ಬೆಂಗಳೂರು (ಏ. 18)  ಪೇಜ್ ತ್ರೀ  ಮಾಸ ಪತ್ರಿಕೆಯ ಸಂಪಾದಕ ಕರುಣೇಶ  ಕೋವಿಡ್ 19ಗೆ ಬಲಿಯಾಗಿದ್ದಾರೆ.  ಮಲ್ಲಿಗೆ  ಆಸ್ಪತ್ರೆಯಲ್ಲಿ  ನಿಧನ ಹೊಂದಿದ್ದಾರೆ.   ಇನ್ನೊಂದು ಕಡೆ ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಮತ್ತು ಈಗ 0%ಲವ್ ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದ ಡಾ. ಡಿ.ಎಸ್. ಮಂಜುನಾಥ್ (ಅರ್ಜುನ್ ಮಂಜುನಾಥ್) ಅವರನ್ನು ಚೀನಾ ವೈರಸ್ ಬಲಿಪಡೆದಿದೆ.

ಗಿಣಿರಾಮ ಧಾರಾವಾಹಿಯ ನಟಿ ನಯನಾ ಅವರಿಗೂ ಕೊರೋನಾ ಸೋಂಕು ತಗುಲಿದೆ.  ನಟಿ, ಕಂಠದಾನ ಕಲಾವಿದೆ ಸುನೇತ್ರಾ ಪಂಡಿತ್ ಅವರ ಅಕ್ಕ ಕೊರೊನಾ ವೈರಸ್‌ನಿಂದ ನಿಧನರಾಗಿದ್ದಾರೆ. ಈ ಬಗ್ಗೆ ನಟ ರಮೇಶ್ ಪಂಡಿತ್ ಹಾಗೂ ಸುನೇತ್ರಾ ಮಾಧ್ಯಮಗಳ ಮುಂದೆ ಮಾತನಾಡಿ, ಅಷ್ಟೇ ಅಲ್ಲದೆ ಕೊರೊನಾ ವೈರಸ್ ಇಲ್ಲ, ಮಾಧ್ಯಮಗಳು ಹೆದರಿಸುತ್ತವೆ ಎಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಆಕ್ರೋಶಭರಿತ ನೋವು ತೋಡಿಕೊಂಡಿದ್ದರು.

ಲಾಕ್ ಡೌನ್ ಬದಲು ಈ ಸೂತ್ರದ ಮೊರೆ ಹೋದ ಸರ್ಕಾರ

ಸಿಎಂ ಬಿಎಸ್ ಯಡಿಯೂರಪ್ಪ,  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ಸೋಂಕು ಕಾಡಿದೆ.   ಅಕ್ಷಯ್ ಕುಮಾರ್, ಆಲಿಯಾ ಭಟ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳಿಗೂ ಕೊರೋನಾ ಕಾಟ ಕೊಟ್ಟಿತ್ತು.

  ಕರ್ನಾಟಕದಲ್ಲಿ ಪ್ರತಿದಿನ ಹದಿನೈದು ಸಾವಿರಕ್ಕೂ ಅಧಿಕ ಪ್ರಕರಣಗಳು ಕಂಡುಬರುತ್ತಿದ್ದರೆ ದೇಶದಲ್ಲಿ ಈ  ಲೆಕ್ಕ ಎರಡು ಲಕ್ಷಕ್ಕೆ ತಲುಪಿದೆ. ದೆಹಲಿ, ಮಹಾರಾಷ್ಟ್ರದಲ್ಲೆಂತೂ ಪರಿಸ್ಥಿತಿ ಕೈಮೀರಿದ್ದು ಆಕ್ಸಿಜನ್  ಲಭ್ಯತೆಗೂ ಹೋರಾಟದ ಬದುಕು ಶುರುವಾಗಿದೆ.

ಕೊರೋನಾ ಎರಡನೇ  ಅಲೆ ಅಬ್ಬರ ತನ್ನ ನಿಯಮಾವಳಿಗಳನ್ನು ಬದಲಾಯಿಸಿಕೊಂಡಿದೆ.   ತಲೆನೋವು, ಜ್ವರ, ಅತಿಸಾರ, ಕೆಮ್ಮು  ಲಕ್ಷಣಗಳು  ಕಂಡುಬಂದರೆ ಕೂಡಲೇ ಪರೀಕ್ಷೆಗೆ ಒಳಪಡುವುದು  ಒಳಿತು. ನೀವು  ನಿಮ್ಮನ್ನು ಕಾಪಾಡಿಕೊಳ್ಳಿ.. ಜತೆಗಿದ್ದವರನ್ನು ಕಾಪಾಡಿ ಎಂದಷ್ಟೆ ಕೇಳುಕೊಳ್ಳುವ ಪರಿಸ್ಥಿತಿ ಇದೆ. 

ವಯಸ್ಸು, ಲಿಂಗ, ಜಾತಿ, ಧರ್ಮ, ಕರ್ಮಗಳ ಹಂಗಿಲ್ಲದೆ ಕೊರೊನಾ ಯಾರಿಗೆ ಬೇಕಾದರೂ ತಗುಲಿಕೊಳ್ಳಬಹುದು. ಗುಂಪಿನಲ್ಲಿ ಗೋವಿಂದರಾಗದೆ ಮನೆಯೊಳಗೆ ಕ್ಷೇಮವಾಗಿರುವುದು ಒಳಿತು.  ಮಾಸ್ಕ್ ಧರಿಸಿ, ಅಗತ್ಯವಿದ್ದರೆ ಮಾತ್ರ ತಿರುಗಾಡಿ.. ಮನೆಯಲ್ಲೇ ಇರುವುದು ಸರ್ವ ರೀತಿಯಿಂದಲೂ ಸುರಕ್ಷಿತ.. ಮತ್ತೆ ಮತ್ತೆ ಹೇಳಲೇಬೇಕಾದ ಅನಿವಾರ್ಯ ಎಲ್ಲರದ್ದು.