Chitradurga: ಮೂಖ ಪ್ರಾಣಿ ಕತ್ತೆಯಲ್ಲೇ ದೇವರ ಸ್ವರೂಪ ಕಂಡ ಗ್ರಾಮಸ್ಥರು, ಶಾಸ್ತ್ರೋಕ್ತವಾಗಿ ಶವ ಸಂಸ್ಕಾರ!
ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ದೇವರ ಕತ್ತೆ ತೀರಿ ಹೋಯ್ತು ಎಂದು ಇಡೀ ಗ್ರಾಮವೇ ಶೋಕ ಸಾಗರಲ್ಲಿ ಆ ಕತ್ತೆಗೆ ಭಾವಪೂರ್ಣ ಶ್ರಂದ್ದಾಂಜಲಿ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.1): ಒಂದು ಕುಟುಂಬದಲ್ಲಿ ಯಾರಾದ್ರು ತೀರಿ ಹೋದ್ರೆ ಅವರಿಗೆ ಆ ಧರ್ಮ ಜಾತಿಯ ಪ್ರಕಾರ ಶ್ರದ್ದಾಂಜಲಿ ಸಲ್ಲಿಸುವುದು ಪದ್ದತಿ. ಆದ್ರೆ ಈ ಒಂದು ಗ್ರಾಮದಲ್ಲಿ ದೇವರ ಕತ್ತೆ ತೀರಿ ಹೋಯ್ತು ಎಂದು ಇಡೀ ಗ್ರಾಮವೇ ಶೋಕ ಸಾಗರಲ್ಲಿ ಆ ಕತ್ತೆಗೆ ಭಾವಪೂರ್ಣ ಶ್ರಂದ್ದಾಂಜಲಿ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೀಗೆ ಸಾವನ್ನಪ್ಪಿರೋ ಕತ್ತೆಯನ್ನು ಹಿಂದೂ ಸಂಪ್ರದಾಯದಂತೆ ಶವಕ್ಕೆ ಸಿಂಗಾರಗೊಳಿಸಿ ಗ್ರಾಮದ ತುಂಬಾ ತಮಟೆ ಬಾರಿಸಿಕೊಂಡು ಮೆರವಣಿಗೆ ಮಾಡಿಕೊಂಡು ಹೋಗಿ ಶವ ಸಂಸ್ಕಾರ ಮಾಡ್ತಿರುವ ಗ್ರಾಮಸ್ಥರು. ಇದೇನಪ್ಪ ಈಗಿನ ಕಾಲದಲ್ಲಿ ತಮ್ಮ ಕುಟುಂಬದವರು ಸತ್ತರೇ ಅವರ ಶವ ಸಂಸ್ಕಾರಕ್ಕೆ ಬಾರದ ಜನರ ಮಧ್ಯೆ ಇವರು ಒಂದು ಪ್ರಾಣಿಗೆ ಈ ರೀತಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ ಎಂದು ಆಶ್ಚರ್ಯ ಪಡುವವರ ಸಂಖ್ಯೆಯೇ ಹೆಚ್ಚು. ಇಂತಹ ಮಾನವೀಯ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮದ್ದೇರು ಗ್ರಾಮ.
'ಇಷ್ಟು ವರ್ಷ ಕಾಂಗ್ರೆಸ್ ಕತ್ತೆ ಕಾಯ್ತಾ ಇತ್ತಾ'?; ಜೋಶಿ ಹೇಳಿಕೆಗೆ ಕಾಂಗ್ರೆಸ್ಸಿಗರ ಆಕ್ರೋಶ
ಕಳೆದ ಮೂರು ತಿಂಗಳ ಹಿಂದಷ್ಟೇ ಗ್ರಾಮಕ್ಕೆ ಕತ್ತೆಯೊಂದು ಆಗಮಿಸಿದೆ. ಅಂದಿನಿಂದ ಇಡೀ ಗ್ರಾಮದಲ್ಲಿ ಎಲ್ಲರೊಟ್ಟಿಗೂ ಬೆರೆತು ತನ್ನದೇ ಜೀವನ ಆರಂಭಿಸಿದೆ. ಇದನ್ನು ಕಂಡ ಗ್ರಾಮಸ್ಥರು ಕತ್ತೆಯಲ್ಲಿ ದೇವರ ಭಾವನೆ ಕಂಡು ನಮ್ಮ ಮನೆಯ ಮಕ್ಕಳಂತೆ ಕತ್ತೆಯನ್ನು ಯಾವುದೇ ಜಾತಿ ಬೇಧವಿಲ್ಲದೇ ಸಾಕಿದ್ದಾರೆ. ಆದ್ರೆ ಕಳೆದ ಮೂರು ದಿನಗಳ ಹಿಂದೆ ಕತ್ತೆ ಕಾರಣಾಂತರಗಳಿಂದ ಸಾವನ್ನಪ್ಪಿದೆ. ಇದ್ರಿಂದ ಬೇಸರಗೊಂಡ ಗ್ರಾಮಸ್ಥರು, ತುಂಬಾ ನೋವಿನಿಂದ ಇಡೀ ಗ್ರಾಮದಲ್ಲಿ ಕತ್ತೆಯ ಶವವನ್ನು ಮೆರವಣಿಗೆ ಮಾಡುವ ಮೂಲಕ ಯಾವ ವ್ಯಕ್ತಿಗೂ ಕೊಡದ ಗೌರವವನ್ನು ಈ ಮೂಖ ಪ್ರಾಣಿಗೆ ಕೊಡುವ ಮೂಲಕ ಇಡೀ ಜಿಲ್ಲೆಗೆ ಮಾನವೀಯ ಮೌಲ್ಯಗಳನ್ನು ಭಿತ್ತಿದ್ದಾರೆ.
ಕುದುರೆ ರೇಸ್ ಓಡಲು ಕತ್ತೆ ತಂದಿದ್ದೀರಿ: ರಾಹುಲ್ ಬಗ್ಗೆ ಸಚಿವ ಪುರಿ ಟೀಕೆ
ಈ ಒಂದು ಮದ್ದೇರು ಗ್ರಾಮ್ಮಕ್ಕೆ ಐತಿಹಾಸಿಕ ಪ್ರಸಿದ್ದಿ ಇದೆ. ಇಲ್ಲಿ ಹಿಂದೂ ಮುಸ್ಲಿಂ ಎಲ್ಲಾ ದೇವರುಗಳನ್ನು ಆರಾಧನೆ ಮಾಡ್ತೀವಿ. ಅದೇ ರೀತಿ ಕಳೆದ ಮೂರ್ನಾಲ್ಕು ತಿಂಗಳಿಂದ ಕತ್ತೆ ನಮ್ಮ ಗ್ರಾಮಕ್ಕೆ ಆಗಮಿಸಿದಾಗಿನಿಂದ ಬೆಳಗ್ಗೆ, ಸಂಜೆ ಎಲ್ಲರೂ ಪೂಜೆ ಮಾಡುವ ಮೂಲಕ ಅದರಲ್ಲಿ ದೈವ ಸ್ವರೂಪವನ್ನು ಕಂಡಿದ್ದರು. ಪ್ರತೀ ವಾರದ ದಿನ ಪೂಜೆ ಸಲ್ಲಿಸಿ, ಮನೆ ಮಗುವಿನ ರೀತಿ ಸಿಹಿ ತಿನಿಸುಗಳನ್ನು ಕೊಟ್ಟು ಸಾಕುತ್ತಿದ್ದರು.