Asianet Suvarna News Asianet Suvarna News

ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ: ಇದು ದೇಶದ್ರೋಹಿ, ಸಮಾಜ ದ್ರೋಹಿಗಳ ಮಧ್ಯೆ ಇರುವ ಹೋರಾಟ, ಪ್ರಹ್ಲಾದ್ ಜೋಶಿ

NIA ನಿಂದ ತಗೆದು ಹಾಕಿದೆ ಎಂದು ಬಂದಿದೆ. ಇದು ತುಷ್ಟೀಕರಣದ ಪರಾಕಷ್ಠೆಯಾಗಿದೆ. ಇದು ಬಹಳ ಸೀರಿಯಸ್ ಕೇಸ್ ಆಗಿದೆ. ಇದು ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲ. ದೇಶದ್ರೋಹಿ, ಸಮಾಜ ದ್ರೋಹಿಗಳ ಮಧ್ಯೆ ಇರುವ ಹೋರಾಟವಾಗಿದೆ. ಭಾರತದ ಸಂವಿಧಾನ, ಕಾನೂನು ಮಧ್ಯೆ ಆಗಿರೋ ಹೋರಾಟ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 

Union Minister Pralhad Joshi Talks Over Old Hubballi riot case grg
Author
First Published Oct 11, 2024, 12:23 PM IST | Last Updated Oct 11, 2024, 12:23 PM IST

ಹುಬ್ಬಳ್ಳಿ(ಅ.11):  ನಾಡಿನ ಜನತೆಗೆ ನವರಾತ್ರಿ ದಸರಾ ಹಬ್ಬದ ಶುಭಾಶಯಗಳು. ನಾಡದೇವತೆ ಎಲ್ಲರಿಗೂ ಆರೋಗ್ಯ ನೆಮ್ಮದಿ ಕೊಡಲಿ. ಎಲ್ಲರೂ ಸುಖ ಶಾಂತಿಯಿಂದ ಬದುಕಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಸರಾ ಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ ಅವರು, ರತನ್ ಟಾಟಾ ಕೇವಲ ಉದ್ಯಮಿ ಆಗಿರಲಿಲ್ಲ. ಅವರಿಗೆ ರಾಷ್ಟ್ರದ ಚಿಂತನೆ ಇತ್ತು. ಪ್ರತಿ ನಡೆಯಲ್ಲೂ ಪ್ರಾಮಾಣಿಕ ಉದ್ಯಮಿ ಚಾಪು ಕಾಣತಿತ್ತು. ಅವರ ಅಗಲಿಕೆ ತುಂಬಲರಾದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. 

ರಾಹುಲ್‌ ಗಾಂಧಿ ರೀತಿ ಪರಮೇಶ್ವರ್ ಚಿಲ್ಲರೆ ಮಾತುಗಳ ಆಡಬಾರದು: ಪ್ರಲ್ಹಾದ್ ಜೋಶಿ

ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಹ್ಲಾದ್ ಜೋಶಿ, NIA ನಿಂದ ತಗೆದು ಹಾಕಿದೆ ಎಂದು ಬಂದಿದೆ. ಇದು ತುಷ್ಟೀಕರಣದ ಪರಾಕಷ್ಠೆಯಾಗಿದೆ. ಇದು ಬಹಳ ಸೀರಿಯಸ್ ಕೇಸ್ ಆಗಿದೆ. ಇದು ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲ. ದೇಶದ್ರೋಹಿ, ಸಮಾಜ ದ್ರೋಹಿಗಳ ಮಧ್ಯೆ ಇರುವ ಹೋರಾಟವಾಗಿದೆ. ಭಾರತದ ಸಂವಿಧಾನ, ಕಾನೂನು ಮಧ್ಯೆ ಆಗಿರೋ ಹೋರಾಟ. ಇದೊಂದು ಪ್ಲ್ಯಾನ್ಡ್ ಅಟೆಂಪ್ಟ್ ಆಗಿತ್ತು. ನಾನು ಯಾರ ಹೆಸರನ್ನು ತಗೆದುಕೊಳ್ಳಲು ಹೋಗಲ್ಲ. ಅವತ್ತಿನ ಪೊಲೀಸ್‌ ಅಧಿಕಾರಿ ಸ್ವಲ್ಪದರಲ್ಲಿ ನಾನು ಬದಕಿದೆ ಎಂದು ಹೇಳಿದ್ರು. 155 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ರು. ಸುಪ್ರೀಂ ‌ಕೋರ್ಟ್ ಬೇಲ್ ರಿಜಕ್ಟ್ ಮಾಡಿತ್ತು ಎಂದು ಹೇಳಿದ್ದಾರೆ. 

ಸರ್ಕಾರ ಸರ್ಕಾರಿ ವಕೀಲರನ್ನು ಬದಲಾವಣೆ ಮಾಡಿ, ಕಾಂಗ್ರೆಸ್ ಕೆಲವು‌ ಮುಖಂಡರು,ಅಮಾಯಕರು ಎಂದು ಪತ್ರ ಬರೆದರು. ಹೋಂ ಮಿನಿಸ್ಟರ್ ಅದನ್ನು ರೆಕ್ಮೆಂಡ್ ಮಾಡಿದ್ರು. ಎರಡು ತಿಂಗಳ ಹಿಂದೆ ಅವರಿಗೆ ಜಾಮೀನು ಸಿಕ್ಕಿದೆ. ಸರ್ಕಾರ ಬಂದ ನಂತರವೂ ಜಾಮೀನು ತಡವಾಯ್ತು. ಅತ್ಯಂತ ಗಂಭೀರ ಸೆಕ್ಷನ್ ಹಾಕಿ ಅರೆಸ್ಟ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios