Asianet Suvarna News Asianet Suvarna News

ಮೋದಿ ಗ್ಯಾರಂಟಿ ಮೇಲೆಯೇ ಮತಯಾಚನೆ: ಕೇಂದ್ರ ಸಚಿವ ಭೂಪೇಂದ್ರ ಯಾದವ್

ಸುಳ್ಳು ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದ ಜನತೆ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಯನ್ನು ತಿರಸ್ಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಗ್ಯಾರಂಟಿಯ ಆಧಾರದ ಮೇಲೆ ಮತಯಾಚನೆ ಮಾಡಲಾಗುತ್ತದೆ. ಸುಳ್ಳು ಗ್ಯಾರಂಟಿಗಳ ಬಗ್ಗೆ ಪ್ರಚಾರದ ವೇಳೆ ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ 

Union Minister Bhupender Yadav  Talks Over PM Narendra Modi grg
Author
First Published Jan 28, 2024, 12:29 PM IST

ಬೆಂಗಳೂರು(ಜ.28):  ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಎಂದರೆ ನೈಜ ಗ್ಯಾರಂಟಿಯಾಗಿದ್ದು, ಲೋಕ ಸಭಾ ಚುನಾವಣೆಯಲ್ಲಿ ಅವರ ಗ್ಯಾರಂಟಿ ಮೇಲೆಯೇ ಮತಯಾಚನೆ ಮಾಡಲಾಗುವುದು ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. 

ಶನಿವಾರ ಅರಮನೆ ಮೈದಾನ ದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳು ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದ ಜನತೆ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಯನ್ನು ತಿರಸ್ಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಗ್ಯಾರಂಟಿಯ ಆಧಾರದ ಮೇಲೆ ಮತಯಾಚನೆ ಮಾಡಲಾಗುತ್ತದೆ. ಸುಳ್ಳು ಗ್ಯಾರಂಟಿಗಳ ಬಗ್ಗೆ ಪ್ರಚಾರದ ವೇಳೆ ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.

ಗಲಾಟೆ ಸಂಸದರಿಗೆ ಮೋದಿ ಚಾಟಿ: ನಿಯಮ ಉಲ್ಲಂಘಿಸುವ ಸಂಸದರಿಗೆ ಬೆಂಬಲ ಸರಿಯೇ? ವಿಪಕ್ಷಗಳಿಗೆ ಟಾಂಗ್

ಕಾಂಗ್ರೆಸ್ ಬಹುಸಂಖ್ಯಾತ, ಅಲ್ಪ ಸಂಖ್ಯಾತ ಎಂದು ಭೇದಭಾವ ಮಾಡಿದೆ. ಅಲ್ಪಸಂಖ್ಯಾತರ ಓಲೈಕೆಗೆ ಹೆಚ್ಚಿನ ಒತ್ತು ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ನ ಬೂಟಾಟಿಕೆ ಬಯ ಲಾಯಿತು. 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಬ್ ಕಾ ಸಾಥ್, ಸಬ್ ಮೂಲಮಂತ್ರದಡಿ ಕಾರ್ಯ ನಿರ್ವಹಿಸು ತ್ತಿದೆ. ತುಷ್ಟಿಕರಣ ನೀತಿಯನ್ನು ಬಿಜೆಪಿ ದೂರ ಮಾಡಿ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ ಕಡೆ ಗಮನ ಕೊಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳು ಲಭಿಸುವುದು ಖಚಿತ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲಬೇಕು. ನಂತರ ವಿಧಾನಸಭಾ ಚುನಾವಣೆಯಲ್ಲಿಲೂ ಕಮಲ ವನ್ನು ಅರಳಿಸಬೇಕು ಎಂದರು.

Follow Us:
Download App:
  • android
  • ios