ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ ಟೀಚರ್: ಪ್ರಶ್ನೆ ಮಾಡಿದ್ದಕ್ಕೆ ಅಡುಗೆ ಸಹಾಯಕಿಗೆ ಕಿರುಕುಳ!
ತಾಲೂಕಿನ ನಾಗಾವಿ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗಿದ್ದು, ಮಕ್ಕಳು ಸುರಕ್ಷತೆ ಕ್ರಮ ಇಲ್ಲದೇ ಟಾಯ್ಲೆಟ್ ಕ್ಲೀನ್ ಮಾಡೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಜು.22): ತಾಲೂಕಿನ ನಾಗಾವಿ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗಿದ್ದು, ಮಕ್ಕಳು ಸುರಕ್ಷತೆ ಕ್ರಮ ಇಲ್ಲದೇ ಟಾಯ್ಲೆಟ್ ಕ್ಲೀನ್ ಮಾಡೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಗದಗ ತಾಲೂಕಿನ ನಾಗಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೇಮಾ ಅವರಯು ಮಕ್ಕಳನ್ನ ಬಳಸಿ ಶೌಚಾಲಯ ಕ್ಲೀನ್ ಮಾಡಿಸುತ್ತಿದ್ದರು. ವಾರಕ್ಕೆ ಒಂದು ಬಾರಿ ಶೌಚಾಲಯ ಕ್ಲೀನ್ ಮಾಡೋದಕ್ಕೆ ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿದ್ಯಂತೆ. ಗ್ಲೌಸ್ ಸೇರಿದಂತೆ ಯಾವುದೇ ಸುರಕ್ಷತೆ ಕ್ರಮ ಕೈಗೊಳ್ಳದು ಮಕ್ಕಳನ್ನ ಶೌಚಾಲಯ ಸ್ವಚ್ಛಗೊಳಿಸೋದಕ್ಕೆ ಬಳಸಲಾಗಿದೆ.
ಕ್ರಿಕೆಟ್ ತಂಡದಿಂದ ಕೈ ಬಿಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ, ಸೆಲ್ಫಿ ವಿಡಿಯೋ ಲಭ್ಯ
ಟಾಯ್ಲೆಟ್ ಕ್ಲೀನಿಂಗ್‌ಗೆ ವಿದ್ಯಾರ್ಥಿನಿಯರ ಬಳಕೆ: ನಾಗಾವಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರನ್ನೇ ಶೌಚಾಲಯ ಸ್ವಚ್ಛತೆಗೆ ಬಳಸಲಾಗಿದೆ. ಏಳನೇ ತರಗತಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿದ್ದು ಕೇವಲ ವಿದ್ಯಾರ್ಥಿನಿಯರನಷ್ಟೆ ಸ್ವಚ್ಛತೆ ಕಾರ್ಯಕ್ಕೆ ಬಳಸಲಾಗಿದೆ. ಶಿಕ್ಷಕರ ಆದೇಶದಂತೆ ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ. ವೀಡಿಯೋ ವೈರಲ್ ಆಗ್ತಿದ್ದಂತೆ ಮಕ್ಕಳು ಸ್ವಇಚ್ಛೆಯಿಂದ ಟಾಯ್ಲೆಟ್ ಕ್ಲೀನ್ ಮಾಡಿದ್ರು ಅಂತಾ ಹೇಳಿಕೆ ಪಡೆಯಲಾಗಿದ್ಯಂತೆ. ಅಲ್ಲದೇ ವೀಡಿಯೋ ಮಾಡಿದ್ದ ಅಡಿಗೆ ಸಹಾಯಕಿಗೆ ಕಿರುಕುಳ ನೀಡಲಾಗಿದೆಯಂತೆ.
ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ್ದು ಕಾನೂನು ರೀತಿಯ ಅಪರಾಧ: ಎಮ್‌ಎಸ್ ಕಾಯ್ದೆ(ಮ್ಯಾನುವಲ್ ಸ್ಕ್ಯಾವೆಂಜಿಂಗ್) 2013 ರ ಕಾಯ್ದೆ ಅನ್ವಯ ಬರಿ ಕೈಯಲ್ಲಿ ಮಲ ಸ್ವಚ್ಛಗೊಳಿಸುವುದು ಅಪರಾಧ. ಅಪರಾಧಕ್ಕೆ ಪ್ರೇರಣೆ ನೀಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದ್ದ ಅಧಿಕಾರಿಗಳು ಪ್ರಶ್ನೆ ಮಾಡಿದವರ ವಿರುದ್ಧ ಮುಗಿಬಿದ್ದಿದ್ದು, ಮಕ್ಕಳಿಂದ ತಿರುಚಿದ ಹೇಳಿಕೆ ಪಡೀತಿದ್ದಾರೆ.
ವೀಡಿಯೋ ಮಾಡಿದ್ದ ಅಡಿಗೆ ಸಹಾಯಕಿಗೆ ಕಿರಿಕಿರಿ: ಅಡುಗೆ ಸಹಾಯಕಿಗೆ ಮಕ್ಕಳು ಬಕೆಟ್ ಕೇಳಿದಾರೆ. ಯಾಕೆ ಅಂತಾ ಪ್ರಶ್ನಿಸಿದ್ದಾಗ ಟೀಚರ್ ಟಾಯ್ಲೆಟ್ ಕ್ಲೀನ್ ಮಾಡೋದಕ್ಕೆ ಅಂತಾ ಮಕ್ಕಳು ಹೇಳಿದ್ದಾರೆ. ಮಕ್ಕಳನ್ನ ಹಿಂಬಾಲಿಸಿ, ನೋಡಿದಾಗ ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡ್ತಿದ್ರಂತೆ. ಅಮಾನವೀಯ ಕೃತ್ಯವನ್ನ ಅಡುಗೆ ಸಹಾಯಕಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ರು. ಸದ್ಯ ಇದೇ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ವೀಡಿಯೋ ವೈರಲ್ ಆಗ್ತಿದ್ದಂತೆ, ಅಡುಗೆ ಸಹಾಯಕಿಗೆ ಕಿರುಕುಳ ನೀಡ್ತಿದ್ದಾರೆ.
ಡಿಕೆಶಿ, ಸಿದ್ದರಾಮಯ್ಯ ಮಧ್ಯೆ ಗುದ್ದಾಟವೂ ಇಲ್ಲ, ಮುದ್ದಾಟವೂ ಇಲ್ಲ: ನಲಪಾಡ್
ವರ್ಷದ ಹಿಂದೆ ನಿರ್ಮಾಣವಾದ ಟಾಯ್ಲೆಟ್.. ಊರ ಜನರ ಬಳಕೆ: ಕಳೆದ ವರ್ಷವೇ ಶಾಲೆ ಆವರಣದಲ್ಲಿ ಟಾಯ್ಲೆಟ್ ನಿರ್ಮಾಣವಾಗಿದೆ. ಬೀಗ ಹಾಕಿದ್ದ ರೂಂ ಬಾಗಿಲು ಒಡೆದು ಊರಿನ ಜನರೇ ಬಳಸ್ತಿದ್ರಂತೆ. ತೀರ ಗಲೀಜಾಗಿದ್ದ ಟಾಯ್ಲೆಟ್ ಕ್ಲೀನ್ ಮಾಡೋದಕ್ಕೆ ಸಿಬ್ಬಂದಿ ಬಳಸದೇ ಮಕ್ಕಳನ್ನೇ ಬಳಸಲಾಗಿದೆ. ಯಾವಾಗ ವಿಷಯ ಅಭೀರತೆ ಪಡೆದುಕೊಳ್ತೊ ಆಗ ಅಡುಗೆ ಸಹಾಯಕಿ ಮೇಲೆ ಗೂಬೆ ಕೂರಿಸುವ ಕೆಲಸ ಆಗ್ತಿದ್ಯಂತೆ.