ಗದಗ(ಮೇ.21):  ಕೊರೋನಾ ಅನ್ನೋದು ನಮ್ ತಲೆಯಲ್ಲಿಲ್ಲ ಅದ್ಕೆ ನಾವು ಮಾಸ್ಕ್ ಹಾಕೋದಿಲ್ಲ ಅಂತ ಗ್ರಾಮದ ಮುಗ್ಧ ಜನರ ಮಾತಾಗಿದೆ.  ಹೌದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ವ್ಯಕ್ತಯೋರ್ವ ಕೋರೊನಾ ಅನ್ನೋದು ಹುಚ್ಚು ಭ್ರಮೆಯಾಗಿದೆ. ಐತಿ ಅನ್ನೋರಿಗೆ ಐತಿ, ಇಲ್ಲ ಅನ್ನೋರಿಗೆ ಇಲ್ಲ ಎಂದು ಹೇಳಿದ್ದಾರೆ.

ಮಾಹಾಮಾರಿ ಕೊರೋನಾ ವೈರಸ್‌ಅನ್ನು ಹೇಗಾದ್ರೂ ಮಾಡಿ ಹೊಡೆದೋಡಿಸಲು ರಾಜ್ಯ ಸರ್ಕಾರ ಲಾಕ್‌ಡೌನ್‌ಮಾಡಿದೆ. ಆದ್ರೆ, ಇದ್ಯಾವುದು ನಮ್ಮ ಲೆಕ್ಕಕ್ಕೆ ಬರಲ್ಲ ಅಂತ ಇಲ್ಲಿನ ಜನರು ಮಾತ್ರ ದೇವಸ್ಥಾನದ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತಾ ಕೂತಿದ್ದಾರೆ. 

"

ಕುರ್ತಕೋಟಿ ಗ್ರಾಮದಲ್ಲಿ 58 ಕ್ಕೂ ಹೆಚ್ಚು ಕೊರೋನಾ ಕೇಸ್‌ಗಳು ದೃಢಪಟ್ಟಿವೆ. ಆದಾಗ್ಯೂ ಗ್ರಾಮಸ್ಥರು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿಲ್ಲ ಅಂತ ಕಾಣಿಸುತ್ತಿದೆ. ಕೊರೋನಾ ಸೋಂಕಿತರು ಕ್ವಾರಂಟೈನ್‌ನಲ್ಲಿದ್ದಾರೆ. ಹೀಗಾಗಿ ನಾವು ಹೊರಗಡೆ ಬಂದಿದ್ದೇವೆ ಅನ್ನೋದು ಗ್ರಾಮಸ್ಥರ ಮಾತಾಗಿದೆ.

ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರ ಬ್ರೇಕ್‌ಫಾಸ್ಟ್‌ಗೂ ಆಗಲ್ಲ: HK ಪಾಟೀಲ

ಈ ಗ್ರಾಮದಲ್ಲಿ ಮಾಸ್ಕ್ ಇಲ್ಲದೇ ಜನರು ಓಡಾಡುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ಮಹಾಮಾರಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ರೂ ಮಾತ್ರ ಜನರು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಇದೀಗ ಗ್ರಾಮವಾರು ಸೋಂಕಿತರ ಸಂಖ್ಯೆಯನ್ನ ಜಿಲ್ಲಾಡಳಿತ ಹಾಕುತ್ತಿದೆ.

ಕೊರೋನಾ ನಿಯಂತ್ರಣಕ್ಕೆ ಸರ್ಕಾರಗಳು ಮುಂದಾಗಿಲ್ಲ ಅಂತ ದೂರುವ ಇದೇ ಜನರು ಸರ್ಕಾರದ ಮಾರ್ಗಸೂಚಿಗಳನ್ನ ಪಾಲನೆ ಮಾಡುತ್ತಿಲ್ಲ. ಇಂತಹ ಕಠಿಣ ಲಾಕ್‌ಡೌನ್‌ಅವಧಿಯಲ್ಲೂ ಗ್ರಾಮಸ್ಥರು ಮಾತ್ರ ಮಾಸ್ಕ್‌ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸರ್ಕಾರದ ಆದೇಶಗಳಿಗೆ ಕಿಮ್ಮತ್ತು ಕೊಡುತ್ತಿಲ್ಲ. ಸರ್ಕಾರಗಳನ್ನ ದೂರುವ ಮುನ್ನ ನಾವೆಷ್ಟು ಸಪೋರ್ಟ್‌ಆಗಿದ್ದೇವೆ ಎಂಬುದನ್ನ ಪ್ರಶ್ನೆ ಮಾಡಕೋಬೇಕಿದೆ. ಕೊರೋನಾ ಹೊಡೆದೋಡಿಸಲು ಸರ್ಕಾರದ ಜೊತೆಗೆ ಸಾರ್ವಜನಿಕರ ಪಾತ್ರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸರ್ಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ಇದ್ದಾಗ ಮಾತ್ರ ಇಂತಹ ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಬಹದು. ಜನರು ತಮ್ಮ ಜವಾಬ್ದಾರಿಯನ್ನ ಅರಿತು ಸರ್ಕಾರದೊಂದಿಗೆ ನಡೆಯಬೇಕಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona