ಉರಿಗೌಡ, ನಂಜೇಗೌಡ ನನಗೆ ಅಪ್ರಸ್ತುತ: ಕೇಂದ್ರ ಸಚಿವ

ಉರಿಗೌಡ, ನಂಜೇಗೌಡ ಪಾತ್ರಗಳು ತಮಗೆ ಅಪ್ರಸ್ತುತ. ಕ್ಷುಲ್ಲಕ ವಿಷಯಗಳನ್ನು ತಾವು ಚರ್ಚಿಸುವುದಿಲ್ಲ ಎಂದು ಕೇಂದ್ರ ಸಚಿವ ಆನೇಕಲ್‌ ನಾರಾಯಣಸ್ವಾಮಿ ಹೇಳಿದರು.

Urigowda Nanjegowda are irrelevant to me: Union Minister snr

ತುಮಕೂರು: ಉರಿಗೌಡ, ನಂಜೇಗೌಡ ಪಾತ್ರಗಳು ತಮಗೆ ಅಪ್ರಸ್ತುತ. ಕ್ಷುಲ್ಲಕ ವಿಷಯಗಳನ್ನು ತಾವು ಚರ್ಚಿಸುವುದಿಲ್ಲ ಎಂದು ಕೇಂದ್ರ ಸಚಿವ ಆನೇಕಲ್‌ ನಾರಾಯಣಸ್ವಾಮಿ ಹೇಳಿದರು.

ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉರಿಗೌಡ, ನಂಜೇಗೌಡರ ವಿಷಯ ಬಿಜೆಪಿಗೆ ಪ್ಲಸ್‌ ಆಗುತ್ತಾ ಅನ್ನೋ ಪ್ರಶ್ನೆಗೆ ನಕ್ಕ ಸಚಿವರು, ಮೇಲಿನಂತೆ ಉತ್ತರಿಸಿದರು. ನಾನು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವವನು. ಯಾವ ಸಮಸ್ಯೆಗಳಿಗೆ ಜನರು ಪರಿಹಾರ ನಿರೀಕ್ಷೆ ಮಾಡುತ್ತಿದ್ದಾರೆ ಅದರ ಬಗ್ಗೆ ನಾನು ಚರ್ಚಿಸುವವನು. ಉರಿಗೌಡ, ನಂಜೇಗೌಡರ ವಿಷಯ ರಾಜ್ಯದ ಸಮಸ್ಯೆಗಳನ್ನು ಪರಿಹಾರ ಮಾಡುವುದಿಲ್ಲ. ರಾಜ್ಯದ ಶೋಷಿತ ವರ್ಗಕ್ಕೆ ಪರಿಹಾರ ಮೇಲಿನ ವಿಷಯ ಪರಿಹಾರ ಅಲ್ಲ. ನಾನು ಶೋಷಿತ ವರ್ಗದ ಪರವಾಗಿ ಮಾತನಾಡಲು ಬಂದಿದ್ದೇನೆ. ಯಾವುದೋ ವೈಯಕ್ತಿಕ ವಿಚಾರ ಮಾತನಾಡುವುದಿಲ್ಲ ಎಂದರು.

ಇತಿಹಾಸವನ್ನು ಯಾರು ಅರಿತಿದ್ದಾರೆ. ಅದರಲ್ಲಿ ಜವರೇಗೌಡ ಒಬ್ಬರು. ಜವರೇಗೌಡರ ಪುಸ್ತಕವನ್ನು ದೇವೇಗೌಡರೇ ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಇತಿಹಾಸಕಾರರನ್ನು ಗೌರವಿಸುವುದು ಸಮಾಜದ ಜವಾಬ್ದಾರಿ. ಆ ನಿಟ್ಟಿನಲ್ಲಿ ನಮ್ಮ ಪಕ್ಷ ನಡೆಯುತ್ತಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.

ಮೋದಿ ಅಭಿವೃದ್ಧಿ ಮಾಡುತ್ತಿದ್ದಾರೆ

ಯ​ಚೂ​ರು (ಮಾ.14) : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯ ಯಜ್ಞ ಮಾಡುತ್ತಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ(A Narayanaswamy) ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದ​ರು.

ಸ್ಥಳೀಯ ಮಹತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮ​ವಾರ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವ ಉದ್ದೇ​ಶೀಸಿ ಮಾತ​ನಾ​ಡಿದ ಅವರು, ದೇಶದಲ್ಲಿ ಕುಡಿಯುವ ನೀರು, ಶೌಚಾಲಯ, ವಸತಿ ಸೌಲಭ್ಯಗಳು ಸೇರಿದಂತೆ ಇನ್ನಿತರ ಹತ್ತು ಹಲವು ಯೋಜನೆಗಳ ಅಕ್ಷಯ ಪಾತ್ರೆಯನ್ನೇ ಸರ್ಕಾರ ತಂದು ಜನರ ಮನೆ ಬಾಗಿಲಿಗೆ ಮುಟ್ಟಿ​ಸುವ ಕೆಲಸ ಮಾಡಿದೆ. ದೇಶದಲ್ಲಿ 11 ಕೋಟಿ ಶೌಚಾಲಯಗಳ ನಿರ್ಮಾಣ ಮಾಡಿದ್ದಾರೆ. 10 ಸಾವಿರ ಕೋಟಿ ಕುಟುಂಬಗಳಿಗೆ ಗ್ಯಾಸ್‌ ವಿತರಣೆ ಮಾಡಲಾಗಿದೆ. ಜನರಿಗೆ ಯಾವುದೇ ಗ್ಯಾರಂಟಿ ನೀಡದೆ ಕಾರ್ಯನಿರ್ವಹಿಸಿದ್ದಾರೆ. ಆದರೆ, ಕಾಂಗ್ರೆಸ್‌ನವರು ಗ್ಯಾರಂಟಿ ಕಾರ್ಡ್‌ ನೀಡಿ ತಮ್ಮನ್ನು ನಂಬುವಂತೆ ಜನರ ಮುಂದೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಶೀಘ್ರ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಯಡಿಯೂರಪ್ಪ

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಪ್ರತಿಯೊಂದು ಜಾತಿಗೂ ನಿಗಮ ಸ್ಥಾಪನೆ ಮಾಡಿ, ಅನುದಾನ ಕಲ್ಪಿಸುವ ಕೆಲ​ಸ​ವನ್ನು ಮಾಡಿ​ದ್ದಾ​ರೆ ಎಂದರು.

ಸಚಿವ ಹಾಲ​ಪ್ಪ ಆಚಾರ್‌(Halappa achar) ಮಾತ​ನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾಭಿಮಾನಿ ದೇಶವನ್ನು ಕಟ್ಟುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಜನರ ಮನಸ್ಸನ್ನು ಗಟ್ಟಿಗೊಳಿಸಿ, ಎಲ್ಲರಿಗೂ ಲಸಿಕೆ ನೀಡುವ ಕೆಲಸ ಮಾಡಿದ್ದಾರೆ. 130 ಕೋಟಿ ಜನರ ಜೀವ ಉಳಿಸಲು ಲಸಿಕೆ ಕಂಡು ಹಿಡಿಯಲು ಪ್ರಧಾನಿಯು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು ಎಂದು ಹೇಳಿದರು.

ರೈತರು ಸ್ವಾಭಿಮಾನದಿಂದ ಬದುಕಲು ಅವರ ಖಾತೆಗೆ ನೇರವಾಗಿ ಸಹಾಯಧನ ಹಾಕುತ್ತಿದ್ದಾರೆ. ಯಾವುದೇ ಕಪ್ಪುಚುಕ್ಕೆ ಇಲ್ಲದೇ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ಪಾಸ್‌ ಒದಗಿಸಲು ಈಗಾಗಲೇ ಒಂದು ಸಾವಿರ ಕೋಟಿ ಅನುದಾನ ಒದಗಿಸಿದ್ದಾರೆ ಎಂದು ಹೇಳಿ​ದ​ರು.

ಇಂದು ಹನುಮ ಜನ್ಮಸ್ಥಳ ಅಂಜನಾದ್ರಿಗೆ ಸಿಎಂ ಬಸವರಾಜ ಬೊಮ್ಮಾಯಿ

ಸಮ್ಮೇ​ಳ​ನ​ದಲ್ಲಿ ವಿವಿಧ ಇಲಾಖೆಯಲ್ಲಿರುವ ಯೋಜನೆಗಳ 155 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಯೋಜನೆಗಳ ಸೌಲಭ್ಯಗಳನ್ನು ನೀಡಲಾಯಿತು. ಜನರಿಗೆ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ರೇಷ್ಮೆ ಇಲಾಖೆ, ಪಶುಪಾಲನೆ ಇಲಾಖೆ, ಕೃಷಿ ಇಲಾಖೆ, ಕಾಮಿಕ ಇಲಾಖೆ, ಆರೋಗ್ಯ ಇಲಾಖೆ, ಡೆ-ನಲ್ಮ್‌, ಸಹಕಾರ ಇಲಾಖೆ, ಮೀನುಗಾರಿಕೆ ಇಲಾಖೆ, ಸಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಸೇರಿದಂತೆ ಒಟ್ಟು 33 ಕ್ಕೂ ಅಧಿಕ ಇಲಾಖಾವಾರು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು

Latest Videos
Follow Us:
Download App:
  • android
  • ios