Asianet Suvarna News Asianet Suvarna News

'ಕುಮಾರವ್ಯಾಸಭಾರತ ಕಥಾಮೃತ' ಕೃತಿ: ಇದು ಶ್ರೀ ಭಾರತೀ ಪ್ರಕಾಶನದ ಕೊಡುಗೆ

ಲಕ್ಷ್ಮೀನಾರಾಯಣ ಭಟ್ಟರು ರಚನೆಯ 'ಕುಮಾರವ್ಯಾಸಭಾರತ ಕಥಾಮೃತ' ಕೃತಿಯನ್ನು, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.

Uttara Kannada district Siddapur Kumar Vyasabharata Kathamrita Kriti release suh
Author
First Published Jan 16, 2023, 11:05 AM IST

ಸಿದ್ಧಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಸಮೀಪದ ಭಾನ್ಕುಳಿ ಮಠ ಗೋಸ್ವರ್ಗದ ಗೋದಿನ-ಉತ್ಸವ ಸಂದರ್ಭದಲ್ಲಿ 'ಕುಮಾರವ್ಯಾಸಭಾರತ ಕಥಾಮೃತ' ಕೃತಿ ( Kumara Vyasa Bharata Kathamitra)ಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕೃತಿಯನ್ನು  ಹೊಸನಗರದ ರಾಮಚಂದ್ರಾಪುರ ಮಠ( Ramachandrapura Matha)ದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.

ಕೃತಿಯ ಲೋಕಾರ್ಪಣೆ ಬಳಿಕ ಮಾತನಾಡಿದ ಶ್ರೀಗಳು, ಭಗವಂತನ ಅವತಾರದ ಕಥೆಗಳ ಅನುಸಂಧಾನ ಜೀವಿಯ ಸಮುದ್ಧರಣಕ್ಕೆ ಕಾರಣವಾಗುತ್ತದೆ. ಇದಕ್ಕಾಗಿಯೇ ಪ್ರಾಚೀನರು ಆ ಚರಿತೆಗಳನ್ನು ಪುರಾಣವಾಗಿ, ಇತಿಹಾಸವಾಗಿ, ಕಾವ್ಯವಾಗಿ, ದೃಶ್ಯಕಲೆಯಾಗಿ ಬಹುವಿಧದಲ್ಲಿ ಮತ್ತೆ ಮತ್ತೆ ಸೃಜಿಸುತ್ತಾ ಬಂದರು. ಇದರ ಮುಂದುವರಿಕೆಯೇ ಭಾರತೀಯ ಸಾಹಿತ್ಯದ ಮೇರು ಕವಿಗಳಲ್ಲಿ ಒಬ್ಬನಾದ ಕುಮಾರವ್ಯಾಸ( Kumaravyasa) ರಚಿಸಿದ ಕರ್ಣಾಟಭಾರತ ಕಥಾಮಂಜರಿ(Karnata Bharata Kathamanjari) ಎಂದು ತಿಳಿಸಿದರು.

ರಸಯುಕ್ತವಾದ ಉತ್ತಮ ಕಾವ್ಯವಿದು. ಪ್ರಕೃತ ನಮ್ಮ ನೆಚ್ಚಿನ ಶಿಷ್ಯರಾದ ತೆಪ್ಪದ ಲಕ್ಷ್ಮೀನಾರಾಯಣ ಭಟ್ಟರು ಇಂದಿನ ಭಾಷೆ(language)ಯಲ್ಲಿ ಕುಮಾರವ್ಯಾಸನ ಕಾವ್ಯವನ್ನು ಮತ್ತೊಮ್ಮೆ ರಚಿಸಿದ್ದಾರೆ ಎಂದು ತಿಳಿಸಿದರು. 

ಇದು ನಮಗೆ ಮೆಚ್ಚುಗೆಯಾದ ಕಾರ್ಯ, ನಮ್ಮ ಪ್ರಕಾಶನ ಇದನ್ನು ಪ್ರಕಟಿಸುತ್ತಿರುವುದು ಪ್ರಶಂಸಾರ್ಹ. ಈ ಕೃತಿಕಾರರಿಂದ ಮತ್ತಷ್ಟು ಮೌಲಿಕ ಕೃತಿಗಳು ಹೊರಬರುವಂತಾಗಲಿ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮಿ( Sri Raghaveshwara Bharathi Mahaswamiji)ಗಳು ಆಶೀರ್ವದಿಸಿದರು. 

ಇನ್ನು ಕೃತಿ ಬಿಡುಗಡೆ (book release)ಕಾರ್ಯಕ್ರಮದಲ್ಲಿ ಕೃತಿಯ ಲೇಖಕರಾದ ಲಕ್ಷ್ಮೀನಾರಾಯಣ ಭಟ್ಟ ತೆಪ್ಪ, ಹವ್ಯಕ ಮಹಾಮಂಡಲ ಅಧ್ಯಕ್ಷರಾದ ಆರ್.ಎಸ್ ಹೆಗಡೆ ಹರಗಿ, ಶ್ರೀ ಭಾರತೀ ಪ್ರಕಾಶನದ ಅಧ್ಯಕ್ಷರಾದ ಸಚಿನ್.ಎಲ್.ಎಸ್ ಮುಂತಾದ ಗಣ್ಯರು ಭಾಗವಹಿಸಿದ್ದರು. 

ಇನ್ನು ಕೃತಿಕಾರರ ಸರಳಗನ್ನಡದ ಸುಲಲಿತ ಭಾಷೆ, ಅಂಕಣಕಾರರಾದ ನಾರಾಯಣ ಯಾಜಿ ಅವರ ಮುನ್ನುಡಿ, ಶ್ರೀ ಭಾರತೀ ಪ್ರಕಾಶನದ ದಿಗ್ದರ್ಶಕರಾದ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರ ಬೆನ್ನುಡಿ ಬರಹವನ್ನು ಈ ಹೊತ್ತಿಗೆ ಹೊಂದಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆ (Uttara Kannada district)ಯ ಸಿದ್ದಾಪುರದ ಭಾನ್ಕುಳಿಯಲ್ಲಿ ಜಗತ್ತಿನ ಪ್ರಥಮ ಗೋಸ್ವರ್ಗ ಆರಂಭಿಸಲಾಗಿದೆ. ಅದು ಗೋವುಗಳು ಸಹಜ ಜೀವನ ನಡೆಸುವ ಸೌಖ್ಯ ಕೇಂದ್ರವಾಗಿ ರೂಪುಗೊಂಡಿದೆ. ಅಂತಹ ಸ್ಥಳದಲ್ಲಿ ಈ ಕೃತಿ ಲೋಕಾರ್ಪಣೆಯಾಗಿದ್ದು ವಿಶೇಷವಾಗಿತ್ತು. ಇನ್ನು 'ಕುಮಾರವ್ಯಾಸಭಾರತ ಕಥಾಮೃತ' ಹೊತ್ತಿಗೆ ಕನ್ನಡಲೋಕ (www.kannadaloka.in) ಜಾಲತಾಣದಲ್ಲಿ ಲಭ್ಯವಿದೆ.


'ಕುಮಾರವ್ಯಾಸ ಭಾರತ ಕಥಾಮೃತ' ( Kumaravyasa Bharatha Kathamruta)ಕೃತಿಯನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ (Raghaveshwara Bharati Shri) ಲೋಕಾರ್ಪಣೆ ಮಾಡಿದರು.


 

Follow Us:
Download App:
  • android
  • ios