Asianet Suvarna News Asianet Suvarna News

'ಎಚ್‌​ಡಿ​ಕೆ​ಯನ್ನು ಸಿಎಂ ಮಾಡಿದ್ದು ಸಿದ್ದ​ರಾ​ಮ​ಯ್ಯ​ ಅಲ್ಲ, ಹೈಕ​ಮಾಂಡ್‌'

ದೆಹಲಿ ಹೋರಾಟದ ಉದ್ದೇಶ ಅರ್ಥವಾಗುತ್ತಿಲ್ಲ| ಎಪಿಎಂಸಿ ದೋಷಮುಕ್ತ ಮಾಡುವ ಕಾಯ್ದೆ ಅದು| ಕೃಷಿ ಕ್ಷೇತ್ರದ ಸುಧಾ​ರ​ಣೆ​ಗೋ​ಸ್ಕರ ಮಾಡಿ​ರುವ ಕಾಯ್ದೆ ತಿದ್ದು​ಪ​ಡಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾ​ರದ ಐತಿಹಾಸಿಕ ನಿರ್ಣಯ| 

Union Minister Pralhad Joshi Talks Over Siddaramaiah grg
Author
Bengaluru, First Published Dec 19, 2020, 9:56 AM IST

ಧಾರ​ವಾಡ(ಡಿ.19): ಮೈತ್ರಿ ಸರ್ಕಾ​ರ​ದಲ್ಲಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯ​ಮಂತ್ರಿ​ಯಾಗಿ ಮಾಡಿದ್ದು ಸಿದ್ದ​ರಾ​ಮ​ಯ್ಯ​ ಅಲ್ಲ. ಕಾಂಗ್ರೆ​ಸ್‌ ಹೈಕಮಾಂಡ್‌ ಹೇಳಿ​ದ್ದನ್ನು ಸಿದ್ದ​ರಾ​ಮಯ್ಯ ಮಾಡಿ​ದ್ದಾರೆ. ಆದ​ರೆ, ನಾನೇ ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯ​ಮಂತ್ರಿ ಮಾಡಿ​ದ್ದೇನೆ ಎಂದು ಹೇಳಿ​ಕೊ​ಳ್ಳು​ತ್ತಿ​ದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿ​ದ್ದಾರೆ. 

"

ಶುಕ್ರ​ವಾರ ಧಾರ​ವಾ​ಡ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮೈತ್ರಿ ಸರ್ಕಾರ ಮಾಡಲು ಬೆಂಬಲ ನೀಡಿದ್ದು ಕಾಂಗ್ರೆಸ್‌ ಹೈಕಮಾಂಡ್‌ ಎನ್ನು​ವುದು ತಿಳಿ​ದಿ​ರಲಿ. ರಾಜ್ಯ​ದಲ್ಲಿ ಬಿಜೆಪಿ ಅಧಿ​ಕಾ​ರಕ್ಕೆ ಬಂದೀತು ಎಂಬ ಭಯ​ವಿತ್ತು. ಅದ​ಕ್ಕಾಗಿ ಹೈಕ​ಮಾಂಡ್‌ ಹೇಳಿ​ದಂತೆ ಸಿದ್ದ​ರಾ​ಮಯ್ಯ ಅವರು ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯಮಂತ್ರಿ ಕುರ್ಚಿ​ಯಲ್ಲಿ ಕುಳ್ಳ​ರಿ​ಸಿ​ದರೇ ಹೊರತು ಇದ​ಕ್ಕಾಗಿ ಸಿದ್ದ​ರಾ​ಮಯ್ಯ ಬೆಂಬಲ ನೀಡಿಯೇ ಇಲ್ಲ ಎಂದರು.

ಆ ಗಿರಾಕಿ ಹೋಟೆಲ್‌ನಲ್ಲಿ ಇದ್ರು : ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಕಾಂಗ್ರೆಸ್‌ ಬಗ್ಗೆ ಸಿ.ಎಂ. ಇಬ್ರಾಹಿಂ ಅಸಮಾಧಾನ ವಿಚಾರವಾಗಿ ಮಾತ​ನಾ​ಡಿದ ಜೋಶಿ, ಕಾಂಗ್ರೆಸ್‌ ಯಾವತ್ತೂ ಯಾರ ಪರವೂ ಇಲ್ಲ. ಅದು ಅಧಿಕಾರದ, ಭ್ರಷ್ಟಾಚಾರದ ಪರ. ಅದು ದಲ್ಲಾಳಿ, ತುಕ್ಡೇ ತುಕ್ಡೇ ಗ್ಯಾಂಗ್‌ ಪರವಾಗಿದೆ ಎಂದು ಟೀಕಿ​ಸಿ​ದರು. ಕಾಂಗ್ರೆಸ್‌ ಪ್ರಜಾಪ್ರಭುತ್ವದ ಪರವೂ ಇಲ್ಲ ಎಂದ ಜೋಶಿ, ಬಿಜೆಪಿಯಲ್ಲಿ ಹಾಗಿಲ್ಲ. ಇವತ್ತು ಜೆ.ಪಿ. ನಡ್ಡಾ ಅಧ್ಯಕ್ಷರಾಗಿದ್ದಾರೆ. ನಾಳೆ ಯಾರಾದರೂ ಆಧ್ಯಕ್ಷರಾಗಬಹುದು. ಸಾಮಾನ್ಯ ಕಾರ್ಯಕರ್ತನೂ ಆಗಬಹುದು ಎಂದರು.

"

ದೆಹಲಿ ರೈತರ ಹೋರಾಟ ವಿಚಾರವಾಗಿ ಪ್ರತಿ​ಕ್ರಿಯೆ ನೀಡಿದ ಅವರು, ಕೃಷಿ ಕ್ಷೇತ್ರದ ಸುಧಾ​ರ​ಣೆ​ಗೋ​ಸ್ಕರ ಮಾಡಿ​ರುವ ಕಾಯ್ದೆ ತಿದ್ದು​ಪ​ಡಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾ​ರದ ಐತಿಹಾಸಿಕ ನಿರ್ಣಯ. ರೈತರ ಶೋಷಣೆ ತಪ್ಪಿಸಲು ಈ ಕಾಯ್ದೆ ಜಾರಿ ಮಾಡ​ಲಾ​ಗಿದೆ. ದೆಹಲಿ ಸುತ್ತಮುತ್ತ ಜನರನ್ನು ತಂದು ತೊಂದರೆ ಕೊಡಲಾಗುತ್ತಿದೆ. ಸೈನಿಕರಿಗೆ ಆಹಾರ ತಲುಪಿಸಲು ಕೂಡ ಸಮಸ್ಯೆಯಾಗಿದೆ. ಇವರ ಉದ್ದೇಶಗಳೇನು ಎಂದು ಗೊತ್ತಾಗುತ್ತಿಲ್ಲ. ಇದು ರೈತ ಪರ ಕಾಯ್ದೆ. ಎಪಿಎಂಸಿ ಸದೃಢವಾಗಿದ್ದರೆ ರೈತರು ರಸ್ತೆಗೇಕೆ ಬೆಳೆ ತೂರು​ತ್ತಿ​ದ್ದರು? ಎಪಿಎಂಸಿಯನ್ನು ದೋಷಮುಕ್ತ ಮಾಡುವ ಕಾಯ್ದೆ ಇದು ಎಂದು ಸಚಿವ ಜೋಶಿ, ಎಪಿ​ಎಂಸಿ ತಿದ್ದು​ಪಡಿ ಕಾಯ್ದೆ​ಯನ್ನು ಸಮ​ರ್ಥಿ​ಸಿ​ಕೊಂಡ​ರು.
 

Follow Us:
Download App:
  • android
  • ios