ವಿದ್ಯಾಗಮ ಯೋಜನೆ ನಿಲ್ಲಿಸುವ ವಿಚಾರ/ ವಿದ್ಯಾಗಮ ಯೋಜನೆ ನಿಲ್ಸಲ್ಲ ಅಂತ ಸಚಿವ ಈಶ್ವರಪ್ಪ ಪರೋಕ್ಷೆ ಹೇಳಿಕೆ/ ಕೊರೋನಾ ಬಂದ ತಕ್ಷಣ ಎಲ್ಲವನ್ನೂ ನಿಲ್ಲಿಸಲಿಕ್ಕೆ ಆಗುವುದಿಲ್ಲ/ ಕೊರೋನಾದಿಂದ ಕೆಲ ಕೇಂದ್ರ ಸಚಿವರು, ಸಂಸದರು ನಿಧನರಾದ್ರು/ ಹಾಗಂತ ಲೋಕಸಭೆ ಮುಚ್ಚೊಕ್ಕಾಗುತ್ತಾ..?/  ಈಶ್ವರಪ್ಪ ವಾದ 

ಬೆಂಗಳೂರು(ಅ. 09) ರಾಜ್ಯಾದ್ಯಂತ ವಿದ್ಯಾಗಮ ಯೋಜನೆ ಚರ್ಚೆಯಾಗುತ್ತಿದೆ. ಈ ನಡುವೆ ಸಚಿವ ಈಶ್ವರಪ್ಪ ಯಾವ ಕಾರಣಕ್ಕೂ ವಿದ್ಯಾಗಮ ಯೋಜನೆ ನಿಲ್ಸಲ್ಲ ಅಂತ ಪರೋಕ್ಷವಾಗಿ ಹೇಳಿದ್ದಾರೆ.

"

ಕೊರೋನಾ ಬಂದ ತಕ್ಷಣ ಎಲ್ಲವನ್ನೂ ನಿಲ್ಲಿಸಲಿಕ್ಕೆ ಆಗುವುದಿಲ್ಲ. ಕೊರೋನಾದಿಂದ ಕೆಲ ಕೇಂದ್ರ ಸಚಿವರು, ಸಂಸದರು ನಿಧನರಾದರು. ಹಾಗಂತ ಲೋಕಸಭೆ ಮುಚ್ಚೊಕ್ಕಾಗುತ್ತಾ..? ರೈತರೂ ಕೋವಿಡ್ ನಿಂದ ಸತ್ತಿದ್ದಾರೆ ಹಾಗಂತ ಉಳುಮೆ‌ ಮಾಡೋದನ್ನು ನಿಲ್ಸಿ ಅಂದ್ರೆ ಆಗುತ್ತಾ? ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಕೊರೋನಾ ರಣಕೇಕೆ ನಡುವೆ ಮಕ್ಕಳ ಹಕ್ಕು ಆಯೋಗ ಕೊಟ್ಟ ಶಾಕಿಂಗ್ ಶಿಫಾರಸು

ವಿದ್ಯಾಗಮ ಯೋಜನೆ ಇಲ್ಲದೇ ಇರುವ ವೇಳೆಯೂ ಪ್ರಪಂಚದಲ್ಲಿ ಸಾಕಷ್ಟು ಜನ ಕೋವಿಡ್ ಅನುಭವಿಸಿದ್ದಾರೆ. ವಿದ್ಯಾಗಮ ಯೋಜನೆಗೂ ಕೋವಿಡ್ ಗೂ ಸಂಬಂಧ ಇಲ್ಲ. ಈಗ ಶಾಲೆ ಆರಂಭ ಒಳ್ಳೆಯದಲ್ಲ ಅಂತಾ ಚುನಾಯಿತ ಪ್ರತಿನಿಧಿಗಳೂ ಹೇಳ್ತಿದ್ದಾರೆ. ಸರ್ಕಾರ ಚುನಾಯಿತ ಪ್ರತಿನಿಧಿಗಳು ಮತ್ತು ಪೋಷಕರು, ಅಧ್ಯಾಪಕರ ಅಭಿಪ್ರಾಯ ಗಮನಿಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ವಿದ್ಯಾಗಮ ಯೋಜನೆಯಿಂದಲೇ ಕೋರೋನಾ ಬಂತು ಅಂತಾ ಯಾಕೆ ಅಂದುಕೊಳ್ಳಬೇಕು? ಎಲ್ಲರ ಅಭಿಪ್ರಾಯ ಪಡೆದು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಜನರ ಅಭಿಪ್ರಾಯಕ್ಕಿಂತ ಮೀರಿದ ಸರ್ಕಾರ ಇದಲ್ಲ. ಅನೇಕ ಕೇಂದ್ರ ಮಂತ್ರಿಗಳು, ಅನೇಕ ಎಂಪಿಗಳು ಸತ್ತಿದ್ದಾರೆ, ಹಾಗಂತ ಲೋಕಸಭೆ ಮುಚ್ಚೋಣವೇ ಎಂದು ಮರು ಪ್ರಶ್ನೆ ಮಾಡಿದರು.

ಯಾವುದೋ ಒಂದಕ್ಕೊಂದು ಲಿಂಕ್ ಮಾಡಬಾರದು. ನಿಮಗೆ ಬೇಡವಾಗಿದೆ ಎಂಬ ಕಾರಣಕ್ಕೆ ಅದಕ್ಕೆ ಒತ್ತುಕೊಡುವುದು ಸರಿಯಲ್ಲ. ಎಷ್ಟು ಜನ ಸತ್ತಿಲ್ಲ ಹೇಳಿ? ಇಡೀ ಪ್ರಪಂಚಕ್ಕೆ ಬಂದಿರುವ ರೋಗ ಇದು ಎಂದು ಮಾತು ಮುಗಿಸಿದರು.