ಉಡುಪಿ(ಏ.30): ಜಿಲ್ಲೆಯಲ್ಲಿ ಕೊರೋನಾ ವಾಸಿಟಿವ್‌ ಪ್ರಕರಣಗಳು ಪತ್ತೆಯಾಗದೆ 30 ದಿನಗಳೇ ಕಳೆದಿವೆ, ಕೊರೋನಾ ಶಂಕಿತರ ಸಂಖ್ಯೆ ಕೂಡ ಕಡಿಮೆಯಾಗಿದೆ, ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಕೇಂದ್ರ ಸರ್ಕಾರ ಇನ್ನೂ ಉಡುಪಿ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಿಲ್ಲ.

ಮೇ 3ರಂದು 2ನೇ ಹಂತದ ಲಾಕ್‌ಡೌನ್‌ ಕೊನೆಗೊಳ್ಳುವ ಸಂದರ್ಭದಲ್ಲಿ ಸಮಗ್ರವಾಗಿ ದೇಶಕ್ಕೆ ಮಾರ್ಗದರ್ಶಿ ಸೂತ್ರಗಳು ಬದಲಾಗುವ ಸಾಧ್ಯತೆ ಇರುವುದರಿಂದ, ಅದಕ್ಕೆ ಅನುಗುಣವಾಗಿ ಉಡುಪಿ ಜಿಲ್ಲೆಯನ್ನು ಹಸಿರವಲಯ ಎಂದು ಘೋಷಿಸುವುದಕ್ಕೆ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರಲ್ಲಿ ದಾಖಲೆಯ ಮಳೆ: ಒಂದೇ ದಿನ 11 ಸೆಂ.ಮೀ ವರ್ಷಧಾರೆ!

ಕೊನೆಯ ಪಾಸಿಟಿವ್‌ ಪ್ರಕರಣ ಪತ್ತೆಯಾಗಿ 28 ದಿನ ಕಳೆದರೆ ಆ ಜಿಲ್ಲೆಯು ಹಸಿರು ವಲಯವಾಗುತ್ತದೆ, ಆ ಲೆಕ್ಕದಲ್ಲಿ ಉಡುಪಿ ಜಿಲ್ಲೆ ಹಸಿರು ವಲಯವಾಗಿದೆ. ಈ ನಡುವೆ ಭಾನುವಾರ ಮಂಡ್ಯದ ಕೊರೋನಾ ಸೋಂಕಿತನೊಬ್ಬ ಲಾರಿಯಲ್ಲಿ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ, ಪೆಟ್ರೋಲ್‌ ಬಂಕ್‌, ಟೋಲ್‌ಗೇಟ್‌, ಚೆಕ್‌ಪೋಸ್ವ್‌ ಗಳಲ್ಲಿರುವ ಸಿಬ್ಬಂದಿಗಳು ಆತನ ಸಂಪರ್ಕಕ್ಕೆ ಬಂದಿರುವುದರಿಂದ ಜಿಲ್ಲೆ ಮತ್ತೆ ಶಂಕಿತ ಜಿಲ್ಲೆಯಾಗಿದೆ. ಇದು ಜಿಲ್ಲೆಯನ್ನು ಅಧಿಕೃತವಾಗಿ ಹಸಿರು ವಲಯ ಎಂದು ಘೋಷಿಸುವುದಕ್ಕೆ ತೊಡಕಾಗುತ್ತಿದೆ ಎಂದೂ ಹೇಳಲಾಗುತ್ತಿದೆ.

ಕ್ಷುಲ್ಲಕ ಕಾರಣಕ್ಕೆ ಮಾಜಿ ಯೋಧ, ಪತ್ನಿಯ ಬರ್ಬರ ಹತ್ಯೆ..!

ಆದ್ರೂ ರಿಯಾಯ್ತಿ ನೀಡಲಾಗಿದೆ: ಆದರೆ ಉಡುಪಿ ಜಿಲ್ಲೆಯಲ್ಲಿ ಮೊದಲೇ ಹಸಿರು ವಲಯದಲ್ಲಿ ನೀಡಲಾಗುವ ಎಲ್ಲ ರಿಯಾಯತಿಗಳನ್ನು ಕೆಲವು ನಿರ್ಬಂದಗಳೊಂದಿಗೆ ನೀಡಲಾಗಿದೆ. ಗ್ರಾಮೀಣ ಕೈಗಾರಿಕೆಗಳು, ನಿರ್ಮಾಣ ಕೆಲಸಗಳು ಆರಂಭವಾಗಿವೆ. ಅಂಗಡಿಗಳು, ಹೊಟೇಲ್‌ಗಳು ಕಾರ್ಯಾರಂಭಿಸಿವೆ. ನಗರ ಪ್ರದೇಶದಲ್ಲಿ ಸಿನೆಮಾ ಥಿಯೇಟರ್‌, ಮಾಲ್‌, ಸೆಲೂನ್‌ ಇತ್ಯಾದಿಗಳನ್ನು ಬಿಟ್ಟು ಇತರ ಹೊಟೇಲ್‌, ಹಾರ್ಡ್‌ವೇರ್‌, ಸಿಮೆಂಟ್‌ ಇತ್ಯಾದಿ ಅಗತ್ಯ ಸೇವೆಗಳನ್ನು ಪುನಾರಂಭಿಸಲಾಗಿದೆ. ಮುಖ್ಯವಾಗಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟರಿ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ.

ಲ್ಯಾಬ್‌ ವರದಿ ವಿಳಂಬ

ಉಡುಪಿ ಜಿಲ್ಲೆಯಿಂದ ಬುಧವಾರ 11 ಮಂದಿಯ ಕೋವಿಡ್‌- 19 ಮಾದರಿಗಳನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಹಿಂದೆ ಕಳಹಿಸಲಾದ ಯಾವ ಮಾದರಿಯ ವರದಿಗಳು ಬುಧವಾರ ಬಂದಿಲ್ಲ, ಅಲ್ಲಿಗೆ ಪ್ರಯೋಗಾಲಯದಿಂದ ಉಡುಪಿ ಜಿಲ್ಲೆಯ 63 ವರದಿಗಳು ಬಾಕಿಯಾಗಿವೆ. ಬುಧವಾರ ಕಳುಹಿಸಲಾದ ಮಾದರಿಗಳಲ್ಲಿ ಉಸಿರಾಟದ ತೊಂದರೆ ಇರುವ 5, ಫä್ಲ ಸಮಸ್ಯೆಯ 4, ಕೋವಿಡ್‌- 19 ಶಂಕಿತ 1 ಮತ್ತು ಹಾಟ್‌ಸ್ಪಾಟ್‌ಗೆ ಹೋಗಿ ಬಂದ 1 ವ್ಯಕ್ತಿಯ ಮಾದರಿಗಳನ್ನು ಕಳುಹಿಸಲಾಗಿದೆ.