Asianet Suvarna News Asianet Suvarna News

ಬಾಂಬರ್ ಆದಿತ್ಯ ರಾವ್ ಧ್ವನಿ ಪರೀಕ್ಷೆ: ಶನಿವಾರ ಅಂತ್ಯವಾಗುತ್ತೆ ಪೊಲೀಸ್ ಕಸ್ಟಡಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಬಾಂಬರ್ ಆದಿತ್ಯ ರಾವ್ ಧ್ವನಿ ಪರೀಕ್ಷೆ ಮಾಡಲಾಗಿದೆ. ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಕರೆ ಮಾಡಿದ ಹಿನ್ನಲೆ ಆದಿತ್ಯ ರಾವ್‌ನ ಧ್ವನಿಯನ್ನು ಪರೀಕ್ಷಿಸಲಾಗುತ್ತಿದೆ.

Voice test of bomber aditya rao in mangalore
Author
Bangalore, First Published Jan 31, 2020, 2:08 PM IST
  • Facebook
  • Twitter
  • Whatsapp

ಮಂಗಳೂರು(ಜ.31): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಬಾಂಬರ್ ಆದಿತ್ಯ ರಾವ್ ಧ್ವನಿ ಪರೀಕ್ಷೆ ಮಾಡಲಾಗಿದೆ. ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಕರೆ ಮಾಡಿದ ಹಿನ್ನಲೆ ಆದಿತ್ಯ ರಾವ್‌ನ ಧ್ವನಿಯನ್ನು ಪರೀಕ್ಷಿಸಲಾಗುತ್ತಿದೆ.

ಮಂಗಳೂರು ಏರ್ ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲೇ ಆರೋಪಿ ಆದಿತ್ಯಾ ರಾವ್ ಧ್ವನಿ ಪರೀಕ್ಷೆ ಮಾಡಲಾಗಿದೆ. ಪಣಂಬೂರು ಎಸಿಪಿ ಕಚೇರಿಯಲ್ಲಿ ಆದಿತ್ಯಾ ಧ್ವನಿ ಪರೀಕ್ಷೆ ನಡೆಸಲಾಗಿದೆ.

ಕಬ್ಬಿನ ಗದ್ದೆಯಲ್ಲಿ ಸಿಕ್ಕಿತು ಮುದ್ದು ಮರಿ..!

ಶನಿವಾರ ಆದಿತ್ಯಾ ರಾವ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಶನಿವಾರ ಬೆಳಗ್ಗೆ ಆದಿತ್ಯ ರಾವ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಬೆಂಗಳೂರಿನಲ್ಲಿ ವಿಚಾರಣೆ ಸಲುವಾಗಿ ಮತ್ತೆ ಕಸ್ಟಡಿಗೆ ಕೇಳಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

Follow Us:
Download App:
  • android
  • ios