ದ.ಭಾರತದ ಧ್ವನಿಯಾಗಲು ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿ: ಮಾರ್ಗರೇಟ್ ಆಳ್ವ
ಪ್ರಧಾನಿ, ರಾಷ್ಟ್ರಪತಿ, ಪ್ರಮುಖ ಹುದ್ದೆಗಳಲ್ಲಿ ಉತ್ತರ ಭಾರತದವರೇ ಇದ್ದಾರೆ. ದಕ್ಷಿಣ ಭಾರತದ ಧ್ವನಿಯಾಗಲು ಉಪರಾಷ್ಟ್ರಪತಿ ಹುದ್ದೆಗೆ ನಾನು ಸ್ಪರ್ಧಿಸಿದ್ದೇನೆ ಎಂದು ಉಪರಾಷ್ಟ್ರಪತಿ ಅಭ್ಯರ್ಥಿ, ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದರು.
ಶಿರಸಿ (ಆ.03): ಪ್ರಧಾನಿ, ರಾಷ್ಟ್ರಪತಿ, ಪ್ರಮುಖ ಹುದ್ದೆಗಳಲ್ಲಿ ಉತ್ತರ ಭಾರತದವರೇ ಇದ್ದಾರೆ. ದಕ್ಷಿಣ ಭಾರತದ ಧ್ವನಿಯಾಗಲು ಉಪರಾಷ್ಟ್ರಪತಿ ಹುದ್ದೆಗೆ ನಾನು ಸ್ಪರ್ಧಿಸಿದ್ದೇನೆ ಎಂದು ಉಪರಾಷ್ಟ್ರಪತಿ ಅಭ್ಯರ್ಥಿ, ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದರು. ನಗರದಲ್ಲಿ ವಚ್ರ್ಯುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಮುಖ ಹುದ್ದೆಗಳಲ್ಲಿ ದಕ್ಷಿಣ ಭಾರತದವರಿಗೂ ಪ್ರಾತಿನಿಧ್ಯ ಬೇಕು. ಈ ಚುನಾವಣೆಗೆ ವಿಪ್ ಜಾರಿಯಾಗುವುದಿಲ್ಲ. ಗುಪ್ತ ಮತದಾನ ಇರುವ ಕಾರಣ ಬಿಜೆಪಿಯನ್ನೂ ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ನಾನು ಕರ್ನಾಟಕದ ಮಗಳು. ನನಗೆ ಎಲ್ಲರ ಆಶೀರ್ವಾದ ಬೇಕು. ಚುನಾವಣಾ ವಾತಾವರಣ ಉತ್ತಮವಾಗಿದೆ. ಪ್ರಚಾರ ಕಾರ್ಯ ಈಗ ಸವಾಲಾಗಿದೆ. ಉಪರಾಷ್ಟ್ರಪತಿ ಅಭ್ಯರ್ಥಿ ಸ್ಥಾನವನ್ನು ನಾನು ಪಕ್ಷದಲ್ಲಿ ಕೇಳಿಲ್ಲ. ಅವರಾಗಿಯೇ ಕೊಟ್ಟಿದ್ದಾರೆ ಎಂದರು. ಎಂದಿನಂತೆ ಕೆಲಸ ಮುಗಿಸಿ ಶಿರಸಿಗೆ ಬರಲು ಸಿದ್ಧನಾಗಿದ್ದೆ. ಆದರೆ, ಎಲ್ಲರೂ ಸೇರಿ ನನ್ನನ್ನು ಕಣಕ್ಕಿಳಿಸಲು ತೀರ್ಮಾನ ಮಾಡಿದ್ದಾರೆ. ವಿರೋಧ ಪಕ್ಷಗಳೂ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ನನ್ನನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. 20 ಪಕ್ಷಗಳು ಒಂದಾಗಿ ನನ್ನನ್ನು ಬೆಂಬಲಿಸಿವೆ. ಇನ್ನೊಂದೆರಡು ಪಕ್ಷ ತೀರ್ಮಾನಿಸಬೇಕಿದೆ ಎಂದರು.
Chikkamagaluru: ಎಳೆಯರ ಕನಸುಗಳು ಬಾಡಲು ಬಿಡಬಾರದು: ಡಿಸಿ ರಮೇಶ್
ಪಾರ್ಲಿಮೆಂಟ್‌ನಲ್ಲಿ ಇಂದು ಅರಾಜಕತೆಯೇ ಜಾಸ್ತಿ ಇದೆ. ಮೂರು ವಾರದಿಂದ ಬೆಲೆ ಏರಿಕೆ, ಜಿಎಸ್‌ಟಿ ಮೇಲೆ ಚರ್ಚೆಗೆ ಅವಕಾಶ ಕೇಳಿದರು. ಆದರೆ, ಬಿಜೆಪಿ ಜಿಎಸ್‌ಟಿ ಸೇರಿದಂತೆ ತನ್ನ ನಿರ್ಧಾರಗಳನ್ನು ಒತ್ತಡದಿಂದ ಜಾರಿಗೆ ತರಲು ಯತ್ನಿಸುತ್ತಿದೆ. ಇವತ್ತಿನ ಪಾರ್ಲಿಮೆಂಟ್ ನೋ ಡಿಬೆಟ್, ನೋ ಡಿಸ್ಕಶ್ಯನ್ ಎಂಬಂತಾಗಿದೆ. 27 ಸದಸ್ಯರನ್ನು ಸಸ್ಪೆಂಡ್ ಮಾಡಿ ಹೊರಗಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಭಾರತದ ಮಹಿಳೆಯಾಗಿ ನಾನು 30 ವರ್ಷ ಪಾರ್ಲಿಮೆಂಟ್‌ನಲ್ಲಿ ಎರಡೂ ಹೌಸ್‌ನಲ್ಲಿ ಕೆಲಸ ಮಾಡಿದ್ದೇನೆ. ಮೂರು ರಾಜ್ಯಗಳ ಗವರ್ನರ್ ಆಗಿ ಕೆಲಸ ಮಾಡಿದ್ದೇನೆ. ನಾನು ಮಹಿಳೆ ಎಂದು ಈ ಚುನಾವಣೆಯಲ್ಲಿ ಬಿಂಬಿಸುತ್ತಿಲ್ಲ. ಸಮರ್ಥ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದೇನೆ ಎಂದರು.
ಪ್ರತಿಪಕ್ಷಗಳೆಲ್ಲಾ ಒಗ್ಗೂಡಿದರೆ ಮಾರ್ಗರೆಟ್ ಆಳ್ವ ಜಯ: ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಪ್ರತಿಪಕ್ಷಗಳೆಲ್ಲವೂ ಒಟ್ಟಾಗಿ ಮತ ಹಾಕಿದರೆ ಶೇ.30ರಷ್ಟಿರುವ ಬಿಜೆಪಿಯ ಅಭ್ಯರ್ಥಿ ಗೆಲ್ಲಲು ಸಾಧ್ಯವೇ ಇಲ್ಲ. ಆದರೆ, ಜೆಡಿಎಸ್ ಸೇರಿ ಹಲವರು ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಮಾರ್ಗರೇಟ್ ಆಳ್ವ ಅವರನ್ನು ಹರಕೆಯ ಕುರಿ ಎಂದ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿ ಕಾರಿದ ಅವರು, ಹರಕೆಯ ಕುರಿ ಎನ್ನುವುದು ಬಿಜೆಪಿಯ ವಿಕೃತಿ ತೋರಿಸುತ್ತದೆ. ಬಹಳ ವರ್ಷ ಬಿಜೆಪಿ ಅಭ್ಯರ್ಥಿಗಳು ಗೆದ್ದಿರಲಿಲ್ಲ. ಆಗ ಅವರನ್ನು ಹರಕೆ ಕುರಿ ಮಾಡಿದ್ದಾ? ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು: ವಿಕ್ರಾಂತ್ ರೋಣ ಚಿತ್ರ ವೀಕ್ಷಣೆ ವೇಳೆ ಗಲಾಟೆ ಪ್ರಕರಣ, ಆರೋಪಿಗಳ ಬಂಧನ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗರೇಟ್ ಆಳ್ವ ಅವರು ಒಬ್ಬ ಅನುಭವಿ ರಾಜಕಾರಣಿ. ರಾಜ್ಯಸಭೆ, ಲೋಕಸಭೆ ಸದಸ್ಯರಾಗಿದ್ದರು. ಕೇಂದ್ರದ ಮಂತ್ರಿ ಹಾಗೂ ಮೂರು-ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಇವರನ್ನು ಶರದ್ ಪವಾರ್ ಅವರು ವಿರೋಧ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ವಿರೋಧಪಕ್ಷಗಳೆಲ್ಲಾ ಒಟ್ಟಾಗಿ ಮತ ಹಾಕಿದರೆ ಭಾರಿ ಅಂತರದಿಂದ ಗೆಲುವು ಸಾಧಿಸುತ್ತಾರೆ. ಆದರೆ ಜೆಡಿಎಸ್, ನವೀನ್ ಪಟ್ನಾಯಕ್, ಎಐಎಡಿಎಂಕೆ, ಉದ್ಧವ್ ಠಾಕ್ರೆ ಎಲ್ಲಾ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.