು ಪ್ರಚಾರಕ್ಕೆ ಹೋದವರಿಗೆ ಪ್ರಶ್ನಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪ್ರಚಾರದ ವರಸೆಯನ್ನೂ ಜೋರು ಮಾಡಿದೆ. ಸಿ.ಟಿ.ರವಿ ಸಂಬಂಧಿ ಸುದರ್ಶನ್, ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಗ್ರಾಮ ಮಟ್ಟದಲ್ಲಿ ಸಭೆ ಆರಂಭಿಸಿದ್ದಾರೆ. ಸಭೆ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಉದ್ದೇಬೋರನಹಳ್ಳಿಗೆ ಹೋದಾಗ ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ. ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡ ಹಿನ್ನೆಲೆ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಘಟಕ ಕೂಡ ಮುಜುಗರಕ್ಕೀಡಾಗಿದೆ.
ಮತಾಂಧ ಟಿಪ್ಪುವನ್ನು ಕೊಂದ ದೊಡ್ಡ ನಂಜೇಗೌಡ, ಉರಿಗೌಡರ ಹೆಸರು ತೆರವುಗೊಳಿಸಿದ್ದು ತಪ್ಪು: ಸಿ.ಟಿ.ರವಿ
ಬಿಜೆಪಿಯ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ: ಕಳೆದ ಹತ್ತು ದಿನಗಳ ಹಿಂದೆ ಬಿಜೆಪಿಯ ಪ್ರಚಾರ ಕಾರ್ಯಕ್ರಮದ ವೇಳೆ ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿಯಲ್ಲಿ ಬಿಜೆಪಿಯವರು ನೀಡಿದ ಸೀರೆಯನ್ನ ಮತದಾರರು ನಡು ರಸ್ತೆಯಲ್ಲಿ ಬೆಂಕಿ ಹಾಕಿದ್ದರು. ನಮಗೆ ಸೀರೆ ಬೇಡ, ಸೌಲಭ್ಯ ಬೇಕು ಎಂದು ಐದಾರು ಸೀರೆಗಳನ್ನ ನಡು ರಸ್ತೆಯಲ್ಲಿ ಸುಟ್ಟು ಹಾಕಿದ್ದರು. ಇದೀಗ, ಪ್ರಚಾರ ಹಾಗೂ ಸಭೆಗೆ ಹೋದಾಗಲೂ ರಸ್ತೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವುದು ಬಿಜೆಪಿ ವಲಯಕ್ಕೆ ಬಿಸಿ ತುಪ್ಪವಾಗಿದೆ. ಇನ್ನು ಸಿಟಿ ರವಿ ಅವರ ಪ್ರಚಾರ ಕಾರ್ಯಗಳಿಗೆ ಜನರು ಆಗಿಂದಾಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿವೆ.