ವಿಶೇಷ ಚೇತನರಿಗೆ ವಾಹನ ವ್ಯವಸ್ಥೆ : ಗ್ರಾಮ ಪಂಚಾಯಿತಿಗೆ ಒಂದರಂತೆ ವಾಹನ

ವಿಶೇಷಚೇತನರು ಸುಗಮವಾಗಿ ಮತದಾನ ಮಾಡಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದರು.

 Vehicle arrangement for special needs One vehicle for Gram Panchayat snr

  ತುಮಕೂರು :   ವಿಶೇಷಚೇತನರು ಸುಗಮವಾಗಿ ಮತದಾನ ಮಾಡಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಸ್ವೀಪ್‌ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿಧಾನ ಸಭಾ ಚುನಾವಣೆ 2023 ರ ವಿಕಲಚೇತನರ ಹಾಗೂ ತೃತೀಯಲಿಂಗಿ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ಸುಮಾರು 29700 ವಿಶೇಷಚೇತನ ಮತದಾರರಿದ್ದು, ಇವರೆಲ್ಲರೂ ಮೇ.10 ರ ಮತದಾನ ಹಬ್ಬದ ದಿನ ಮತದಾನ ಮಾಡಲು ಅನುಕೂಲವಾಗುವಂತೆ ಅಂದು ಪ್ರತಿ ಗ್ರಾಮಪಂಚಾಯಿತಿಗೆ ಒಂದರಂತೆ ವಾಹನ ಸೌಲಭ್ಯ ಕಲ್ಪಿಸಲಿದ್ದು, ಈ ಸೌಲಭ್ಯವನ್ನು ಬಳಸಿಕೊಂಡು ವಿಶೇಷಚೇತನರು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ತಪ್ಪದೆ ಮತದಾನ ಮಾಡಬೇಕು. ವಿಕಲಚೇತನ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದಕ್ಕಾಗಿ ಮತಗಟ್ಟೆಗಳಿಗೆ ತಲುಪಲು ಪ್ರತಿ ಗ್ರಾ.ಪಂ ಯ 6-8 ಕಿಲೋ ಮೀಟರ್‌ ವ್ಯಾಪ್ತಿಗೆ ಒಂದು ಆಟೋವನ್ನು ನೀಡಲಾಗುವುದು ಎಂದು ತಿಳಿಸಿದರು.

ಮತದಾನದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಬೇಕು ಹಾಗೂ ಯಾವ ಮತದಾರ ಮತಗಟ್ಟೆಗೆ ಬರಲು ಸಾಧ್ಯವಿಲ್ಲವೋ ಅಂತಹ ಮತದಾರ ನಮೂನೆ 12 ಡಿ ಯನ್ನು ಪಡೆದು ಅಂಚೆ ಮತ ಚಲಾಯಿಸಬೇಕು. ಉಳಿದವರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ವಿಧಾನಸಭಾ ಚುನಾವಣೆಗೆ ಮೇ.10 ರಂದು ಮತದಾನ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.82ರಷ್ಟುಮತದಾನವಾಗಿರುತ್ತದೆ. ಈ ಬಾರಿ ಶೇ.100 ರಷ್ಟುಮತದಾನ ಆಗಬೇಕಿದೆ. ನಗರ ಭಾಗದಲ್ಲಿ ಶೇ.65 ರಷ್ಟುಮತದಾನ ಪ್ರಮಾಣ ಇದ್ದು, ಇದೂ ಸಹ ಶೇ.100 ಕ್ಕೆ ಹೆಚ್ಚಳವಾಗಬೇಕಿದೆ ಎಂದು ಹೇಳಿದರು.

ಯುವ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡದೆ ಮತದಾನದಿಂದ ಹೊರಗೆ ಉಳಿಯುತ್ತಿದ್ದಾರೆ. ಆದ್ದರಿಂದ ಯುವ ಮತದಾರರು ಮತ ಚಲಾವಣೆ ಮಾಡುವ ಹಾಗೇ ಅವರಲ್ಲಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಬೇಕು. ತೃತೀಯ ಲಿಂಗಿಗಳು ಮತಗಟ್ಟೆಗಳಿಗೆ ಬರಲು ಹಿಂದೇಟು ಹಾಕುವ ಮೂಲಕ ಮತದಾನದಿಂದ ದೂರ ಉಳಿಯುತ್ತಿದ್ದಾರೆ ಎಂದರು.

ಜಾಥಾದ ಮೂಲಕ ಅರಿವು:

ವಿಕಲಚೇತನರು ತುಮಕೂರಿನ ಜೂನಿಯರ್‌ ಕಾಲೇಜು ಮೈದಾನದಿಂದ ಜಿಲ್ಲಾ ಪಂಚಾಯತ್‌ ಆವರಣದವರೆಗೆ ಮೂರು ಚಕ್ರದ ಬೈಕ್‌ ಹಾಗೂ ಸೈಕಲ್‌ ಜಾಥಾ ನಡೆಸಿ ಮತದಾನದ ಮಹತ್ವ ಕುರಿತು ಎಲ್ಲರಲ್ಲಿ ಅರಿವು ಮೂಡಿಸಿದರು ಎಂದರು.

ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕು ಇದೆ. ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಜಿಲ್ಲೆಯ ಮತದಾನದ ಪ್ರಮಾಣ ಶೇಕಡಾ ನೂರರಷ್ಟುಆಗಬೇಕು. ಮತದಾನದ ಮಹತ್ವವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸ್ವೀಪ್‌ ಸಮಿತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ರಾಯಭಾರಿ ಲಕ್ಷ್ಮಣದಾಸ್‌:

ಜಿಲ್ಲಾ ಚುನಾವಣಾ ರಾಯಭಾರಿ ಕಥಾಕೀರ್ತನ ಗಾಯಕರಾದ ಲಕ್ಷ್ಮಣದಾಸ್‌ ಮಾತನಾಡಿ, ಚುನಾವಣಾ ಆಯೋಗವು ರಾಯಭಾರಿಗಳಿಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇವೆ ಎಂದು ಹೇಳಿದರು.

ಜಿಲ್ಲಾ ಚುನಾವಣಾ ರಾಯಭಾರಿಗಳಾದ ಗಾಯಕ ಕಂಬದ ರಂಗಯ್ಯ, ಬುಡಕಟ್ಟು ಹಾಡುಗಾರರಾದ ಮೋಹನ್‌ಕುಮಾರ್‌, ಸಮಾಜ ಸೇವಕಿ ಲಿಲ್ಲಿ, ಹಾಡುಗಾರರಾದ ಮಂಜಮ್ಮ ಹಾಗೂ ರತ್ನಮ್ಮ ಅವರುಗಳು ಮಾತನಾಡಿ, ಮತದಾನ ಮಾಡುವಂತೆ ಕೋರುತ್ತಾ, ತಮ್ಮ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿಗಳನ್ನು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹಾಗೂ ಜಿಲ್ಲಾ ಪಂಚಾಯತ್‌ ಸಿಇಓ ಡಾ.ಕೆ. ವಿದ್ಯಾಕುಮಾರಿ ಅವರು ಸನ್ಮಾನಿಸಿದರು. ಈ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಾಪೂರ್‌ವಾಡ್‌ ಇದ್ದರು.

----

ಬಾಕ್ಸ್‌

ರಾಯಭಾರಿಗಳಾಗಿ ಕಲಾವಿದರು

ಕಲೆ ಮತ್ತು ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಕಲಾವಿದರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಅವರು ತಮ್ಮ ಸಂಗೀತ ಗಾಯನದ ಮೂಲಕ ಮತದಾರರಲ್ಲಿ ಅರಿವು ಮೂಡಿಸಬೇಕು. ತೃತೀಯ ಲಿಂಗಿ ಮತದಾರರು ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವುದರ ಕುರಿತು ತೃತೀಯ ಲಿಂಗಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

--------

ಫೋಟೋ ಪೈಲ್‌ - 3 ಟಿಯುಎಂ 5

ತುಮಕೂರು ಜಿಲ್ಲಾ ಚುನಾವಣಾ ರಾಯಭಾರಿಗಳಾಗಿರುವ ಕಲಾವಿದರಾದರನ್ನು ಸನ್ಮಾನಿಸಲಾಯಿತು.

-----

ಪ್ಯಾನೆಲ್‌

ಫೋಟೋ ಫೈಲ್‌ - 3 ಟಿಯುಎಂ 4

ತುಮಕೂರಿನ ಜೂನಿಯರ್‌ ಕಾಲೇಜು ಮೈದಾನದಿಂದ ಜಿಲ್ಲಾ ಪಂಚಾಯತ್‌ ಆವರಣದವರೆಗೆ ಮೂರು ಚಕ್ರದ ಬೈಕ್‌ ಹಾಗೂ ಸೈಕಲ್‌ ಜಾಥಾ ನಡೆಸುವ ಮೂಲಕ ವಿಶೇಷಚೇತನರು ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

Latest Videos
Follow Us:
Download App:
  • android
  • ios