ಕಲಬುರಗಿಯಲ್ಲಿ ಮ್ಯಾನ್‌ಹೋಲ್‌ ದುರಂತ: ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು

ಮೃತ ಕಾರ್ಮಿಕರ ಕುಟುಂಬಸ್ಥರಿಂದ ರಸ್ತೆ ತಡೆ| ದುರಂತಕ್ಕೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ| ಸಂಪರ್ಕಕ್ಕೆ ಸಿಗದ ಅಧಿಕಾರಿಗಳು| ನಿರ್ಲಕ್ಷವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರ ಆಗ್ರಹ| 

Two workers Dies during Working in Manhole in Kalaburagi grg

ಕಲಬುರಗಿ(ಜ.29): ನಗರದ ಕೈಲಾಸ ನಗರ ಬಡಾವಣೆಯಲ್ಲಿ ನಡೆದ ದುರಂತ ಘಟನೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ದುರಸ್ತಿಗೆ ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮ್ಯಾನ್‌ ಹೋಲ್‌ನಲ್ಲಿಯೇ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.

ಈ ದುರುಂತ ಘಟನೆಯಲ್ಲಿ ಸಾವನ್ನಪ್ಪಿರುವವರನ್ನು ಲಾಲ್‌ ಅಹ್ಮದ್‌ (25), ರಶೀದ್‌ (30) ಎಂದು ಗುರುತಿಸಲಾಗಿದೆ. ಕೈಲಾಸ್‌ನಗರದಲ್ಲಿ ಕೆಟ್ಟು ನಿತ್ತಂತಹ ಮ್ಯಾನಹೋಲ್‌ ದುರಸ್ತಿಗೆ ಇವರು ಮುಂದಾಗಿದ್ದಾರು. ಈಗಿರುವ ನಿಯಮಗಳ ಪ್ರಕಾರ ಒಳಚರಂಡಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಇಳಿಸದೆ ಸಕೀಂಗ್‌ ಬಳಸಬೇಕೆತ್ತು. ಆದರೆ, ಈ ಘಟನೆಯಲ್ಲಿ ಜಲಮಂಡಳಿಯವರೇ ಈ ಇಬ್ಬರು ಗುತ್ತಿಗೆ ಕಾರ್ಮಿಕರನ್ನು ಒಳಚರಂಡಿಗೆ ಇಳಿಯವಂತೆ ಆಗ್ರಹಿದ್ದಾರೆಂಬ ಬಲವಾದ ಆರೋಪಗಳು ಕೇಳಿಬಂದಿವೆ.

ಗುತ್ತಿಗೆ ಕಾರ್ಮಿಕರು ಇಳಿದಂತಹ ಒಳಚರಂಡಿ ಸುರಮಾರು 20 ಅಡಿ ಆಳವಿತ್ತು. ಬಹುದಿನಗಳಿಂದ ಕೆಟ್ಟುನಿಂತಿತ್ತು. ಇಂತಹ ಆಳವಾದ ಒಳಚರಂಡಿಯಲ್ಲಿ ಅಪಾಯವನ್ನು ಲೆಕ್ಕಿಸದೆ ಈ ಕಾರ್ಮಿಕರು ಒಳಗಿಳಿದಿದ್ದರು. ಮೊದಲು ಓರ್ವ ಕಾರ್ಮಿಕ ಡ್ರೈನೇಜ್‌ ಒಳಗೆ ಇಳಿದಿದ್ದಾನೆ. ಆತ ಉಸಿರುಗಟ್ಟಿ ಒಳಗೆ ಕುಸಿದಾಗ ಆತನನ್ನು ಉಳಿಸಲು ಮತ್ತೋರ್ವ ಕಾರ್ಮಿಕ ಇಳಿದಿದ್ದಾನೆ. ಆದರೆ, ಇಬ್ಬರೂ ಹೊರಗೆ ಬಾರದೆ ಒಳ ಚರಂಡಿಯಲ್ಲಿಯೇ ಮೃತಪಟ್ಟಿದ್ದಾರೆ. ಒಳಗೆ ಇಳಿದ ಇಬ್ಬರು ಕಾರ್ಮಿಕರು ಹೊರಗೆ ಬರಲು ತಡವಾಗಿದ್ದರಿಂದ ಇವರಿಬ್ಬರನ್ನು ರಕ್ಷಿಸಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದಾನೆ. ನಂತರವೇ ಅವರು ಒಳಗಡೆ ಮೃತಪಟ್ಟಿರುವುದು ಗೊತ್ತಾಗಿದೆ. ಅವರನ್ನು ರಕ್ಷಿಸಲು ಹೋದವನ ಸ್ಥಿತಿಯೂ ಗಂಭೀರವಾಗಿದೆ.

ಕಲಬುರಗಿ: ಹನ್ನೆರಡು ವರ್ಷದ ಬಾಲಕ ನೇಣಿಗೆ ಶರಣು

ಕುಟುಂಬಸ್ಥರಿಂದ ರಸ್ತೆತಡೆ:

ಒಳಚರಂಡಿ ಸ್ವಚ್ಛಗೊಳಿಸಲು ಇಳಿಯಲು ಹಿಂದೇಟು ಹಾಕಿದರೂ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಒಳಗೆ ಇಳಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಇದಕ್ಕೆ ಅಧಿಕಾರಿಗಳೇ ಕಾರಣವೆಂದು ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಜಿಮ್ಸಮ್ಸ್‌ ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮ್ಯಾನ್‌ಹೋಲ್‌ನಲ್ಲಿ ಬಿದ್ದು ದುರಂತ ಸಂಭವಿಸಿದ ಜಲಮಂಡಳಿಯ ಗುತ್ತಿಗೆ ಕಾರ್ಮಿಕರ ಸಾವಿಗೆ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಕಾರ್ಮಿಕರಿಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಜೀಮ್ಸ್‌ ಆಸ್ಪತ್ರೆಗೆ ತಂದಾಗ ಅಲ್ಲಿ ಸೇರಿದಂತಹ ನೂರಾರು ಜನ ಕುಟುಂಬಸ್ಥರೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿಯಲು ಒಲ್ಲೆಯೆಂದರೂ ಸಹ ದುರಸ್ತಿ ಕಾಮಗಾರಿ ಉಸ್ತುವಾರಿ ಹೊಣೆ ಹೊತ್ತವರು ಅವರನ್ನು ಆಗ್ರಹಪೂರ್ವಕವಾಗಿ ಒಳಗೆ ಇಳಿಸಿದ್ದಾರೆ. ಇದರಿಂದಲೇ ಕಾರ್ಮಿಕರಿಬ್ಬರ ಸಾವಾಗಿದೆ.

ಮೃತಪಟ್ಟ ಇಬ್ಬರೂ ಕಾರ್ಮಿಕರನ್ನು ಕಾಪಾಡಲು ಹೋದಂತಹ ಕಾರ್ಮಿಕ ಜೀವನ್ಮರಣ ಹೋರಾಟದಲ್ಲಿದ್ದಾನೆ. ಈ ದುರಂತಕ್ಕೆ ಜಲಮಂಡಳಿಯವರ ಅಲಕ್ಷತವೇ ಕಾರಣವಾಗಿದೆ. ಕೂಡಲೇ ಮೃತರ ಕುಟಂಬಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು. ನಿರ್ಲಕ್ಷವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂಪರ್ಕಕ್ಕೆ ಸಿಗದ ಅಧಿಕಾರಿಗಳು:

ಸದರಿ ಘಟನೆಗೆ ಪ್ರತಿಕ್ರಿಯೆ ಪಡೆಯಲು ಕನ್ನಡಪ್ರಭ ಜಲಮಂಡಳಿ ಮಹಾನಗರಪಾಲಿಕೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದವರನ್ನು ಸಂಪರ್ಕಿಸಲು ಯತ್ನಿಸಿದರಾದರೂ ಅವರಾರ‍ಯರೂ ಸಂಪರ್ಕಕ್ಕೆ ಸಿಗಲಿಲ್ಲ. ಜಲಮಂಡಳಿಯ ಕೆಲವು ಎಂಜಿನೀಯರ್‌ಗಳು ಫೋನ್‌ ಕರೆ ಸ್ವೀಕರಿಸಿದರೂ ಸಹ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
 

Latest Videos
Follow Us:
Download App:
  • android
  • ios