ಹುಣಸೂರು:(ಸೆ. 25) ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಏತನ್ಮಧ್ಯೆ ಮೈಸೂರು ಜಿಲ್ಲೆಯ ಹುಣಸೂರು ಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಲು ಅಡಗೂರು ಎಚ್.ವಿಶ್ವನಾಥ್ ಸಿದ್ಧ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 


ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಹೆಚ್. ಎಚ್.ವಿಶ್ವನಾಥ್ ಕೂಡ ಕಾರಣಕರ್ತರು ಎಂದು ಹೇಳಲಾಗುತ್ತಿದೆ. ಜೆಡಿಎಸ್- ಕಾಂಗ್ರೆಸ್ 17 ಶಾಸಕರು ಬೆಂಬಲ ವಾಪಸ್ ಪಡೆದುಕೊಂಡಿದ್ದರಿಂದ ಸಮ್ಮಿಶ್ರ ಸರ್ಕಾರ ಬಿದ್ದಿತ್ತು. ಈ ಗುಂಪಿನಲ್ಲಿ  ಎಚ್.ವಿಶ್ವನಾಥ್ ಹೆಚ್ಚು ಮುಂಚೂಣಿಯಲ್ಲಿದ್ದವರು. ಬಿಜೆಪಿ ತೋರಿಸಿದ ಆಸೆ ಆಮಿಷಗಳಿಂದ ಎಲ್ಲ 17 ಶಾಸಕರು ರಾಜೀನಾಮೆ ನೀಡಿ ಸರ್ಕಾರ ಬೀಳಲು ಕಾರಣವಾಗಿದ್ದರು. 

ಸುಪ್ರೀಂ ತೀರ್ಪಿನ ನಿರೀಕ್ಷೆಯಲ್ಲಿ ವಿಶ್ವನಾಥ್


ರಾಜಕೀಯ ಸಂಧ್ಯಾಕಾಲದಲ್ಲಿ ವಿಶ್ವನಾಥ್ ಅವರು ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಬೇಕಿದೆ. ಹೀಗಾಗಿ ವಿಶ್ವನಾಥ್ ಅವರು ಸುಪ್ರೀಂಕೋರ್ಟ್ ನ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಅನರ್ಹತೆ ರದ್ದಾದರೆ ಬಿಜೆಪಿ ಅಭ್ಯರ್ಥಿಯಾಗಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸಂಸದ ಶ್ರೀನಿವಾಸ ಪ್ರಸಾದ್, ಸಚಿವ ಸೋಮಣ್ಣ ಮುಂದೆ ಇಂಗಿತ ವ್ಯಕ್ತಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಒಂದು ವೇಳೆ ಅವಕಾಶ ಸಿಗದಿದ್ದರೆ ಉತ್ತರಾಧಿಕಾರಿಯಾಗಿ ತಮ್ಮ ಹಿರಿಯ ಪುತ್ರ ಅಮಿತ್ ದೇವರಹಟ್ಟಿ ಪರ ಲಾಭಿ ನಡೆಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ರಾಜಕೀಯ ಅನುಭವ ಹೊಂದಿರುವ ಅಮಿತ್ ಅವರಿಗೆ ಹುಣಸೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸಲು ಸಿದ್ಧತೆ ನಡೆಸಿದ್ದಾರೆ. 


ಮುಂಚೂಣಿಗೆ ಬಂದ ಯೋಗಾನಂದ್ ಹೆಸರು 


ಇನ್ನೂ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಹುಣಸೂರು ತಾಲೂಕು ಬಿಜೆಪಿ ಅಧ್ಯಕ್ಷ ಯೋಗಾನಂದ್ ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆಗೆ ಬಲ ತುಂಬಲು ಮೂಲ ಬಿಜೆಪಿ ಮುಖಂಡನಿಗೆ ಮಣೆ ಹಾಕಲು ಕೋರಿಕೆ ಮಾಡಿಕೊಳ್ಳಲಾಗಿದೆ. 

ವಿಶ್ವನಾಥ್‌ಗೆ ಶಾಸ್ತಿ ; ಹುಣಸೂರಿನಲ್ಲಿ ಜೆಡಿಎಸ್‌ನಿಂದ ಅಚ್ಚರಿಯ ಅಭ್ಯರ್ಥಿ!

ಅಂತಿಮವಾಗಿ ಯಾರಿಗೆ ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂಬುದರ ಬಗ್ಗೆ ಕಾದುನೋಡಬೇಕಿದೆ.