ಚಾಮರಾಜನಗರ (ಆ.19): ಆನ್‌ಲೈನ್‌ ತರಗತಿಗೆ ಮೊಬೈಲ್‌ ಕೊಡಿಸಲಿಲ್ಲ ಎಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜೇಶ್‌ ಪುತ್ರಿ ಹರ್ಷಿತಾ(15) 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆನ್‌ಲೈನ್‌ ತರಗತಿಗೆ ಮೊಬೈಲ್‌ ಕೊಡಿಸುವಂತೆ ಪಾಲಕರನ್ನು ಪೀಡಿಸಿದ್ದಾಳೆ. 

ರಾಜೇಶ್‌ ಟೈಲರಿಂಗ್‌ ವೃತ್ತಿ ಮಾಡುತ್ತಿದ್ದು, ಯಾವುದಾದರೂ ಹಣ ಬಂದಾಗ ಕೊಡಿಸುತ್ತೇನೆಂದು ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯುವಕರೇ ಹುಷಾರ್! ಹಳ್ಳಿ ಹುಡುಗನಿಗೆ ಕೈಗೆ ಚಿಪ್ಪಿಟ್ಟ 'ಇನ್ ಕಂ ಟ್ಯಾಕ್ಸ್ ಲಕ್ಷ್ಮಿ'...

ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಇದ್ದು ಶಾಲೆಗಳನ್ನು ತೆರೆದು ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ಆನ್ಲೈನ್ ಕ್ಲಾಸ್ ನಡೆಸಲು ನಿರ್ಧರಿಸಿದ್ದು, ಇದರಿಂದ ಮೊಬೈಲ್ ಕೊಳ್ಳಲಾಗದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.