Udupi: ಸೇಂಟ್‌ ಮೇರಿಸ್ ದ್ವೀಪದಲ್ಲಿ ಅದ್ಧೂರಿ ಬೀಚ್ ಉತ್ಸವ: ಕ್ಲಿಫ್, ಸ್ಕೂಬಾ ಡೈವಿಂಗ್ ಆಕರ್ಷಣೆ

ಮಲ್ಪೆಯಲ್ಲಿ ಅದ್ದೂರಿಯಾಗಿ ಬೀಚ್ ಉತ್ಸವ ನಡೆಯುತ್ತಿದ್ದು, ಶನಿವಾರ ಎರಡನೇ ದಿನ ಸೈಂಟ್ ಮೇರಿಸ್ ದ್ವೀಪದಲ್ಲಿ ಕ್ಲಿಫ್ ಡೈವಿಂಗ್, ಸ್ಲಾಕ್ ಲೈನ್, ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಯಿತು. 

Udupi Grand beach festival at St Marys Island Cliff scuba diving attraction sat

ಉಡುಪಿ (ಜ.22):  ಮಲ್ಪೆಯಲ್ಲಿ ಅದ್ದೂರಿಯಾಗಿ ಬೀಚ್ ಉತ್ಸವ ನಡೆಯುತ್ತಿದ್ದು, ಶನಿವಾರ ಎರಡನೇ ದಿನ ಸೈಂಟ್ ಮೇರಿಸ್ ದ್ವೀಪದಲ್ಲಿ ಕ್ಲಿಫ್ ಡೈವಿಂಗ್, ಸ್ಲಾಕ್ ಲೈನ್, ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಯಿತು. 

ಈ ಚಟುವಟಿಕೆಗಳನ್ನು ವೀಕ್ಷಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಆರ್‌ಝಡ್ ನಿಯಮ ಸರಳೀಕರಣ ಮಾಡಿದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ. ಪ್ರಸ್ತುತ 1 ಗಂಟೆವರೆಗೆ ಮಾತ್ರ ದ್ವೀಪದಲ್ಲಿ ತಂಗಲು ಅವಕಾಶವಿದ್ದು, ಸಾಯಂಕಾಲದವರೆಗೆ ಉಳಿಯುವ ತಾತ್ಕಾಲಿಕ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ. ಉತ್ತರಾಖಂಡದ ಋಷಿಕೇಶದ ನಂತರ ಅತ್ಯಂತ ಉತ್ತಮವಾಗಿರುವ 26 ಅಡಿ ಎತ್ತರದ ಕ್ಲಿಫ್ ಡೈವಿಂಗ್ ಮಲ್ಪೆಯಲ್ಲಿದೆ ಎಂದರು.

ಉಡುಪಿ ಜಿಲ್ಲೆಗೆ 25 ವರ್ಷ: ಮಲ್ಪೆಯಲ್ಲಿ ಸಂಭ್ರಮದ ಬೀಚ್ ಉತ್ಸವ

ಕರಾವಳಿಗೆ ಮೊದಲ ಯಾಟ್ ಆಗಮನ: ಮುಂಬೈಯಿಂದ ಕರಾವಳಿಗೆ ಮೊದಲ ಬಾರಿ ಮಲ್ಪೆ ಬಂದರಿಗೆ ಪ್ರವಾಸಿಗರ ಐಶಾರಾಮಿ ಯಾಟ್ ಆಗಮಿಸಿದೆ. 1 ತಿಂಗಳು ಬಂದರಿನಲ್ಲಿ ತಂಗಲಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾದರೆ ಯಾಟ್ ಶಾಶ್ವತವಾಗಿ ಉಳಿಸುವ ಚಿಂತನೆಯಿದೆ. ಯಾಟ್ ನಲ್ಲಿ ಡೈನಿಂಗ್ ಹಾಲ್, ಬೆಡ್‌ರೂಂಗಳಿದ್ದು, 18 ಮಂದಿ ಏಕಕಾಲಕ್ಕೆ ಪ್ರವಾಸ ಮಾಡಬಹುದು. ಡಿನ್ನರ್ ಇನ್ ಯಾಚ್, ಲಂಚ್ ಇನ್ ಯಾಚ್ ಮೊದಲಾದ ಯೋಜನೆಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ ಎಂದರು.

 

ಹೃದಯ ಸಮಸ್ಯೆ ಇದ್ದವರು ಜಲಕ್ರೀಡೆ ಆಡಬೇಡಿ: ಸರ್ಫ್ ಲೈಫ್ ಸೇವಿಂಗ್ ಇಂಡಿಯಾದ ಡೈರೆಕ್ಟರ್ ಪಾರ್ಥ ವಾರನಾಶಿ ಮಾತನಾಡಿ, ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಕ್ಲಿಫ್ ಡೈವ್ ಗೆ ಹೇಳಿ ಮಾಡಿಸಿದ ಜಾಗವಿದೆ. ಎರಡು ದಿನಗಳ ಹಿಂದೆ ಈ ಜಾಗಕ್ಕೆ ಆಗಮಿಸಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದೇವೆ. ಹೃದಯ ಸಂಬಂಧಿ ಖಾಯಿಲೆ ಮತ್ತು ಆರೋಗ್ಯದಲ್ಲಿ ತೊಂದರೆ ಇರುವವರು ಈ ಜಲಕ್ರೀಡೆಯನ್ನು ಆಡಬಾರದು ಎಂದರು.

ಶಬರಿಮಲೆಗೆ ತೆರಳಿದ್ದ ಕೊಡಗು ಯುವಕ ಸಮುದ್ರ ಪಾಲು: ಕಣ್ಣೂರು ಬೀಚ್‌ನಲ್ಲಿ ಕಣ್ಮರೆ

ಈ ಬೀಚ್‌ ಉತ್ಸವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೇಂದ್ರ, ಬೀಚ್ ನಿರ್ವಹಣಾ ಸಮಿತಿ ಮುಖ್ಯಸ್ಥ ಸುದೇಶ್ ಶೆಟ್ಟಿ, ಸದಸ್ಯರಾದ ಮಂಜುಕೊಳ ಮೊದಲಾದವರು ಉಪಸ್ಥಿತರಿದ್ದರು. 

Latest Videos
Follow Us:
Download App:
  • android
  • ios