ಉಡುಪಿಗೆ ಎಂಟ್ರಿ ಆಗುತ್ತಿದ್ದಂತೆ ಡ್ರಗ್ಸ್ ವಿರುದ್ಧ ಸಮರ ಸಾರಿದ ಎಸ್ಪಿ: 9 ಜನರ ಬಂಧನ

ಜಿಲ್ಲೆಯ ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಡ್ರಗ್ಸ್ ಮಾಫಿಯಾದ ವಿರುದ್ದ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳ ಬೇಟೆ ಆರಂಭವಾಗಿದೆ.

Udupi SP war aganist drugs Mafia 9 arrested akb

ಉಡುಪಿ: ಜಿಲ್ಲೆಯ ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಡ್ರಗ್ಸ್ ಮಾಫಿಯಾದ ವಿರುದ್ದ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳ ಬೇಟೆ ಆರಂಭವಾಗಿದೆ. ಭಾನುವಾರ ಉಡುಪಿ ಜಿಲ್ಲೆಯ ಕುಂದಾಪುರ ಉಪ ವಿಭಾಗದ ಗಂಗೊಳ್ಳಿ ಠಾಣೆಯಲ್ಲಿ ಒಂದು ಹಾಗೂ ಕುಂದಾಪುರ ಠಾಣೆಯಲ್ಲಿ ಪ್ರತ್ಯೇಕ ಮೂರು ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 9 ಜನರನ್ನು ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ನಗರ ಠಾಣಾ ಉಪನಿರೀಕ್ಷಕ ಸದಾಶಿವ ಗವರೋಜಿ ಅವರು ಕೋಡಿ ಬೀಚ್ ನಲ್ಲಿ ಗಸ್ತು ತಿರುಗುತ್ತಿದ್ದಾಗ ಅನುಮಾಸ್ಪದ ವ್ಯಕ್ತಿಯನ್ನು ತಪಾಸಣೆ ನಡೆಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವಿಸಿರುವುದು ಖಚಿತಗೊಂಡಿದೆ. ವಶಕ್ಕೆ ಪಡೆದ ವ್ಯಕ್ತಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆಯೇ ಕುಂದಾಪುರ ಗ್ರಾಮಾಂತರ ಪಿ.ಎಸ್.ಐ ಪವನ್ ರಾತ್ರಿ ಗಸ್ತು ತಿರುಗುತ್ತಿದ್ದಾಗ ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ ಬಳಿ ಗಾಂಜಾ ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ತಪಾಸಣೆ ನಡೆಸಿದಾಗ ಓರ್ವ ಸಿಕ್ಕಿಬಿದ್ದಿದ್ದಾನೆ. ಅನುಮಾನದ ಮೇಲೆ ಆತನಿಗೆವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಸುದೀಪ್ ವಶಕ್ಕೆ ಪಡೆದ ಆರೋಪಿ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಹೊಟೇಲ್‌ನಲ್ಲಿ ರೇವ್ ಪಾರ್ಟಿ ಕೇಸ್‌: ಸಿದ್ದಾಂತ್ ಕಪೂರ್ ಸೇರಿ ಐವರಿಗೆ ಠಾಣಾ ಜಾಮೀನು

ಇನ್ನೊಂದು ಪ್ರಕರಣದಲ್ಲಿ ಕುಂದಾಪುರ ನಗರ ಠಾಣಾ ತನಿಖಾ ಪಿ.ಎಸ್.ಐ ಪ್ರಸಾದ್ ರಾತ್ರಿ ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಹೆಮ್ಮಾಡಿ ಬಳಿ ತೆರಳಿದಾಗ ವ್ಯಕ್ತಿಯೊಬ್ಬರು ತೂರಾಡಿಕೊಂಡು ಬರುವುದನ್ನು ಗಮನಿಸಿ, ಅವರನ್ನು ವಿಚಾರಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ. ನಾಗರಾಜ್ ವಶಕ್ಕೆ ಪಡೆದ ಆರೋಪಿ. ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕನೇ ಪ್ರಕರಣದಲ್ಲಿ ಗಂಗೊಳ್ಳಿ ಪಿ.ಎಸ್.ಐ ವಿನಯ ಕೊರ್ಲಹಳ್ಳಿ ಮತ್ತು ಸಿಬ್ಬಂದಿ ತಡರಾತ್ರಿ ಗಸ್ತು ತಿರುಗುತ್ತಿದ್ದಾಗ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್‌ನಲ್ಲಿ ಕೆಲವು ಹುಡುಗರು ಕುಳಿತು ಗಾಂಜಾ ಸೇವಿಸುತ್ತಿರುವುದು ಪೊಲೀಸ್ ಮಾಹಿತಿದಾರರಿಂದ ತಿಳಿದು ಬಂದಿದೆ. ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ 6 ಜನರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.  

Bengaluru Crime: ಕೊರಿಯರ್‌ನಲ್ಲಿ ಬಂದಿದ್ದ 7 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ವಶಕ್ಕೆ ಪಡೆದ ಆರೋಪಿಗಳನ್ನು ಆಶಿಶ್, ಅಕ್ಷಿತ್, ನಿಯಾಝ್, ಹರ್ಷವರ್ಧನ್, ವಿಶಾಲ್, ಆದಿತ್ಯ ಬರಂಬೆ ಎಂದು ಗುರುತಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios