ತೆರೆ ಆಚೆಗೆ ಬಂದು ನೋಡಿದರೆ ಸಿನಿಮಾ ಮಂದಿ ಹೆದರಿಕೊಳ್ಳುವುದು ಇವೆರಡಕ್ಕೆ. ಸದ್ಯಕ್ಕೆ ಕೆಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹಕ್ಕೆ ಚಿತ್ರರಂಗ ಕೂಡ ತತ್ತರಿಸಿ ಹೋಗಿದೆ. ಯಾಕೆ ಸಿನಿಮಾ ಮಂದಿ ಮಳೆಗೆ ಹೆದರಿಕೊಳ್ಳುತ್ತಾರೆ ಎಂಬುದಕ್ಕೆ ಸದ್ಯ ಮಳೆ ಮತ್ತು ಪ್ರವಾಹ ತಂದ ಕಲೆಕ್ಷನ್ ಬರ ನೋಡಿದರೆ ಗೊತ್ತಾಗುತ್ತದೆ.

ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹದ ಅಪಾಯ ತಪ್ಪುತ್ತಿತ್ತು!

ಉ.ಕ.ದ ಗಳಿಕೆ ಪಾಲು ದೊಡ್ಡದು

ಒಟ್ಟು 16 ಜಿಲ್ಲೆ, 80 ತಾಲೂಕುಗಳ ನೂರಾರು ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ. ಮೊದಲಿನಿಂದಲೂ ಉತ್ತರ ಕರ್ನಾಟಕದ ಭಾಗದಿಂದಲೇ ಸಿನಿಮಾಗಳಿಗೆ. ಅತಿ ಹೆಚ್ಚು ಕಲೆಕ್ಷನ್ ಬರುತ್ತಿತ್ತು. ರಾಜ್ಯದ ಒಟ್ಟು ಗಳಿಕೆಯಲ್ಲಿ ಉತ್ತರ ಕರ್ನಾಟಕದ ಪಾಲು ಶೇ.70 ರಿಂದ 75 ಭಾಗ. ಹೀಗಾಗಿ ದೊಡ್ಡ ಮಟ್ಟದಲ್ಲಿ ರೆವಿನ್ಯೂ ತಂದುಕೊಡುತ್ತಿದ್ದ ಭಾಗ ಈಗ ಪ್ರವಾಹಕ್ಕೆ ತುತ್ತಾಗಿರುವುದು ಚಿತ್ರೋದ್ಯಮದ ಮೇಲೆ ಬಹು ದೊಡ್ಡ ಪರಿಣಾಮ ಬೀರಿದೆ. ನೂರಾರು ಚಿತ್ರಮಂದಿರಗಳಲ್ಲಿ ಅಲ್ಲಿ ಸಿನಿಮಾಗಳು ತೆರೆ ಕಾಣುತ್ತಿದ್ದವು. ಮೊದಲ ದಿನವೇ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದವು. ಆ ಮಟ್ಟಿಗೆ ಅಲ್ಲಿನ ಜನ ಕನ್ನಡ ಸಿನಿಮಾಗಳನ್ನು ನೋಡಿ ಗೆಲ್ಲಿಸಿದ್ದಾರೆ. ಆದರೆ, ಈ ವಾರ ತೆರೆಗೆ ಬಂದಿರುವ ‘ಮುನಿರತ್ನ ಕುರುಕ್ಷೇತ್ರ’ ಹಾಗೂ ‘ಕೆಂಪೇಗೌಡ 2’ ಚಿತ್ರಗಳಿಗೂ ಕಲೆಕ್ಷನ್ ಬರೆ ಎಳೆದಿದೆ ಪ್ರವಾಹ. ಜನರ ಬದುಕಿನ ಜತೆಗೆ ಚಿತ್ರರಂಗದ ಗಳಿಕೆಯನ್ನೇ ಪ್ರವಾಹದ ಮಾರಿ ಕಿತ್ತುಕೊಂಡಿದೆ.

100 ಥಿಯೇಟರ್, ಕೋಟಿಗಳು ನಷ್ಟ

ಸದ್ಯಕ್ಕೆ ಪ್ರವಾಹಕ್ಕೆ ತುತ್ತಾಗಿರುವ ೧೬ ಜಿಲ್ಲೆಗಳಲ್ಲಿ ಕನಿಷ್ಠ 100 ರಿಂದ 120 ಚಿತ್ರಮಂದಿರಗಳು ಚಾಲ್ತಿಯಲ್ಲಿವೆ. ಇವುಗಳ ಪೈಕಿ ಕನ್ನಡ ಚಿತ್ರಗಳನ್ನೇ ಪ್ರದರ್ಶನಕ್ಕೆ 100 ಚಿತ್ರಮಂದಿರಗಳು ಸೀಮಿತಗೊಂಡಿವೆ. ಈ ನೂರು ಮಂದಿರಗಳ ಪೈಕಿ ಒಂದೊಂದು ಚಿತ್ರಮಂದಿರದಿಂದ ಮೊದಲ ದಿನದ ಗಳಿಕೆ 1 ಲಕ್ಷ ರುಪಾಯಿ. ಅಲ್ಲಿಗೆ ನೂರು ಚಿತ್ರಮಂದಿರಗಳಿಗೆ 1 ಕೋಟಿ ರುಪಾಯಿ ಬರುತ್ತಿತ್ತು. ಅಂದರೆ ಪ್ರತಿ ದಿನ ಒಂದು ಕೋಟಿ ರುಪಾಯಿ ಗಳಿಗೆ ತಂದುಕೊಂಡುತ್ತಿದ್ದ 16 ಜಿಲ್ಲೆಗಳ ನೂರು ಚಿತ್ರಮಂದಿರಗಳು ಇಂದು ಮಳೆಯಿಂದ ತ್ತತ್ತರಿಸಿವೆ. ಪ್ರವಾಹ, ಗಳಿಕೆಯ ಗಲ್ಲಾಪೆಟ್ಟಿಗೆಗೆ ಪರಿಣಾಮಕಾರಿಯಾಗಿಯೇ ಬರೆ ಎಳೆದಿದೆ. ಕಳೆದ ಒಂದು ವಾರದಿಂದ ಪ್ರವಾಹ ಅಬ್ಬರಿಸುತ್ತಿದ್ದು, ದಿನಕ್ಕೆ ಒಂದು ಕೋಟಿಯಂತೆ ಇಲ್ಲಿವರೆಗೂ 8 ಕೋಟಿಗೂ ಹೆಚ್ಚುನಷ್ಟ ಉಂಟಾಗಿದೆ. ಜಿಲ್ಲಾ ಕೇಂದ್ರಗಳಲ್ಲಿರುವ ಕೆಲ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನ ಮಾಡುತ್ತಿದ್ದರೂ ಜನ ಥಿಯೇಟರ್ ಕಡೆ ಮುಖ ಮಾಡುತ್ತಿಲ್ಲ. ಸಿನಿಮಾಗಿಂತ ಮನೆ, ಬದುಕು ಉಳಿಸಿಕೊಳ್ಳುವುದೇ ಈಗ ಜನಕ್ಕೆ ದೊಡ್ಡ ತ್ರಾಸವಾಗಿದೆ. ಹೀಗಾಗಿ ಸಿನಿಮಾಗಳು ಸದ್ಯಕ್ಕೆ ಥಿಯೇಟರ್‌ನಲ್ಲಿ ಅನಾಥವಾಗಿವೆ.

'ಹೊಳೆ ಆಲೂರಲ್ಲಿ ಊರೇ ಇಲ್ಲ, ಹೊಳೆ ಮಾತ್ರ'!

ಬೇರೆ ಜಿಲ್ಲೆಗಳ ಪರಿಸ್ಥಿತಿ ಹೇಗಿದೆ?

ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಲೆನಾಡು, ಕರಾವಳಿ ಭಾಗಗಳಲ್ಲೂ ಮನೆ, ಪ್ರವಾಹದ ಕಾರ್ಮೋಡಗಳು ಆವರಿಸಿಕೊಂಡಿವೆ. ಇಲ್ಲಿ ಚಿತ್ರಮಂದಿರಗಳನ್ನು ಕೇಳುವವರೇ ಇಲ್ಲ. ಯಾವ ಥಿಯೇಟರ್‌ನಲ್ಲಿ ಯಾವ ಸಿನಿಮಾ ಬಂದಿದೆ ಎಂದು ನೋಡುತ್ತಿದ್ದ ಜನ, ಯಾವಾಗ ತಮ್ಮ ಮನೆ, ಏರಿಯಾಗಳಿಗೆ ನೀರು ನುಗುತ್ತದೋ ಎನ್ನುವ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರು ಭಾಗದ ಹೊರತಾಗಿ ಮುಕ್ಕಾಲು ಕರ್ನಾಟಕವೇ ಸಿನಿಮಾ ಗಳಿಕೆಯ ಬಾಕ್ಸ್ ಅಫೀಸ್‌ಗೆ ಕೈ ಕೊಟ್ಟಿದೆ. ಯಾಕೆಂದರೆ ರಾಜ್ಯದಲ್ಲಿ ಒಟ್ಟು 575 ರಿಂದ 600 ಚಿತ್ರಮಂದಿರಗಳಿವೆ. ಈ ಪೈಕಿ ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ 200 ಚಿತ್ರಮಂದಿರಗಳಿವೆ. ಉಳಿದಂತೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 70 ಚಿತ್ರಮಂದಿರಗಳಿವೆ.

ಉಳಿದ ಥಿಯೇಟರ್‌ಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿದ್ದು, ಇಲ್ಲೆಲ್ಲ ಸಿನಿಮಾಗಳ ಗಳಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ‘ನಮ್ಮ ಕುರುಕ್ಷೇತ್ರವನ್ನು ಬಿಡುಗಡೆ ಮಾಡಿದ್ದು ವರಮಹಾಲಕ್ಷ್ಮೀ ಹಬ್ಬಕ್ಕಾಗಿ. ಯಾಕೆಂದರೆ ಸಿನಿಮಾ ಮಂದಿ ಈ ಹಬ್ಬವನ್ನು ಹೆಚ್ಚು ನಂಬುತ್ತಾರೆ. ಆದರೆ, ಮಳೆ, ಪ್ರವಾಹದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸಿನಿಮಾ ನೋಡಿ ಎನ್ನುವುದಕ್ಕೆ ಆಗಲ್ಲ. ಒಂದು ವೇಳೆ ಪ್ರಕೃತಿಯ ಈ ರೌದ್ರನರ್ತನ ಇಲ್ಲದೆ ಹೋಗಿದ್ದರೆ ಕುರುಕ್ಷೇತ್ರ ಚಿತ್ರದ ಅರ್ಧ ಗಳಿಕೆ ಉತ್ತರ ಕರ್ನಾಟಕದಿಂದಲೇ ಬರುತ್ತಿತ್ತು. ಈಗ ಅದನ್ನು ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ. ನಾವು ಅವರ ಸಂಕಷ್ಟಕ್ಕೆ ನಿಲ್ಲಬೇಕು. ಸಿನಿಮಾ ನೋಡಿ ಎನ್ನಲಾಗುದು’ ಎಂದು ನಿರ್ಮಾಪಕ ಮುನಿರತ್ನ ಪ್ರತಿಕ್ರಿಯಿಸುವ ಮೂಲಕ ಈಗಷ್ಟೆ ತೆರೆಗೆ ಬಂದಿರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೂ ಪ್ರವಾಹದ ಬಿಸಿ ತಟ್ಟಿದೆ. ಒಟ್ಟಿನಲ್ಲಿ ಚಿತ್ರೋದ್ಯಮದ ಪಾಲಿಗೆ ಅತಿ ದೊಡ್ಡ ಗಳಿಕೆಯ ಕೇಂದ್ರವಾಗಿದ್ದ ಉತ್ತರ ಕರ್ನಾಟಕ ಭಾಗದಲ್ಲೇ ಕನ್ನಡ ಸಿನಿಮಾಗಳು ಅನಾಥವಾಗಿವೆ. ಗಳಿಕೆಯಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. 

'ದಾರಿಯಿಲ್ಲದ ಊರಿಗೆ ಮಳೆಯೇ ಸೇತುವೆ'!

ಲೊಕೇಷನ್ ಶಿಫ್ಟ್!

ರಾಜ್ಯದ ಪ್ರವಾಹ ಸಿನಿಮಾದ ಚಿತ್ರೀಕರಣದ ಚಟುವಟಿಕೆಗಳ ಮೇಲೂ ಪೆಟ್ಟು ನೀಡಿದೆ. ಹೊರವಲಯದ ಚಿತ್ರೀಕರಣಕ್ಕೆ ಹೆಸರಾದ ಮಡಿಕೇರಿ, ಮಂಗಳೂರು, ಮಲ್ಪೆ, ಗೋಕರ್ಣ, ಬಾದಾಮಿ,
ಐಹೊಳೆ, ದಾಂಡೇಲಿ, ಜೋಗ, ಸಾಗರ ,ತೀರ್ಥಹಳ್ಳಿಗಳಿಗೆ ಸದ್ಯಕ್ಕೆ ಸಿನಿಮಾ ಮಂದಿ ಕಾಲಿಡುವಂತಿಲ್ಲ. ಭಾರೀ ಮಳೆಯಿಂದ ಇಲ್ಲಿನ ಸಂಪರ್ಕದ ರಸ್ತೆಗಳು ಹಾಳಾಗಿವೆ. ಜತೆಗೆ ಮಳೆಯ ಅನಾಹುತಗಳಿಂದ ಹಲವೆಡೆ ನಿರ್ಬಂಧ ಇದೆ. ಹೀಗಾಗಿ ರಾಜ್ಯದ ಹೆಸರಾಂತ ಶೂಟಿಂಗ್ ಲೊಕೇಷನ್ಸ್‌ಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಅದೇ ಕಾರಣಕ್ಕೀಗ ಕೆಲವು ಸಿನಿಮಾ ತಂಡಗಳ ಚಿತ್ರೀಕರಣದ ಲೊಕೇಷನ್ ಶಿಫ್ಟ್ ಆಗಿದೆ. ಚಿತ್ರೀಕರಣಕ್ಕಾಗಿ ಶಿವಮೊಗ್ಗದಲ್ಲಿ ಬೀಡು ಬಿಟ್ಟಿದ್ದ ‘ಏಕ್ ಲವ್ ಯಾ’ ಚಿತ್ರ ತಂಡ ಪ್ರವಾಹಕ್ಕೂ ಮುನ್ನವೇ ಬೆಂಗಳೂರಿಗೆ ಬಂದಿದೆ. ‘ಪೈಲ್ವಾನ್’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಮುಂದಕ್ಕೆ ಹೋಗಿ.