ಉಡುಪಿ: ಫೋಕಸ್ ರಾಘುಗೆ ಫ್ರಾನ್ಸ್ ಗೌರವ
ಉಡುಪಿ ಖ್ಯಾತ ಯುವ ಛಾಯಾಚಿತ್ರಗ್ರಾಹಕ ಫೋಕಸ್ ರಾಘು ಅವರಿಗೆ 2019ನೇ ಸಾಲಿನಲ್ಲಿ, ಫ್ರಾನ್ಸ್‌ನ ಪ್ರತಿಷ್ಠಿತ ಎಫ್‌ಐಎಪಿ (ಫೆಡರೇಶನ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೋಗ್ರಾಫಿಕ್) ಸಂಸ್ಥೆಯಿಂದ ಎಎಫ್‌ಐಪಿ ಡಿಸ್ಟಿಂಕ್ಷನ್ ಗೌರವ ಲಭಿಸಿದೆ.
ಉಡುಪಿ(ಜ.17): ಉಡುಪಿ ಖ್ಯಾತ ಯುವ ಛಾಯಾಚಿತ್ರಗ್ರಾಹಕ ಫೋಕಸ್ ರಾಘು ಅವರಿಗೆ 2019ನೇ ಸಾಲಿನಲ್ಲಿ, ಫ್ರಾನ್ಸ್‌ನ ಪ್ರತಿಷ್ಠಿತ ಎಫ್‌ಐಎಪಿ (ಫೆಡರೇಶನ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೋಗ್ರಾಫಿಕ್) ಸಂಸ್ಥೆಯಿಂದ ಎಎಫ್‌ಐಪಿ ಡಿಸ್ಟಿಂಕ್ಷನ್ ಗೌರವ ಲಭಿಸಿದೆ.
ಕಲಾತ್ಮಕ ಛಾಯಾಗ್ರಾಹಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಛಾಯಾಗ್ರಾಹಕರಿಗೆ ಈ ಗೌರವವನ್ನು ನೀಡಲಾಗುತ್ತದೆ. ರಾಘು ಅವರು ಕರಾವಳಿ ಭಾಗದಲ್ಲಿ ಈ ಗೌರವ ಮೂರನೇ ಛಾಯಾಗ್ರಾಹಕರಾಗಿದ್ದಾರೆ. ಈ ಗೌರವದಿಂದಾಗಿ ಅವರ ಛಾಯಾಚಿತ್ರಗಳು ಭಾರತ, ಸಿಂಗಾಪುರ, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ, ಶ್ರೀಲಂಗಾ, ಗ್ರೀಕ್, ಕೆನಡಾ, ಚೀನಾ ಮುಂತಾದ ದೇಶಗಳಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಗಳಿಗೆ ಆಯ್ಕೆಯಾಗಿವೆ.
250ನೇ ಪರ್ಯಾಯೋತ್ಸವ ಆರಂಭ, ಉಡುಪಿ ನಗರಾದ್ಯಂತ ದೀಪಾಲಂಕಾರ
ಫೋಕಸ್ ರಾಘು ಅವರು 2 ದಶಕಗಳಿಂದ ವೃತ್ತಿಪರ ಛಾಯಾಗ್ರಾಹಕರಾಗಿ, ವನ್ಯಜೀವಿ, ಟ್ರಾವಲ್ ಮತ್ತು ಸ್ಟ್ರೀಟ್ ಛಾಯಾಗ್ರಹಣದ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಈಗಾಗಲೇ 15ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು, 50ಕ್ಕೂ ಹೆಚ್ಚು ರಾಷ್ಟ್ರ- ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಅಮಿತ್ ಶಾಗೆ ಐವನ್ ಡಿಸೋಜಾ ನಾಲ್ಕು ಪ್ರಶ್ನೆ..!