ಕೊರೋನಾ ಹೆಸರಲ್ಲಿ ಮತಾಂತರ: ಕ್ರೈಸ್ತ ಮಿಷನರಿ ಸದಸ್ಯರಿಗೆ ಬಿಸಿ ಮುಟ್ಟಿಸಿದ ಗ್ರಾಮಸ್ಥರು
ಕೊರೋನಾ ಹೆಸರಲ್ಲಿ ಮತಾಂತರ ನಡೆಸಲೆತ್ನಿಸಿದವರಿಗೆ ಎಚ್ಚರಿಕೆ ನೀಡಿದ ಸ್ಥಳೀಯರು| ರಾಮನಗರ ಜಿಲ್ಲೆ ಕುದೂರು ಸಮೀಪದ ಅರಸನ ಗುಂಟೆ ಗ್ರಾಮದಲ್ಲಿ ನಡೆದ ಘಟನೆ|
ಕುದೂರು(ಜು.13): ಜನರಲ್ಲಿ ಮೂಡಿರುವ ಕೊರೋನಾ ಭಯವನ್ನು ಬಂಡವಾಳ ಮಾಡಿಕೊಂಡು ಅಮಾಯಕರನ್ನು ಮತಾಂತರ ಮಾಡಲು ಮುಂದಾದ ಕ್ರೈಸ್ತ ಮಿಷನರಿ ಸದಸ್ಯರಿಗೆ ಸ್ಥಳೀಯರು ಬಿಸಿ ಮುಟ್ಟಿಸಿದ ಘಟನೆ ರಾಮನಗರ ಜಿಲ್ಲೆ ಕುದೂರು ಸಮೀಪದ ಅರಸನ ಗುಂಟೆ ಗ್ರಾಮದಲ್ಲಿ ನಡೆದಿದೆ.
ಅರಸನಗುಂಟೆ ಗ್ರಾಮದ ಮನೆಯೊಂದಕ್ಕೆ ಶನಿವಾರ ತಡರಾತ್ರಿ ಆಗಮಿಸಿದ ಮಿಷನರಿ ಸದಸ್ಯರು, ನಾವು ಹೇಳಿದಂತೆ ನೀವು ನಮ್ಮ ದೇವರನ್ನು ಪ್ರಾರ್ಥನೆ ಮಾಡಿದರೆ ಕೊರೋನಾ ನಿಮಗೆ ಬರುವುದಿಲ್ಲ. ಬಂದಿದ್ದರೂ ವಾಸಿಯಾಗುತ್ತದೆ ಎಂದು ತಮ್ಮ ಧರ್ಮ ಪ್ರಚಾರಕ್ಕೆ ಮುಂದಾಗಿದ್ದಾರೆ.
ರಾಮನಗರ: ಕೊರೋನಾ ವಾರಿಯರ್ಸ್ಗೇ ಸೋಂಕು, ಬೆಚ್ಚಿಬಿದ್ದ ಜನತೆ
ಈ ಸಂಗತಿ ತಿಳಿದು ಗ್ರಾಮದ ಯುವಕರು ಇವರನ್ನು ಅಡ್ಡಗಟ್ಟಿ ಕುದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇನ್ನೊಮ್ಮೆ ಇಂತಹ ಪ್ರಕರಣ ಸಂಭವಿಸಬಾರದು ಎಂದು ಮಿಷನರಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.