ನಾವು ಜೀವವನ್ನಾದರೂ ಬಿಡುತ್ತೇವೆ, ಮೀಸಲಾತಿ ಬಿಡೋದಿಲ್ಲ: ಕಾಶಪ್ಪನವರ್
ಸದ್ಯ ಶಾಂತಿಯುತವಾಗಿ ಪಾದಯಾತ್ರೆ ನಡೆಯುತ್ತಿದೆ| ಮೀಸಲಾತಿ ಘೋಷಣೆ ಮಾಡದಿದ್ದರೆ ಹೋರಾಟ ಕ್ರಾಂತಿ ರೂಪ ಪಡೆಯುತ್ತದೆ| ಸಮಾಜ ನೊಂದು ಬೆಂದು ಕಷ್ಟ ಅನುಭವಿಸಿದೆ| ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ| ನಾವು ಶೈಕ್ಷಣಿಕ, ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ: ಕಾಶಪ್ಪನವರ್|
ಕೊಪ್ಪಳ(ಜ.20): ಡಿಸಿಎಂ ಗೋವಿಂದ ಕಾರಜೋಳರು ಗೆಲ್ಲಲು ಪಂಚಮಸಾಲಿಯವರೂ ಕಾರಣರಾಗಿದ್ದಾರೆ. ಅದನ್ನ ಕಾರಜೋಳರು ನೆನಪಿಟ್ಟುಕೊಳ್ಳಬೇಕು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಕಾರಜೋಳ ಅವರಿಗೆ ಮೀಸಲಾತಿ ಸಿಕ್ಕಿದೆ. ನಮಗೆ ಮೀಸಲಾತಿ ಬೇಕಾಗಿದೆ ನಾವು ಪಾದಯಾತ್ರೆ ಮಾಡುತ್ತೇವೆ. ಯಾರಿಗೆ ಬೇಡವಾಗಿದೆ ಅವರು ಮನೆಯಲ್ಲಿ ಇರಲಿ. ಅದನ್ನು ಬಿಟ್ಟು ಪ್ರತಿಕ್ರಿಯೆ ಕೊಡಿವಂತಹದ್ದು ಏನು ಇದೆ ಎಂದು ಗೋವಿಂದ ಕಾರಜೋಳಗೆ ಹುನಗುಂದ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಟಾಂಗ್ ಕೊಟ್ಟಿದ್ದಾರೆ.
2 ಎ ಮೀಸಲಾತಿ ನೀಡುವ ಮೊದಲು ಅದ್ಯಯನ ನೆಡೆಯಬೇಕೆಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ ವಿಚಾರದ ಬಗ್ಗೆ ಇಂದು(ಬುಧವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಯಡಿಯೂರಪ್ಪ ಸರಕಾರ ಇದೆ. ಅಂದರೆ 15 ಪಂಚಮಸಾಲಿ ಶಾಸಕರು ಇದ್ದಾರೆ. ಇದನ್ನು ಯಡಿಯೂರಪ್ಪ, ಕಾರಜೋಳರು ನೆನಪಿಟ್ಟುಕೊಳ್ಳಬೇಕು. ಮೀಸಲಾತಿ ಕೊಡದೇ ಹೋದರೆ ನಾವು ಬಿಡುವುದಿಲ್ಲ. ಈಗಾಗಲೇ ಮೂರು ಹಂತದ ಹೋರಾಟ ಮಾಡಲಾಗಿದೆ. ಇದು ಅಂತಿಮವಾದ ಹೋರಾಟ ಹಾಗೂ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ನಾವು ಜೀವವನ್ನಾದರೂ ಬಿಡುತ್ತೇವೆ, ಮೀಸಲಾತಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ದಕ್ಕುವವರೆಗೂ ಹೋರಾಟ ನಿಲ್ಲುವುದಿಲ್ಲ: ಜಯಮೃತ್ಯುಂಜಯ ಶ್ರೀ
ಸದ್ಯ ಶಾಂತಿಯುತವಾಗಿ ಪಾದಯಾತ್ರೆ ನಡೆಯುತ್ತಿದೆ. ಮೀಸಲಾತಿ ಘೋಷಣೆ ಮಾಡದಿದ್ದರೆ ಹೋರಾಟ ಕ್ರಾಂತಿ ರೂಪ ಪಡೆಯುತ್ತದೆ. ಸಮಾಜ ನೊಂದು ಬೆಂದು ಕಷ್ಟ ಅನುಭವಿಸಿದೆ. ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ನಾವು ಶೈಕ್ಷಣಿಕ, ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ ಎಂದ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.