ವಿಶ್ವಕರ್ಮ ಸಮಾಜವನ್ನು STಗೆ ಸೇರಿಸಲು ಸಂಘಟನೆಗೆ ಮುಂದಾದ ಕೆ.ಪಿ.ನಂಜುಂಡಿ
ವಿಶ್ವಕರ್ಮ ಸಮಾಜ ಸಂಘಟನೆಗೆ ಮುಂದಾದ ಬಿಜೆಪಿ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ. ವಿಶ್ವಕರ್ಮ ಸಮಾಜವನ್ನ STಗೆ ಸೇರಿಸಲು ಹೋರಾಟಕ್ಕೆ ಸಿದ್ಧತೆ. ರಾಜ್ಯದ 41 ವಿಶ್ವಕರ್ಮ ಪಂಗಡಗಳು ಒಂದು ಮಾಡಲು ನಂಜುಂಡಿ ಓಡಾಟ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಆ.7): ರಾಜ್ಯದಲ್ಲಿ ದಿನೇ ದಿನೇ ಹಿಂದುಳಿದ ವರ್ಗಗಳಲ್ಲಿನ ಜಾತಿಗಳಿಗೆ ಎಸ್ ಟಿ ಮೀಸಲಾತಿ ಬೇಕು ಎಂಬ ಕೂಗು ಹೆಚ್ಚಾಗುತ್ತಿದೆ. ಇಷ್ಟು ದಿನಗಳ ಕಾಲ ಕುರುಬರು ಪ್ರ ವರ್ಗ 2ಎಯಿಂದ ನಮಗೆ ಎಸ್ ಟಿಗೆ ಸೇರಿಸಿ ಅಂತ ಹೋರಾಟ ನಡೆಸಿದ್ರು. ಈಗ ಅದೇ 2ಎ ಪಟ್ಟಿಯಲ್ಲಿ ಇದ್ದ ವಿಶ್ವಕರ್ಮ ಸಮಾಜದವರು ಕೂಡ ಹಿಂದುಳಿದ ವರ್ಗದಲ್ಲಿ 197 ಜಾತಿಗಳು ಬರುತ್ತವೆ. ಹೀಗಾಗಿ ವಿಶ್ವಕರ್ಮ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಏಕೆಂದರೆ ನಾವು ಮೂಲತಃ ಹಳ್ಳಿಗಳಿಂದ ಬಂದವರು.ವಿಶ್ವಕರ್ಮ ಸಮಾಜದ ಬಗ್ಗೆ ಕುಲಶಾಸ್ತ್ರ ಅಧ್ಯಯನ ನಡೆಸದೇ ನಮ್ಮನ್ನು 2ಎ ವರ್ಗಕ್ಕೆ ಸೇರಿಸಲಾಗಿದೆ. ನಾವು ದೇವರ ಮೂರ್ತಿ ಮಾಡುತ್ತಾ ನಮ್ಮ ಕುಲ ಕಸುಬು ನಂಬಿ ಜೀವನ ನಡೆಸುತ್ತಾ ಬಂದಿದ್ದೇವೆ. ಇತ್ತೀಚಿಗೆ ನಮ್ಮ ಕುಲ ಕಸುಬು ನಿಂತು ಹೋಗಿದೆ. ಹೀಗಾಗಿ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದೆ ಇದ್ದೇವೆ. ಇತರೆ ಬಲಾಢ್ಯ ಸಮಾಜಗಳೊಡನೆ ಸ್ಪರ್ಧೆ ನೀಡಲಾಗದೆ ಅಭಿವೃದ್ಧಿ ವಂಚಿತವಾಗಿದ್ದೇವೆ. ಒಂದು ಬಾರಿ ವಿಶ್ವಕರ್ಮ ಸಮಾಜದ ಬಗ್ಗೆ ಸರ್ಕಾರ ಕುಲಶಾಸ್ತ್ರ ಅಧ್ಯಯನ ಮಾಡಿಸಿ ನಮಗೆ ಆದ ಅನ್ಯಾಯವನ್ನು ಸರಿಪಡಿಸಿ ಎಸ್ ಟಿ ಮೀಸಲಾತಿಗೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಸರ್ಕಾರದ ಬಳಿ ಮನವಿ ಮಾಡಿದರು.
ವಿಶ್ವಕರ್ಮ ಸಮಾಜಕ್ಕೆ ಯಾಕೆ ಎಸ್ ಟಿ ಮೀಸಲಾತಿ ಬೇಕು:
ರಾಯಚೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ. ವಿಶ್ವಕರ್ಮ ಸಮಾಜವೂ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಸರ್ಕಾರ ನಿಜವಾಗಲೂ ಕುಲಶಾಸ್ತ್ರ ಅಧ್ಯಯನ ಮಾಡಿದ್ರೆ ನಾವು ಎಸ್ ಟಿ ಪಂಗಡಕ್ಕೆ ಸೇರುತ್ತೇವೆ. ಏಕೆಂದರೆ ನಮ್ಮ ಸಮಾಜದ ಹುಟ್ಟು ಶುರುವಾಗಿದ್ದು ಹಳ್ಳಿಯ ಗುಡ್ಡಗಾಡು ಪ್ರದೇಶಗಳಲ್ಲಿ. ನಮ್ಮ ಸಮಾಜದಲ್ಲಿ ಯಾರು ಪಿಎಚ್ ಡಿ ಪದವಿ ಪಡೆದು ಸಮಾಜವನ್ನು ಕಟ್ಟಿಲ್ಲ. ರಾಜ್ಯದಲ್ಲಿ ವಿಶ್ವಕರ್ಮ ಸಮಾಜವೂ ಶಿಕ್ಷಣದಿಂದ ವಂಚಿತರಾದ ಸಮಾಜವಾಗಿದೆ. ನಾನು ಕಳೆದ 24 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ನಮ್ಮ ಸಮಾಜದ ವಿದ್ಯಾವಂತರಿಗೆ ಒಂದು ಕೆಲಸ ಕೊಡಿಸಲು ಆಗುತ್ತಿಲ್ಲ.
ನಾವು ರಾಜಕೀಯವಾಗಿ ತೀರ ಹಿಂದೂಳಿದ್ದೇವೆ. ಕೆಪಿಎಸ್ ಸಿಯಲ್ಲಿ ಉದ್ಯೋಗವೂ ಗಿಟ್ಟಿಸಿಕೊಳ್ಳಲು ಆಗುತ್ತಿಲ್ಲ. ವಿಶ್ವಕರ್ಮ ಸಮಾಜ ಉಳಿಯಬೇಕು. ರಾಜ್ಯದಲ್ಲಿ ಬೆಳೆಯಬೇಕು ಅಂದ್ರೆ ಮೀಸಲಾತಿ ಒಂದೇ ದಾರಿಯಾಗಿದೆ. ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಹಾಕುವುದು ಅವಕಾಶ ಪಡೆಯುವುದಕ್ಕೆ.. ಇದನ್ನು ತಿಳಿಸಲು ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಇಡೀ ರಾಜ್ಯದ 220 ತಾಲೂಕಿನ 745 ಹೋಬಳಿಗೆ ಭೇಟಿ ನೀಡಿ ವಿಶ್ವಕರ್ಮ ಸಮಾಜವನ್ನು ಜಾಗೃತಿಗೊಳಿಸುವುದ ಜೊತೆಗೆ ಎಸ್ ಟಿ ಹೋರಾಟಕ್ಕಾಗಿ ಸಂಘಟನೆ ಮಾಡಲು ಮುಂದಾಗಿದ್ದಾನೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜಕ್ಕೆ ಎರಡು ಜಿಲ್ಲೆಯಲ್ಲಿ ಎಸ್ ಟಿ ಮೀಸಲಾತಿ:
ವಿಶ್ವಕರ್ಮ ಸಮಾಜದಲ್ಲಿ ಒಟ್ಟು 41 ಪಂಗಡಗಳು ಇವೆ. ಆ 41 ಪಂಗಡಗಳಲ್ಲಿ ಕಮ್ಮಾ ಎಂಬುವ ಪಂಗಡಕ್ಕೆ ಚಾಮರಾಜನಗರದ ಕೊಳ್ಳೆಗಾಲದಲ್ಲಿ ಎಸ್ ಟಿ ನೀಡಿದ್ದಾರೆ. ಅದೇ ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಕಮ್ಮಾ ಪಂಗಡಕ್ಕೆ ಎಸ್ ಟಿ ನೀಡಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯಾದ್ಯಂತ ಇರುವ ವಿಶ್ವಕರ್ಮ ಸಮಾಜದ 41 ಪಂಗಡಕ್ಕೂ ಎಸ್ ಟಿ ಮೀಸಲಾತಿ ನೀಡಬೇಕು ಎಂಬುವುದೇ ನಮ್ಮ ಹೋರಾಟವಾಗಿದೆ ಎಂದು ಎಂಎಲ್ ಸಿ ಕೆ.ಪಿ.ನಂಜುಂಡಿ ಆಗ್ರಹಿಸಿದರು.
ಮೀಸಲಾತಿ ಎಂಬುವುದು ರಾಜಾಶ್ರಯ ಇದ್ದಂತೆ: ಕೆ.ಪಿ. ನಂಜುಂಡಿ
ರಾಜ್ಯ ಸರ್ಕಾರ ವಿಶ್ವ ಕರ್ಮ ಅಭಿವೃದ್ಧಿ ನಿಗಮ ಮಾಡಿದೆ. ಅದಕ್ಕೆ 125 ಕೋಟಿ ರೂಪಾಯಿ ಸಹ ನೀಡಿದೆ. ಆದ್ರೆ ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮಾಜ.ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತ ಸ್ಥಾನದಲ್ಲಿ ನಾವು ಇಲ್ಲ. ಇನ್ನೂ ರಾಜಕೀಯ ಕ್ಷೇತ್ರದಲ್ಲಿ ನಾವು ತಾ.ಪಂ. ಮತ್ತು ಜಿ.ಪಂ. ಅಧ್ಯಕ್ಷರು ಸಹ ಆಗಲು ಆಗಿಲ್ಲ. ಹೀಗಾಗಿ ನಮ್ಮ ಅಭಿವೃದ್ಧಿಗಾಗಿ ಮೀಸಲಾತಿ ಅವಶ್ಯಕತೆ ಇದೆ. ಮೀಸಲಾತಿ ಎಂಬುವುದು ನಮಗೆ ರಾಜಾಶ್ರಯ ಇದ್ದಂತೆ ಎಂದು ಮೀಸಲಾತಿಯ ಮಹತ್ವದ ಬಗ್ಗೆ ಕೆ.ಪಿ. ನಂಜುಂಡಿ ತಿಳಿಸಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಟಾಂಗ್ ನೀಡಿದ ಕೆ.ಪಿ.ನಂಜುಂಡಿ
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್ ಸಿ ಕೆ.ಪಿ.ನಂಜುಂಡಿ ನೂರಕ್ಕೆ ನೂರು ಭಾಗ ಮುಂದಿನ 7 ತಿಂಗಳು ರಾಜ್ಯದ ಸಿಎಂ ಆಗಿ ಬೊಮ್ಮಾಯಿ ಅವರೇ ಇರುತ್ತಾರೆ. ಮುಂದಿನ ವಿಧಾನ ಚುನಾವಣೆಯೂ ಸಹ ಬೊಮ್ಮಾಯಿ ಮತ್ತು ಸಾಮೂಹಿಕ ನಾಯಕತ್ವದಲ್ಲಿ ನಡೆಯುವುದು. ಯಾವ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ರಾಜ್ಯದಲ್ಲಿ ನೂರೆಂಟು ಗಾಸಿಫ್ ಗಳು ಬರುತ್ತವೆ. ಅದರಂತೆ ಸಿಎಂ ಬದಲಾವಣೆಯೂ ಒಂದು ಗಾಸಿಪ್ ಅಷ್ಟೇ. ಆರು ತಿಂಗಳಿಂದಲ್ಲೂ ಈ ಗಾಸಿಫ್ ನಡೆಯುತ್ತಿದೆ. ಅರುಣ್ ಸಿಂಗ್ ಮತ್ತು ಜೆ.ಪಿ. ನಡ್ಡಾ ಮತ್ತು ಅಮಿತ್ ಶಾ ಕೂಡ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದ ಕೆಪಿ ನಂಜುಂಡಿ ಸ್ಪಷ್ಟನೆ ನೀಡಿದರು.
ಕಾಳಿದೇವಿಯ ಅಪಮಾನಕ್ಕೆ ವಿಶ್ವಕರ್ಮ ಮಠಾಧೀಶರು, ಮುಖಂಡರ ಖಂಡನೆ
ಇನ್ನೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಟಾಂಗ್ ನೀಡಿದ್ರು. ನಾನು ಅಕಸ್ಮಾತಾಗಿ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರೆ. ಸಾಯೋವರೆಗೂ ನೀವೆಲ್ಲಾ ನನ್ನ ಕಾಲಿಗೆ ನಮಸ್ಕಾರ ಮಾಡುತ್ತಲೇ ಇರಬೇಕು, ಏಕೆಂದರೆ ನಾನು ಬ್ರಾಹ್ಮಣ ಎಂಬ ಹೇಳಿಕೆಯೂ ಅದು ರಮೇಶ್ ಕುಮಾರ್ ಅವರ ಅಭಿಪ್ರಾಯವಾಗಿದೆ. ಈಗ ಕಾಲ ಬದಲಾವಣೆ ಆಗಿದೆ. ಈಗ ಎಲ್ಲರೂ ಅಂಬೇಡ್ಕರ್ ಅವರು ಬರೆದ ಸಂವಿಧಾನ ಚೆನ್ನಾಗಿ ಓದುತ್ತಿದ್ದಾರೆ. ಈಗ ಯಾರಿಗೂ ಯಾರು ಕಾಲಿಗೆ ಬೀಳಲ್ಲ. ಅರ್ಹತೆ ಇದ್ರೆ ಮನುಷ್ಯ ತಾನಾಗೇ ಹೋಗಿ ಕಾಲಿಗೆ ಬೀಳುತ್ತಾನೆ. ಹುಟ್ಟುತ್ತಾ ಯಾರು ಬ್ರಾಹ್ಮಣರು ಆಗಿದ್ರೆ ಈಗ ಯಾರು ಹೋಗಿ ಕಾಲಿಗೆ ಬೀಳಲ್ಲ. ಅಂತಹ ಪರಿಪಾಠ ಎಲ್ಲಿಯೂ ಇಲ್ಲ. ಬ್ರಾಹ್ಮಣತ್ವ ಎಂಬುವುದು ವ್ಯಕ್ತಿಯಿಂದ ಬರುವಂತದ್ದು ಅಲ್ಲ. ವ್ಯಕ್ತಿಯ ನಡವಳಿಕೆಯಿಂದ ಬರುವುದು ಅಂತ ರಮೇಶ್ ಕುಮಾರ್ ಅವರೇ ಹೇಳಿದ್ದಾರೆ. ರಮೇಶ ಕುಮಾರ್ ಅವರು ಆಗಾಗ ಇಂತಹ ಬಾಂಬ್ ಗಳು ಹಾಕುತ್ತಾರೆ ಎಂದು ಕೆ.ಪಿ. ನಂಜುಂಡಿ ಹೇಳಿದರು.