Udupi: ಆರ್‌ಎಸ್‌ಎಸ್‌ನಿಂದ ಮೌಲ್ಯ, ಸಂಸ್ಕಾರವಂತಿಕೆ ವರ್ಗಾವಣೆ: ಸೂರಜ್ ಕುಮಾರ್ ನುಡಿ
ಕಚ್ಚೂರಿನಲ್ಲಿ ಆರ್‌ಎಸ್‌ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರಂಭ
ಮಾಲ್ತಿದೇವಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲದಾಸ್ ಅಧ್ಯಕ್ಷತೆ
ವರ್ಗದ ವರ್ಗಾಧಿಕಾರಿ ಡಾ. ಉದಯಕುಮಾರ್ ಶೆಣೈ ಕಾರ್ಕಳ ವರದಿ ವಾಚನ
ಉಡುಪಿ (ಜ.03): ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾ ವರ್ಗದ ಸಾರ್ವಜನಿಕ ಸಮಾರಂಭವು ಬಾರ್ಕೂರು ಬಳಿಯ ಕಚ್ಚೂರಿನ ಶ್ರೀ ಮಾಲ್ತಿದೇವಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆಯನ್ನು ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲದಾಸ್ ಇವರು ವಹಿಸಿದ್ದರು. ಬೌದ್ಧಿಕ ನೀಡಿದ ಮಂಗಳೂರು ವಿಭಾಗದ ಸಹಪ್ರಚಾರ ಪ್ರಮುಖರಾದ ಶ್ರೀ ಸೂರಜ್ ಕುಮಾರ್ ಮಾತನಾಡಿ, ಇಂತಹ ವರ್ಗಗಳಲ್ಲಿ ವ್ಯಕ್ತಿಗಳಿಗೆ ಮೌಲಿಕ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ ಎಂದರು.
ಸಂಘ ಕಾರ್ಯಕ್ಕೆ ಶಾಖೆಯೇ ಆಧಾರ. ಶಾಖೆಯ ಮುಖಾಂತರ ಸಂಸ್ಕಾರ ಕಲಿಸುತ್ತಾ ವ್ಯಕ್ತಿ ನಿರ್ಮಾಣದ ಕಾರ್ಯವನ್ನು ಸಂಘವು ನಿರಂತರವಾಗಿ ಮಾಡುತ್ತಿದೆ. ಈ ರೀತಿ ಶಿಕ್ಷಣ ಪಡೆದ ವ್ಯಕ್ತಿಗಳು ವಿವಿಧ ಕ್ಷೇತ್ರಗಳ ಮೂಲಕ ಸಮಾಜ ಪರಿವರ್ತನೆಯ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲದೆ ಪರಿಸರ ಸಂರಕ್ಷಣೆ, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ್, ಧರ್ಮ ಜಾಗರಣ, ಸಾಮರಸ್ಯ, ಗೋಸೇವಾ ಮೊದಲಾದ ಗತಿ ವಿಧಿಗಳ ಮೂಲಕ ವ್ಯವಸ್ಥೆಯ ಪರಿವರ್ತನೆಯನ್ನು ಮಾಡುವ ಕೆಲಸವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ.
ಬಿಜೆಪಿ ಆರ್‌ಎಸ್‌ಎಸ್‌ಗೆ ಧನ್ಯವಾದ, ಇವರೇ ನನ್ನ ಗುರು ಎಂದ ರಾಹುಲ್ ಗಾಂಧಿ!
ಸಂಘಕ್ಕೆ ನೂರು ವರ್ಷ ತುಂಬುವ ಸಂದರ್ಭದಲ್ಲಿ ಸಮಾಜ ಪರಿವರ್ತನೆಯ ಕಾರ್ಯದಲ್ಲಿ ವೇಗ ಕೊಡಲು ಪ್ರತಿಯೊಬ್ಬರೂ ಸಂಘ ಕಾರ್ಯದ ಜೊತೆಗೆ ಕೈಗೂಡಿಸಬೇಕೆಂದು ವಿನಂತಿಸಿದರು. ವರ್ಗದ ವರ್ಗಾಧಿಕಾರಿಗಳಾದ ಡಾ. ಉದಯಕುಮಾರ್ ಶೆಣೈ ಕಾರ್ಕಳ ವರದಿ ವಾಚಿಸಿದರು. ವರ್ಗ ಕಾರ್ಯವಾಹರಾದ ಶ್ರೀ ಸುಜಿತ್ ಕಡಬ ಸ್ವಾಗತ ಮತ್ತು ಪರಿಚಯ ಮಾಡಿದರು. ಪ್ರಮೋದ್ ಮಂದಾರ್ತಿ ಧನ್ಯವಾದವಿತ್ತರು. ವರ್ಗದ ಬೌದ್ಧಿಕ್ ಪ್ರಮುಖರಾದ ಶ್ರೀ ಪ್ರಕಾಶ್ ಪುರೋಹಿತ್ ವೇಣೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶಿಕ್ಷಾರ್ಥಿಗಳಿಂದ ಶಾರೀರಿಕ ಪ್ರದರ್ಶನ ನಡೆಯಿತು.