ಮಂಡ್ಯ(ಆ.31): ಕೇಂದ್ರ ಬಿಜೆಪಿ ಸರ್ಕಾರ ಸಾಂವಿ​ಧಾ​ನಿಕ ಸಂಸ್ಥೆ​ಗ​ಳನ್ನು ದುರ್ಬಳಕೆ ಮಾಡಿ​ಕೊಂಡು ಕಾಂಗ್ರೆಸ್‌ ನಾಯಕರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌ ಶುಕ್ರವಾರ ಆರೋ​ಪಿ​ಸಿ​ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಾ​ದ್ಯಂತ ಕಾಂಗ್ರೆಸ್‌ ನಾಯಕರು ಹಾಗೂ ಮುಖಂಡ​ರರ ಮೇಲೆ ಸಿಬಿಐ, ಐಟಿ ಮತ್ತು ಇಡಿ​ಯಂತಹ ಸಾಂವಿ​ಧಾ​ನಿಕ ಸಂಸ್ಥೆ​ಗ​ಳಿಂದ ದಾಳಿ ಮಾಡಿಸಿ ಕಾಂಗ್ರೆಸ್‌ ಪಕ್ಷ ಮತ್ತು ನಾಯಕರ ಮೇಲೆ ಕೆಟ್ಟಹೆಸರು ತರಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡಿ ದುರುಪಯೋಗ:

ಡಿ.ಕೆ. ಶಿವ​ಕು​ಮಾರ್‌ ರಾಜ್ಯದ ಕಾಂಗ್ರೆಸ್‌ನ ಪ್ರಭಾ​ವಿ ಮುಖಂಡ​ರಾಗಿದ್ದಾರೆ. ಕೇಂದ್ರ ಸರ್ಕಾರ ಇಡಿ ಇಲಾ​ಖೆ​ಯನ್ನು ಡಿಕೆಶಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯ​ಕ​ರ​ನ್ನೇ ಗುರಿ​ಯಾ​ಗಿ​ಸಿ​ಕೊಂಡು ಸಿಬಿಐ, ಐಟಿ ಮತ್ತು ಇಡಿ​ಯಂತ​ಹ ಸಾಂವಿ​ಧಾ​ನಿಕ ಸಂಸ್ಥೆ​ಗ​ಳಿಂದ ತಮ್ಮ ಪಕ್ಷಕ್ಕೆ ವಿರೋ​ಧ​ವಾಗಿ ನಡೆ​ದು​ಕೊ​ಳ್ಳುವವರನ್ನು ಮುಗಿ​ಸುವ ಹುನ್ನಾ​ರ ನಡೆ​ಸು​ತ್ತಿ​ದೆ ಎಂದು ಆರೋಪಿಸಿದರು.

ಗುಜ​ರಾತ್‌ ರಾಜ್ಯದಲ್ಲಿ ಉಂಟಾ​ಗಿದ್ದ ರಾಜ​ಕೀಯ ಅಸ್ಥಿ​ರ​ತೆ​ಯಿಂದ ಅಲ್ಲಿನ ಶಾಸ​ಕರು ಕರ್ನಾಟ​ಕಕ್ಕೆ ಪ್ರವಾ​ಸಕ್ಕೆ ಬಂದಿದ್ದ ವೇಳೆ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವ​ಕು​ಮಾರ್‌ ಅವರಿಗೆ ಸಾಕಷ್ಟುಭದ್ರತೆ ನೀಡಿದ್ದರು. ಈ ಬೆಳ​ವ​ಣಿ​ಗೆಯ ನಂತರ ಡಿ.ಕೆ.ಶಿವ​ಕು​ಮಾರ್‌ ಅವರ ಧಮ​ನಕ್ಕೆ ಕೇಂದ್ರ ಸರ್ಕಾರ ಮುಂದಾ​ಗಿದೆ ಎಂದು ದೂರಿದರು.

ರಾಜಕೀಯ ಪ್ರೇರಿತ ದಾಳಿ:

ರಾಜಕೀಯ ಪ್ರೇರಿತವಾಗಿ ರೋ​ಧಿಗಳ ಮೇಲೆ ದಬ್ಬಾ​ಳಿಕೆ, ದೌರ್ಜನ್ಯ ಮಾಡು​ವುದು ಪ್ರಜಾ​ಪ್ರ​ಭು​ತ್ವದ ಕಗ್ಗೊ​ಲೆ​ಯಾ​ಗಿದೆ. ನೋಟಿಸ್‌ ನೀಡಿ ಅದಕ್ಕೆ ಸಮ​ಜಾ​ಯಿಸಿ ಪಡೆ​ಯು​ವುದು, ತಪ್ಪಿ​ದ್ದಲ್ಲಿ ದಂಡ ವಸೂಲಿ ಮಾಡು​ವುದು ಐಟಿ ಮತ್ತು ಇಡಿಯ ಕ್ರಮ​ವಾ​ಗಿದೆ. ಆದ​ರೆ ಕೇಂದ್ರ ಸರ್ಕಾರ ಇಡಿ​ಯನ್ನು ಬಿಟ್ಟು ಶಿವ​ಕುಮಾರ್‌ ಅವ​ರನ್ನು ಬಂಧನ ಮಾಡಲು ಮುಂದಾ​ಗಿದೆ ಎಂದು ಆರೋ​ಪಿ​ಸಿದರು. ಕೇಂದ್ರ ಸರ್ಕಾರ ಕ್ರಮ​ದಿಂದ ಹಿಂದೆ ಸರಿ​ಯ​ಬೇಕು. ಇಲ್ಲದಿ​ದ್ದಲ್ಲಿ ರಾಜ್ಯಾ​ದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಬೀದಿ​ಗಿ​ಳಿದು ಹೋರಾಟ ನಡೆ​ಸ​ಲಿ ಎಂದು ಎಚ್ಚರಿಸಿದರು.

ಮಂಡ್ಯ [ಆ.30] : ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಂಡ್ಯ ಸಂಸದೆ ಸುಮಲತಾ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೆಡಿಎಸ್ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಾರಾಯಣ ಗೌಡ 1966ರ KR ಪೇಟೆ ಉಪ ಚುನಾವಣೆ ಸನ್ನಿವೇಶ ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದಾರೆ. 

1996 ರಲ್ಲಿ ಕೆ.ಆರ್ ಪೇಟೆ ಶಾಸಕರಾಗಿದ್ದ ಕೃಷ್ಣ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು.. ಆಗ ಜವರಾಯಿ ಗೌಡ ಎನ್ನುವವರಿಗೆ ದೇವೇಗೌಡರು ಟಿಕೆಟ್ ಕೊಟ್ಟಿದ್ದರು. ಇದರಿಂದ ಬಿ. ಪ್ರಕಾಶ್ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಜವರಾಯಿ ಗೌಡ ಸೋತರು. ಇದರ ಹಿಂದೆ ಸೋಲಿಸುವ ಉದ್ದೇಶವಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುದ್ಧಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಎಸ್‌. ಆತ್ಮಾ​ನಂದ, ಎಂ.ಎಸ್‌ .ಚಿದಂಬರ್‌ , ಸಿ.ಎಂ.ದ್ಯಾವಪ್ಪ, ಹಾಲ​ಹಳ್ಳಿ ರಾಮ​ಲಿಂಗಯ್ಯ, ಸಿದ್ದ​ರಾ​ಮೇ​ಗೌಡ, ಅಂಜನಾ ಶ್ರೀಕಾಂತ್‌, ಪಾಪಣ್ಣ ಇದ್ದರು.