ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಸಹಿಸಲ್ಲ

ಹೋರಾಟ ನಡೆಸಬೇಕಾಗುತ್ತೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ| ಸಂಸ್ಥೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ದಿಂಗಾಲೇಶ್ವರರ ವಿರುದ್ಧ ದೊಡ್ಡ ರಾರ‍ಯಲಿ ಸಂಘಟಿಸಲಾಗುವುದು ಕಾನೂನಾತ್ಮಕವಾಗಿ ಹೋರಾಟ ಆರಂಭಿಸಿ ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು| 

Veerashaiva Mahasabha Lingayat Talks Over Murusavira Matha grg

ಹುಬ್ಬಳ್ಳಿ(ಫೆ.17): ಪ್ರತಿಷ್ಠಿತ ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಮಾಡುವುದನ್ನು ಮಠದ ಭಕ್ತರು ಸಹಿಸುವುದಿಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ಕೃಕೊಳ್ಳುತ್ತೇವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.

ಮಹಾಸಭಾದ ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧ್ಯಕ್ಷ ಉಮೇಶ ಪಾಟೀಲ, ಕೆಸಿಸಿಐ ಮಾಜಿ ಅಧ್ಯಕ್ಷ ರಮೇಶ ಪಾಟೀಲ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಎಲ…ಇ ಸಂಸೆæ್ಥಯ ಮೆಡಿಕಲ್‌ ಕಾಲೇಜು ನಿರ್ಮಾಣ, ಮೂರುಸಾವಿರ ಮಠದ ಆಸ್ತಿ ಪರಭಾರೆ ವಿಚಾರದ ಕುರಿತು ಇಲ್ಲಸಲ್ಲದ ಹೇಳಿಕೆ ನೀಡದಂತೆ ತಾಕೀತು ಮಾಡಿದರು.

ಮೂರು ಸಾವಿರ ಮಠಕ್ಕೂ, ದಿಂಗಾ​ಲೇ​ಶ್ವರ ಸ್ವಾಮೀ​ಜಿಗೂ ಏನು ಸಂಬಂಧ?

ಮಠದ ಹಿಂದಿನ ಶ್ರೀಗಳಾದ ಗಂಗಾಧರ ಮಹಾಸ್ವಾಮಿಗಳು ಇದ್ದ ವೇಳೆಯೇ ಕೆಎಲಲ್‌ ಸಂಸ್ಥೆಯ ಆಸ್ತಿಯನ್ನು ದಾನ ನೀಡಿದ್ದಾರೆ. ಇಷ್ಟು ವರ್ಷ ಸುಮ್ಮನಿದ್ದ ದಿಂಗಾಲೇಶ್ವರ ಶ್ರೀಗಳು ಇದೀಗ ತಗಾದೆ ತೆಗೆಯುತ್ತಿದ್ದಾರೆ. ಸಂಸ್ಥೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ದಿಂಗಾಲೇಶ್ವರರ ವಿರುದ್ಧ ದೊಡ್ಡ ರಾರ‍ಯಲಿ ಸಂಘಟಿಸಲಾಗುವುದು. ಕಾನೂನಾತ್ಮಕವಾಗಿ ಹೋರಾಟ ಆರಂಭಿಸಿ ಮಾನಹಾನಿ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಧಾರವಾಡ ನಾಗರಾಜ ಎಲಿಗಾರ, ವೀರೇಶ ನಲವಡಿ ಸೇರಿ ಇತರ ಮುಖಂಡರಿದ್ದರು.
 

Latest Videos
Follow Us:
Download App:
  • android
  • ios