Asianet Suvarna News Asianet Suvarna News

ನಾನು ಉತ್ತರ ನೀಡುವ ಸ್ಥಿತಿಯಲ್ಲಿ ಇಲ್ಲ : ಸಚಿವ ಶ್ರೀ ರಾಮುಲು

ನಾನು ಜನರಿಗೆ ಉತ್ತರಿಸುವ ಸ್ಥಿತಿಯಲ್ಲಿ ಇಲ್ಲ. ಡಿಸಿಎಂ ಸ್ಥಾನ ಮಾನ ನೀಡುವ ಬಗ್ಗೆ ಜನರು ಒತ್ತಾಯಿಸುತ್ತಿದ್ದಾರೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ. 

Valmiki Community Reservation Is My First Priority Says Sriramulu
Author
Bengaluru, First Published Jan 2, 2020, 1:11 PM IST
  • Facebook
  • Twitter
  • Whatsapp

ದಾವಣಗೆರೆ [ಡಿ.02]: ನಾನು ನಿಸ್ಸಾಯಕ ಆಗಿದ್ದೇನೆ.  ಡಿಸಿಎಂ ಹುದ್ದೆ ವಿಚಾರ ಬಗ್ಗೆ ಜನರಿಗೆ ಉತ್ತರಿಸುವುದು ಆಗುತ್ತಿಲ್ಲ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.

ದಾವಣಗೆರೆಯ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀ ರಾಮುಲು,  ಜನರು ನಾನು ಉಪ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದಾರೆ. ಆದರೆ ಅವರಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ನಾನು ಇಲ್ಲ ಎಂದರು.  

ನನ್ನನ್ನು ಉಪ ಮುಖ್ಯಮಂತ್ರಿ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ.  ಈ ವಿಚಾರದಲ್ಲಿ  ಜನರು ಸ್ವಲ್ಪ ಶಾಂತರಾಗಬೇಕಿದೆ ಎಂದು ಹೇಳಿದರು.

ಮೀಸಲಾತಿಗೆ ಪ್ರಥಮ ಆದ್ಯತೆ ನೀಡುತ್ತೇನೆ. ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5 ಮೀಸಲಾತಿ ಕಲ್ಪಿಸುವುದು ನನ್ನ ಪ್ರಥಮ ಆದ್ಯತೆ. ಈ ವಿಚಾರದಲ್ಲಿ ಕಾಲಹರಣ ಬೇಡ. ಮೀಸಲಾತಿ ವಿಚಾರವಾಗಿ  ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ನೇಮಕ ಆಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆ ಸಮಿತಿ ಕಾಲಮಿತಿಯಲ್ಲಿ ವರದಿ ನೀಡಲಿ.  ಅದು ಬಂದ ಬಳಿಕ ಮೀಸಲಾತಿ‌ ನಿಗದಿ ಆಗಲಿ ಎಂದು ಶ್ರೀ ರಾಮುಲು ಹೇಳಿದರು.  

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆದ ದಿನದಿಂದಲೂ ಕೂಡ ಶ್ರೀ ರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ವಿಚಾರವು ಹೆಚ್ಚು ಚರ್ಚೆಯಾಗುತ್ತಿದ್ದು, ಸಾಕಷ್ಟು ಬಾರಿ ಈ ಬಗ್ಗೆ ಸ್ವತಃ ಶ್ರೀ ರಾಮುಲು ಅವರೂ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದರು. 

Follow Us:
Download App:
  • android
  • ios