ಬೆಳಗಾವಿ [ಜ.05]: ವ್ಯಕ್ತಿಯನ್ನು ಕೊಲೆಗೈದು ಕಾಲುಗಳನ್ನು ಕತ್ತರಿಸಿ ಎಸೆದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. 

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಬಳಿಯಲ್ಲಿ ಶನಿವಾರ ಕತ್ತರಿಸಿ ಹಾಕಲಾಗಿದ್ದ ಮಾನವ ದೇಹದ ಕಾಲುಗಳು ಮಾತ್ರವೇ ಪತ್ತೆಯಾಗಿದ್ದು, ಅಪರಿಚಿತ  ಕಾಲುಗಳ ವೈದ್ಯಕೀಯ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. 

8 ದಿನಗಳ ಹಿಂದೆಯೇ ಕೊಲೆಗೈದು ಸಾಕ್ಷ್ಯ ನಾಶದ ಉದ್ದೇಶದಿಂದ ಕಾಲುಗಳನ್ನು ಕತ್ತರಿಸಿ ಬಿಸಾಕಿರುವ ಶಂಕೆ ವ್ಯಕ್ತವಾಗಿದ್ದು, ಮಹಿಳೆಯ ಕಾಲುಗಳಿರಬಹುದೆನ್ನಲಾಗಿದೆ. 

ಅಪರಿಚಿತ ಕಾಲುಗಳ ಪತ್ತೆ ಹಿನ್ನೆಯಲ್ಲಿ  ಜಿಲ್ಲೆಯಲ್ಲಿ ನಾಪತ್ತೆಯಾದವರ ಬಗ್ಗೆ ಪೊಲೀಸರು ಎಲ್ಲಾ ರೀತಿಯ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಬೆಳಗಾವಿ ಮಾರುಕಟ್ಟೆ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 

ಓಮ್ನಿಯಲ್ಲಿ ಕೊಳೆತ ಮಹಿಳೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !...

ಆದರೆ ಈ ಬಗ್ಗೆ ಯಾವುದೇ ರೀತಿಯಾದ ಸುಳಿವುಗಳು ಪತ್ತೆಯಾಗಿಲ್ಲ. ವೈದ್ಯಕೀಯ ಪರೀಕ್ಷೆ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.