ಆಟೋಗೆ ಡಿಕ್ಕಿ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಗರದ ಕೆ.ಆರ್ ಪುರಂ ಬಳಿ ನಡೆದಿದೆ. ಕೆ.ಆರ್ ಪುರಂ ಆರ್.ಟಿ.ಓ ಕಚೇರಿ ಮುಂದೆ ಘಟನೆ ನಡೆದಿದೆ. ಆಟೋಗೆ ಡಿಕ್ಕಿ ಹೊಡೆದು ಇನ್ನೋವಾ ಕಾರು ಎಸ್ಕೇಪ್.
ಬೆಂಗಳೂರು(ಜ.07): ಆಟೋಗೆ ಡಿಕ್ಕಿ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಗರದ ಕೆ.ಆರ್ ಪುರಂ ಬಳಿ ನಿನ್ನೆ(ಶುಕ್ರವಾರ) ನಡೆದಿದೆ. ಕೆ.ಆರ್ ಪುರಂ ಆರ್.ಟಿ.ಓ ಕಚೇರಿ ಮುಂದೆ ಘಟನೆ ನಡೆದಿದೆ. ಆಟೋಗೆ ಡಿಕ್ಕಿ ಹೊಡೆದು ಇನ್ನೋವಾ ಕಾರು ಎಸ್ಕೇಪ್ ಆಗಿದೆ. ಪರಿಣಾಮ ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತರನ್ನ ಫಾಝಿಲಾ ಹಾಗೂ ತಸೀನಾ ಅಂತ ಗುರುತಿಸಲಾಗಿದೆ.
ಕೆ.ಆರ್.ಪುರಂ ಮಾರ್ಗದ ಮೂಲಕ ಒಟ್ಟು ಏಳು ಜನ ಆಟೋದಲ್ಲಿ ಹೋಗುತ್ತಿದ್ದರು. ಆಟೋ ಚಾಲಕ ಖಾಲೀದ್, ಪತ್ನಿ ತಾಸೀನಾ, ಸಹೋದರಿ ಫಾಝಿಲಾ ಹಾಗೂ ಇಬ್ಬರು ಮಕ್ಕಳು ಹೋಗುತ್ತಿದ್ದರು. ಈ ವೇಳೆ ಇನ್ನೋವಾ ಕಾರು ಅತಿಯಾದ ವೇಗದಲ್ಲಿ ಬಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿ ಎರಡು ವರ್ಷದ ಮಗುವಿಗೆ ಗಂಭೀರವಾದ ಗಾಯಗಳಾಗಿವೆ. ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಎಸಿ ಗಿತ್ತೆ
ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಆಟೋಗೆ ಗುದ್ದಿ ಪರಾರಿಯಾಗಿರುವ ಚಾಲಕ ಎಸ್ಕೇಪ್ ಆಗಿದ್ದಾನೆ. ಬ್ಲ್ಯಾಕ್ ಬಣ್ಣದ ಇನ್ನೋವಾ ಕಾರು ಅಂತ ತಿಳಿದು ಬಂದಿದೆ. ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ 9ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಬ್ಲ್ಯಾಕ್ ಕಲರ್ ಇನ್ನೋವಾ ಕಾರು ಸ್ಪೀಡ್‌ನಲ್ಲಿ ಬಂದು ಆಟೋಗೆ ಡಿಕ್ಕಿ ಹೊಡೆದಿದೆ. ಇಬ್ಬರು ಹೆಣ್ಮಕ್ಕಳು ಸ್ಪಾಟ್ ಡೆತ್ ಆಗಿದ್ದಾರೆ. ಆಟೋಗೆ ಕಾರು ಗುದ್ದಿ ಹೋಗಿದ್ದಾನೆ. ಒಂದು ಮಗುವಿಗೆ ಗಂಭೀರವಾದ ಗಾಯ ಆಗಿದೆ. ನಾನು ಡೆಲಿವರಿ ಮಾಡೋಕೆ ಹೋಗ್ತಿದ್ದೆ. ಸ್ಪೀಡ್ ನಲ್ಲಿ ಬಂದು ಆ್ಯಕ್ಸಿಡೆಂಟ್ ಮಾಡಿ ಹೋಗಿದಾನೆ ಅಂತ ಪ್ರತ್ಯಕ್ಷದರ್ಶಿ ಡೆಲಿವರಿ ಬಾಯ್ ಸೈಫ್ ಹೇಳಿದ್ದಾನೆ. ಕೆ.ಆರ್ ಪುರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
