ಉಡುಪಿ (ಅ.25) :  ಕೊಲ್ಲೂರು ದೇವಸ್ಥಾನ ದಲ್ಲಿ ರಥೋತ್ಸವ ಗೊಂದಲ ಉಂಟಾಗಿದೆ.  ಪುಷ್ಪರಥದ ಬದಲು ಚಿನ್ನದ ರಥೋತ್ಸವ ಮಾಡಿದ್ದು ಗೊಂದಲಕ್ಕೆ ಕಾರಣವಾಗಿದೆ. 

ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಮಹಾನವಮಿ ಪ್ರಯುಕ್ತ ಶನಿವಾರ ರಾತ್ರಿ ನಡೆದ ಉತ್ಸವದಲ್ಲಿ ಸಂಪ್ರದಾಯದಂತೆ ಉತ್ಸವಕ್ಕೆ ಪುಷ್ಪರಥ ಸಜ್ಜು ಮಾಡಲಾಗಿತ್ತು. 

ಆದತರ ಶಾಸಕ ಸುಕುಮಾರ ಶೆಟ್ಟಿ ಆದೇಶದಂತೆ ನಡೆದ ಚಿನ್ನದ ರಥೋತ್ಸವ ಮಾಡಿ ಸಂಪ್ರದಾಯ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಕೆಲವರಿಗೆ ಬೇಸರ ಉಂಟಾಗಿದೆ. 

ಕೊರೋನಾ ಭೀತಿ, ಕೊಲ್ಲೂರಿಗೆ ಬರ್ತಿಲ್ಲ ಕೇರಳದ ಭಕ್ತರು ..

ಸುಕುಮಾರ ಶೆಟ್ಟಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದು, ಅವರ ಕಾಲದಲ್ಲೇ ಚಿನ್ನದ ರಥ ದೇವಾಲಯಕ್ಕೆ ಅರ್ಪಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಚಿನ್ನದ ರಥೋತ್ಸವ ನಡೆಸಲು ಶಾಸಕರ ಸೂಚನೆ ನೀಡಿದ್ದರೆನ್ನಲಾಗಿದೆ.

ಸಂಪ್ರದಾಯ ಬದಲಾಯಿಸಿದ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದು, ಗೊಂದಲದ ನಡುವೆಯೂ ಸುಸೂತ್ರವಾಗಿ  ಚಿನ್ನದ ರಥೋತ್ಸವ ನೆರವೇರಿದೆ.