Asianet Suvarna News Asianet Suvarna News

ಮಾ.3ಕ್ಕೆ ದೇವನಹಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ: ಸಚಿವ ಸುಧಾಕರ್‌

ಮಾ.3ರಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ದೇವನಹಳ್ಳಿಗೆ ಆಗಮಿಸಲಿದ್ದಾರೆ. ರಾಜ್ಯದ ನಾಲ್ಕೂ ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದ್ದು, ದೇವನಹಳ್ಳಿಯಲ್ಲಿ ನಡೆಯಲಿರುವ ಯಾತ್ರೆಗೆ ಅಮಿತ್‌ ಶಾ ಅವರು ಚಾಲನೆ ನೀಡಲಿದ್ದಾರೆಂದು ಬೆಂಗಳೂರು ಜಿಲ್ಲಾ ಉಸ್ತುವಾರಿ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Union Home Minister Amit Shah visited Devanahalli on March 3rd Says Minister Dr K Sudhakar gvd
Author
First Published Mar 1, 2023, 9:23 PM IST

ಚಿಕ್ಕಬಳ್ಳಾಪುರ (ಮಾ.01): ಮಾ.3ರಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ದೇವನಹಳ್ಳಿಗೆ ಆಗಮಿಸಲಿದ್ದಾರೆ. ರಾಜ್ಯದ ನಾಲ್ಕೂ ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದ್ದು, ದೇವನಹಳ್ಳಿಯಲ್ಲಿ ನಡೆಯಲಿರುವ ಯಾತ್ರೆಗೆ ಅಮಿತ್‌ ಶಾ ಅವರು ಚಾಲನೆ ನೀಡಲಿದ್ದಾರೆಂದು ಬೆಂಗಳೂರು ಜಿಲ್ಲಾ ಉಸ್ತುವಾರಿ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ ಮತ್ತು ಪುರ ಗ್ರಾಪಂಗಳಲ್ಲಿ ಸೋಮವಾರ ನಡೆದ ಗ್ರಾಮ ಸಭೆಗಳಲ್ಲಿ ಮಾತನಾಡಿದ ಅವರು, ಗೃಹ ಸಚಿವರು ಪಾಲ್ಗೊಳ್ಳುವ ವಿಜಯ ಸಂಕಲ್ಪ ಯಾತ್ರೆಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಆಗಬೇಕೆಂದು ಕೋರಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.

10 ವರ್ಷ ಎಲ್ಲಿದ್ದರು?: ಮಂಚೇನಹಳ್ಳಿ ತಾಲೂಕು ಹಿಂದೆಂದೂ ಆಗದ ಅಭಿವೃದ್ಧಿ ಕಾಣುತ್ತಿದೆ. ಆದರೆ ಕಳೆದ 10 ವರ್ಷದಿಂದ ಎಲ್ಲಿದ್ದರೋ ಗೊತ್ತಿಲ್ಲ, ಈಗ ಮನೆ ಮನೆಗೆ ತಿರುಗುತ್ತಿದ್ದಾರೆ. ಪ್ರತಿ ಮನೆಯಲ್ಲಿಯೂ ಮತ ಯಾಚಿಸುತ್ತಿದ್ದಾರೆ. ಆದರೆ ನಾವು ಮಾತ್ರ 355 ಕುಟುಂಬಗಳಿಗೆ ನಿವೇಶನ ನೀಡಲು ಬಂದಿದ್ದೇವೆ ಎಂದು ಪರೋಕ್ಷವಾಗಿ ಜೆಡಿಎಸ್‌ ನಾಯಕರಿಗೆ ಸಚಿವ ಸುಧಾಕರ್‌ ಟಾಂಗ್‌ ನೀಡಿದರು. ನಿವೇಶನ ಮತ್ತು ಮನೆ ಹೊಂದುವುದು ಸಾಮಾಜಿಕ ಭದ್ರತೆ ಕಲ್ಪಿಸುವುದಾಗಿದೆ. ಈಗಾಗಲೇ ರಾಜ್ಯ ಕಂದಾಯ ಸಚಿವ ಆರ್‍. ಅಶೋಕ್‌ ಅವರು ಇದೇ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. 

ಸಂವಿಧಾನ ಬದ್ಧವಾಗಿ ಕೆಲಸ ಮಾಡುವ ಪಕ್ಷ ಕಾಂಗ್ರೆಸ್‌: ಡಿ.ಕೆ.ಶಿವಕುಮಾರ್‌

ಅಲ್ಲದೆ ಗ್ರಾಮಗಳ ಸರ್ವತೋಮುಖಭಿವೃದ್ಧಿಗಾಗಿ 1 ಕೋಟಿ ಅನುದಾನ ನೀಡಲಾಗಿದ್ದು, ಈ ಅನುದಾನದಲ್ಲಿ ಈಗಾಗಲೇ ಹಲವು ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದರು. ಸ್ಮಾರ್ಟ್‌ ನಗರಗಳ ಮಾದರಿಯಲ್ಲಿ ಸ್ಮಾರ್ಚ್‌ ಗ್ರಾಮಗಳ ನಿರ್ಮಾಣ ಮಾಡುವ ಗುರಿ ಹೊಂದಿರುವುದಾಗಿ ಹೇಳಿದ ಸಚಿವ ಸುಧಾಕರ್‌, ಜರಬಂಡಹಳ್ಳಿ ಗ್ರಾಪಂನಲ್ಲಿ 355 ನಿವೇಶನ ಮತ್ತು 105 ಮನೆ ವಿತರಣೆಯಾಗಲಿದ್ದು, ಇವರೆಲ್ಲರಿಗೂ ಜೀವನ ಭದ್ರತೆ ಒದಗಿಸಿದಂತಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಗನ್ನಾಥ, ನಾರಾಯಣಸ್ವಾಮಿ, ಅಪ್ಪಿಗೌಡ, ಶಿವಶಂಕರ್‌, ಭಾಗ್ಯಲಕ್ಷ್ಮೀ, ನರಸಿಂಹಗೌಡ, ಸುಬ್ಬಾರೆಡ್ಡಿ, ಬಾಲು, ಶಿವು, ವೆಂಕಟೇಶ, ರಾಜಶೇಖರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

6.5 ಕೋಟಿ ಜನರ ಆರೋಗ್ಯ ಹೊಣೆ ನನ್ನ ಪುಣ್ಯ: ರಾಜ್ಯದ ಆರೂವರೆ ಕೋಟಿ ಜನರ ಆರೋಗ್ಯ ಸುಧಾರಣೆ ಮಾಡುವ, ಯೋಗಕ್ಷೇಮ ನೋಡಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಸುಕೃತ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು. 15ನೇ ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕಲಾಪದಲ್ಲಿ ಮಾತನಾಡಿದ ಅವರು, ರಾಜ್ಯದ ಆರೂವರೆ ಕೋಟಿ ಜನರ ಧ್ವನಿಯಾಗಿ, ಆಶೋತ್ತರಗಳಿಗೆ ಸ್ಪಂದಿಸುವ ಶಕ್ತಿಯಾಗಿ ಜನರು ಶಾಸಕರನ್ನು ಶಕ್ತಿಸೌಧಕ್ಕೆ ಚುನಾಯಿಸಿ ಕಳುಹಿಸುತ್ತಾರೆ. ಆರೂವರೆ ಕೋಟಿ ಜನರಲ್ಲಿ 224 ಜನ ಮಾತ್ರ ಆಯ್ಕೆಯಾಗುವುದು. ಅದರಲ್ಲೂ ಸಹ ಸಚಿವರಾದರೆ ಒಂದೊಂದು ಇಲಾಖೆಗೆ ಒಬ್ಬರು. 

ಅದೇನ್‌ ಬಿಚ್ಚಿಡ್ತೀರೋ, ಮೊದಲು ಬಿಚ್ಚಿಡಿ: ಶಾಸಕ ಶಿವಲಿಂಗೇಗೌಡರಿಗೆ ಎಚ್‌ಡಿಕೆ ಸವಾಲು

ಇಂತಹದ್ದರಲ್ಲಿ ಆರೂವರೆ ಕೋಟಿ ಜನರ ಆರೋಗ್ಯವನ್ನು ಸುಧಾರಣೆ ಮಾಡುವ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಸುಕೃತ ಎಂದು ತಿಳಿಸಿದರು. 14 ಮತ್ತು 15ನೇ ವಿಧಾನಸಭೆ ಅಧಿವೇಶನದ 10 ವರ್ಷಗಳಲ್ಲಿ ಮೂರು ಬಾರಿ ಆಯ್ಕೆಯಾಗಲು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ನಾನು ಈ ಸದನದ ಮೂಲಕ ಕೋಟಿ ನಮನಗಳನ್ನು ಅರ್ಪಿಸುತ್ತೇನೆ. 15ನೇ ವಿಧಾನಸಭೆ ರಾಜಕೀಯ ಕ್ಷೇತ್ರದಲ್ಲಿ ವಿಶೇಷವಾದ ಕಾಲಘಟ್ಟವಾಗಿದೆ. ಚುನಾವಣೆಗೆ ಮುಂಚೆ ಮೂರೂ ಪಕ್ಷಗಳೂ ತಮ್ಮ-ತಮ್ಮ ಪ್ರಣಾಳಿಕೆ ಮುಂದಿಟ್ಟುಕೊಂಡು ಆಯ್ಕೆ ಬಯಸಿದೆವು. ಆದರೆ ರಾಜ್ಯದ ಜನತೆ 2018ರಲ್ಲಿ ಯಾರಿಗೂ ಬಹುಮತ ನೀಡಲಿಲ್ಲ ಎಂದು ವಿವರಿಸಿದರು.

Follow Us:
Download App:
  • android
  • ios