Chikkamagaluru: ಹೊರನಾಡು ದೇವಸ್ಥಾನದಲ್ಲಿ ಸಂಭ್ರಮದ ವರ್ಧಂತ್ಯುತ್ಸವ

*  ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ
*  ಜಾತಿ-ಧರ್ಮದ ದ್ವೇಷದ ಕಿಡಿ ಮರೆಯಾಗಿ ಸಮಾಜದಲ್ಲಿ ಸಾಮರಸ್ಯ ಮೂಡಲಿ ಪ್ರಾರ್ಥನೆ 
*  ಹೊರನಾಡಲ್ಲಿ ಅನ್ನಪೂರ್ಣೇಶ್ವರಿ ಪ್ರತಿಷ್ಠಾಪನೆಯಾಗಿ 49 ವರ್ಷ

Vardhantyutsava Celebrate at Hornadu in Chikkamagaluru grg

ವರದಿ: ಆಲ್ದೂರು ಕಿರಣ್  ಏಷ್ಯಾನೆಟ್ ಸುವರ್ಣ ನ್ಯೂಸ್ , ಚಿಕ್ಕಮಗಳೂರು

ಚಿಕ್ಕಮಗಳೂರು(ಮೇ.04): ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ(Honadu Annapoorneshwari Temple) ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವರ್ಧಂತ್ಯುತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿದೆ. ಧರ್ಮಕರ್ತ ಭೀಮೇಶ್ವರ ಜೋಷಿ ಸಮ್ಮುಖದಲ್ಲಿ ವರ್ಧಂತ್ಯುತ್ಸವಕ್ಕೆ ನಾಡಿನ ಭಕ್ತರು ಸಾಕ್ಷಿಯಾದರು. 

ಅನ್ನಪೂರ್ಣೇಶ್ವರಿ ಅಮ್ಮನವರ ಪುನಾ ಪ್ರತಿಷ್ಠಾಪನೆ ದಿನ ವರ್ಧಂತ್ಯುತ್ಸವ

1973ರ ಮೇ 5ರಂದು ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಪುನಾ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು. ಇದರ ವರ್ಧಂತ್ಯುತ್ಸವದ(Vardhantyutsava) ಪುಣ್ಯ ದಿನವು ವೈಶಾಖ ಶುಕ್ಲ ತದಿಗೆ ಮಂಗಳವಾರದಂದು ದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು.ಹೊರನಾಡಿನಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮದ ನಿಮಿತ್ತ ನಡೆದ ಹೋಮಕ್ಕೆ ದೇವಸ್ಥಾನದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಶಿ ಪೂರ್ಣಾಹುತಿ ನಡೆಸಿದರು.

Vardhantyutsava Celebrate at Hornadu in Chikkamagaluru grg

ಹೊರನಾಡಲ್ಲಿ ಅನ್ನಪೂರ್ಣೇಶ್ವರಿ ಪ್ರತಿಷ್ಠಾಪನೆಯಾಗಿ 49 ವರ್ಷ

ಹೊರನಾಡಿನಲ್ಲಿ(Hornadu) ಅನ್ನಪೂರ್ಣೇಶ್ವರಿ ಸನ್ನದಿ ಪುನರ್ ಪ್ರತಿಷ್ಠಾಪನೆಯಾಗಿ ಬರೋಬ್ಬರಿ 49 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹೋಮ, ಹವನ, ಮಂತ್ರ-ಘೋಷಗಳು ಮೇಳೈಸಿದವು. ದೇವಿಗೆ ವಿಶೇಷಲಂಕಾರ ಮಾಡಿ ಮಹಾಮಂಗಳಾರತಿಯನ್ನ ನೆರವೇರಿಸಲಾಯ್ತು. ಈ ಅಪರೂಪದ ಕ್ಷಣವನ್ನ ಕಣ್ತುಂಬಿಕೊಳ್ಳಲು ಶುಭ ಮಂಗಳವಾರ , ಅಕ್ಷಯ ತೃತೀಯ ದಿನ ನಾಡಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಅನ್ನಪೂರ್ಣೇಶ್ವರಿ ವರ್ಧಂತಿ ಅಂಗವಾಗಿ ಕ್ಷೇತ್ರದಲ್ಲಿ ವಿವಿಧ ಹೋಮ-ಹವನಗಳು ನೆರವೇರಿದವು. ದೇವಿಗೆ ಝಗಮಗಿಸೋ ಹೂವಿನ ಅಲಂಕಾರವನ್ನ ಮಾಡಲಾಗಿತ್ತು. ಈ ಅಲಂಕಾರವನ್ನ ನೋಡಲೆಂದೇ ಭಕ್ತರು, ತಾ ಮುಂದು ನಾ ಮುಂದು ಅಂತಾ ದೇವಿಯ ಮುಂದೆ ನಿಂತು ಸಂತೃಪ್ತರಾದ್ರು. ವರ್ಧಂತೋತ್ಸವ ಕಣ್ತುಂಬಿಸಿಕೊಳ್ಳಲು ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತ(Devotees) ಸಾಗರವೇ ಹರಿದು ಬಂದಿತು. ಹಸಿವನ್ನ ನೀಗಿಸೋ ದೇವಿಯ ಕ್ಷೇತ್ರದಲ್ಲಿ ಅನ್ನ ಪ್ರಸಾದವನ್ನ ಸ್ವೀಕರಿಸಿದ ಭಕ್ತರು, ದೇವಿಗೆ(Goddes) ಶರಣು ಶರಣೆಂದರು.

ಜಾತಿ-ಧರ್ಮದ ದ್ವೇಷದ ಕಿಡಿ ಮರೆಯಾಗಿ ಸಮಾಜದಲ್ಲಿ ಸಾಮರಸ್ಯ ಮೂಡಲಿ ಪ್ರಾರ್ಥನೆ 

ಅನ್ನಪೂರ್ಣೇಶ್ವರಿ ಪ್ರತಿಷ್ಠಾಪನ ದಿನದ ಅಂಗವಾಗಿ ಇಡೀ ದಿನ ಹತ್ತು ಹಲವು ಕಾರ್ಯಕ್ರಮಗಳನ್ನ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಲೋಕಕಲ್ಯಾಣಕ್ಕಾಗಿ ನಡೆದ ಎಲ್ಲಾ ಕಾರ್ಯಕ್ರಮದಲ್ಲೂ ಭಾಗಿಯಾದ ಭಕ್ತರು ದೇವಿಯ ದರ್ಶನ ಮಾಡಿ ಸಂತಸಪಟ್ಟರು. ಪ್ರಸ್ತುತ ಹೊಗೆಯಾಡುತ್ತಿರುವ ಜಾತಿ-ಧರ್ಮದ ದ್ವೇಷದ ಕಿಡಿ ಮರೆಯಾಗಿ ಸಮಾಜದಲ್ಲಿ ಸಾಮರಸ್ಯ ಮೂಡಲಿ ಅನ್ನೋ ವಿಶೇಷ ಪ್ರಾರ್ಥನೆಯನ್ನ ಅನ್ನಪೂರ್ಣೆಶ್ವರಿಗೆ ಸಲ್ಲಿಸಿದ್ದು ವಿಶೇಷವಾಗಿತ್ತು.
 

Latest Videos
Follow Us:
Download App:
  • android
  • ios